Crime News

ಪಾದಚಾರಿಗೆ ವಾಹನ ಡಿಕ್ಕಿ

           ದಿನಾಂಕ 27-03-2019 ರಂದು ಕರಡಿಗೋಡು ಗ್ರಾಮದ ನಿವಾಸಿಯಾದ ಬೇಬಿಯವರು ತನ್ನ ಮಗ ಕವನ್ ರವರೊಂದಿಗೆ ಮಡಿಕೇರಿ ನಗರದ ಮೈಸೂರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಟಾಟಾ ಏಸ್ ವಾಹನವು ಡಿಕ್ಕಿಯಾದ ಪರಿಣಾಮ ಬೇಬಿ ಹಾಗೂ ಕವನ್ ರವರು ಗಾಯಗೊಂಡಿದ್ದು ಈ ಸಂಬಂದ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

         ಸುಂಟಿಕೊಪ್ಪದ ಗದ್ದೆಹಳ್ಳದ ನಿವಾಸಿ ಪ್ರಕಾಶ್ ಎಂಬುವವರು ಲಾರಿಯನ್ನು ಕುಮಾರ್ ಎಂಬುವವರ ಮನೆಯ ಮುಂದೆ ನಿಲ್ಲಿಸಿದ ವಿಚಾರದಲ್ಲಿ ಕುಮಾರ್ ರವರು ನವೀನ ಮತ್ತು ಇತರ ಇಬ್ಬರೊಂದಿಗೆ ಸೇರಿ ಪ್ರಕಾಶ್ ರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.