Crime News

ಅಕ್ರಮ ಜೂಜಾಟ

ದಿನಾಂಕ 24/03/2019ರಂದು ಸಿದ್ದಾಪುರ ನಗರದ ಮಾರುಕಟ್ಟೆಯ ಒಳಭಾಗದಲ್ಲಿ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸಿದ್ದಾಪುರ ಪಿಎಸ್‌ಐ ಎಂ.ಮಹೇಶ್‌ರವರು ಸ್ಥಳಕ್ಕೆ ತೆರಳಿ ಅಲ್ಲಿ ಕೆಲವರು ಸರ್ಕಾರದ ಪರವಾನಗಿಯಿಲ್ಲದೆ ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಜೂಜಾಡುತ್ತಿದ್ದ ಮಜೀದ್, ಸುಲೈಮಾನ್, ಸನಾಫ್, ಸಾಜು, ಇಸ್ಮಾಯಿಲ್, ಪ್ರವೀಣ್, ಬಾಷಾ, ಆಬಿದ್ ಮತ್ತು ಪ್ರಶಾಂತ್ ಎಂಬವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ಹಣ ರೂ. 8,490/- ನ್ನು ವಶಪಡಿಸಿಕೊಂಡು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ ಪ್ರಕರಣ

ವಿರಾಜಪೇಟೆ ನಗರದ ಬಂಗಾಳಿ ಬೀದಿ ನಿವಾಸಿ ಅಬ್ದುಲ್ಲಾ ಎಂಬವರ ಮಗ ರಫೀಕ್ ಎಂಬವರು ದಿನಾಂಕ 20/03/2019ರಂದು ಮನೆಯಿಂದ ಹೋದವರು ಇದುವರೆಗೂ ಮರಳಿ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.