Crime News

ರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಮೋಟಾರ್ ಸೈಕಲ್ ಡಿಕ್ಕಿ

ದಿನಾಂಕ 23-3-2019 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ  ಕುಂದ ರಸ್ತೆಯ ವಿಜಯ ಎಂಬುವವರ ಅಂಗಡಿಯ ಹತ್ತಿರ ಸಮಯ ರಾತ್ರಿ 8.00 ಗಂಟೆಗೆ ಗೋಣಿಕೊಪ್ಪ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಗಳು ವಾಹನ ಚಾಲಕರು ಮದ್ಯ ಸೇವನೆ ಮಾಡಿ ವಾಹನವನ್ನು ಚಾಲನೆ ಮಾಡುವವರನ್ನು ಪತ್ತೆ ಹಚ್ಚುವ ಸಲುವಾಗಿ ಕರ್ತವ್ಯ ದಲ್ಲಿದ್ದಾಗ ಪೊನ್ನಂಪೇಟೆ ಕಡೆಯಿಂದ ಕೆಎ 12 ಹೆಚ್ 7729 ರ ಮೋಟಾರು ಸೈಕಲ್ ನ ಸವಾರನು ಬರುತ್ತಿದ್ದು, ಆತನನ್ನು ನಿಲ್ಲುಸುವಂತೆ ಸೂಚನೆ ನಿಡಿದ್ದರೂ ಸಹ ನಿಲ್ಲಿಸದೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹೆಚ್‍.ಸಿ. ಸುಬ್ರಮಣಿ ರವರಿಗೆ  ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ರಸ್ತೆಯ ಮೇಲೆ ಬಿದ್ದು ಬಲಗೈಯ ಮುಂಗೈ ಮುರಿದು ಹೋಗಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಜೀಪು ಡಿಕ್ಕಿ:

ಮಡಿಕೇರಿ ನಗರದ ಗಣಪತಿ ರಸ್ತೆಯ ನಿವಾಸಿ ಫಹದ್ ಖಾನ್ ಎಂಬವರು ದಿನಾಂಕ 24-3-2019 ರಂದು ಮನ್ಸೂರ್ ಎಂಬವರ ಜೊತೆಯಲ್ಲಿ ಬಲೇನೋ ಕಾರಿನಲ್ಲಿ ಕುಶಾಲನಗರದ ಕಡೆಯಿಂದ ಮಡಿಕೇರಿ ಬರುತ್ತಿದ್ದು ಸಂಜೆ ಸುಂಟಿಕೊಪ್ಪದ ಕೆ.ಇ.ಬಿ. ಮುಂದುಗಡೆ ಕಾರನ್ನು ನಿಲ್ಲಿಸಿ ಮಾತನಾಡುತ್ತಿದ್ದಾದ ಸುಂಟಿಕೊಪ್ಪದ ಕಡೆಯಿಂದ ಬಂದ ಜೀಪೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬಲೇಮೀ ಕಾರಿಗೆ ಮತ್ತು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಮನ್ಸೂರ್ ರವರಿಗೆ ಡಿಕ್ಕಿ ಯಾಗಿ ಮನ್ಸೂರ್ ರವರು ಗಾಯಗೊಂಡು ಕಾರು ಸಹ ಜಖಂಗೊಂಡಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.