Crime News

ಅಪಘಾತ ಪ್ರಕರಣ

           ದಿನಾಂಕ 25-03-2019 ರಂದು ಸೋಮವಾರಪೇಟೆ ತಾಲೋಕಿನ ಮಾದಾಪುರದ ನಿವಾಸಿ ವಿವೇಕ್ ಎಂಬುವವರು ಮನೆಯಿಂದ ಸುಂಟಿಕೊಪ್ಪಕ್ಕೆ ಮಾದಾಪುರ ರಸ್ತೆಗಾಗಿ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಎದುರಿನಿಂದ ಬಂದ ಪಿಕ್ ಅಪ್ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ವಿವೇಕ್ ರವರಿಗೆ ಗಾಯವಾಗಿದ್ದು  ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 26-03-2019 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಕಂಡಂಗಾಲ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕಾವೇರಪ್ಪರವರನ್ನು ವಶಕ್ಕೆ ಪಡೆದುಕೊಂಡು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನಕ್ಕೆ ಪ್ರಯತ್ನ

          ವಿರಾಜಪೇಟೆ ತಾಲೋಕಿನ ವೆಸ್ಟ್ ನೆಮ್ಮಲೆ ಗ್ರಾಮದ ನಿವಾಸಿ ಪೂಣಚ್ಚ ಎಂಬುವವರ ಮನೆಗೆ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲನ್ನು ಒಡೆದು ಒಳನುಗ್ಗಿ ಕಳ್ಳತನಕ್ಕೆ ಪ್ರಯತ್ನಿಸಿದ್ದು, ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ದಿನಾಂಕ 26-03-2019 ರಂದು ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

            ದಿನಾಂಕ 26-03-2019 ರಂದು ಸೋಮವಾರಪೇಟೆ ನಗರದಲ್ಲಿ ಆಟೋ ಚಾಲನೆ ಮಾಡಿಕೊಂಡಿರುವ ರಘುನಾಥ ಎಂಬುವವರು ಪ್ರಯಾಣಿಕರನ್ನು ಕರೆದುಕೊಂಡು ಕುಂದಳ್ಳಿಗೆ ಹೋಗುತ್ತಿರುವಾಗ ಶಾಂತಳ್ಳಿಯ ಕೂಡುರಸ್ತೆಯ ಯಡೂರು ಸೇತುವೆಯ ಬಳಿ ತಲುಪುವಾಗ ಎದುರಿನಿಂದ ಬಂದ ಆಟೋವನ್ನು ಅದರ ಚಾಲಕ ಮಂಜುನಾಥ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಎರಡೂ ಆಟೋ ಚಾಲಕರು ಹಾಗೂ ಇಬ್ಬರು ಪ್ರಯಾಣಿಕರಿಗೆ ಗಾಯವಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 26-03-2019 ರಂದು ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ವಾಸಿ ರತ್ನ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಶನಿವಾರಸಂತೆ ಠಾಣೆಯ ಪಿಎಸ್ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ರತ್ನ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ

           ದಿನಾಂಕ 25-03-2019 ರಂದು ಸೋಮವಾರಪೇಟೆ ತಾಲೋಕಿನ ಹಾನಗಲ್ಲು ಗ್ರಾಮದ ನಿವಾಸಿ ರಾಮಪ್ಪ ಎಂಬುವವರು ಸುಜಿತ್ ರವರೊಂದಿಗೆ ಹೋಂಡಾ ಆಕ್ಟಿವಾದಲ್ಲಿ ಶನಿವಾರಸಂತೆಯಿಂದ ಸೋಮವಾರಪೇಟೆಗೆ ಹೋಗುತ್ತಿರುವಾಗ ಹೆಗ್ಗುಳ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ರಸ್ತೆ ಬದಿಯಲ್ಲಿ ನಿಂತಿರುವಾಗ ಎದುರಿನಿಂದ ಬಂದ ಪಿಕ್ ಅಪ್ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಸ್ಕೂಟರ್ ಹಾಗೂ ರಾಮಪ್ಪನವರಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು ರಾಮಪ್ಪನವರಿಗೆ ಗಾಯವಾಗಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.