Crime News

ಅಕ್ರಮ ಲಾಟರಿ ಮಾರಾಟ ಪತ್ತೆ

            ದಿನಾಂಕ 28-03-2019 ರಂದು ಮಡಿಕೇರಿ ನಗರದ ಇಂದಿರಾ ವೃತ್ತದ ಹತ್ತಿರ ಕುಮುದಂ ಎಂಟರ್ ಪ್ರೈಸಸ್ ಕಟ್ಟಡದ 4ನೇ ಅಂತಸ್ಥಿನಲ್ಲಿರುವ ಕೊಠಡಿಯೊಂದರಲ್ಲಿ ಕೇರಳ ರಾಜ್ಯದ ಲಾಟರಿ ಫಲಿತಾಂಶವನ್ನು ಆಧರಿಸಿ ಜೂಜಾಟ ಆಡುತ್ತಿರುವುದಾಗಿ ಮಡಿಕೇರಿ ನಗರ ಠಾಣೆಯ ಪಿಎಸ್ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರಿಗೆ ಹೋಗಿ ದಾಳಿ ಮಾಡಿ ಮಡಿಕೇರಿ ನಗರದ ನಿವಾಸಿಗಳಾದ ನಾಸಿರ್, ಅಬ್ದುಲ್ ಮಜೀದ್ ಮತ್ತು ನಾರಾಯಣರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

            ದಿನಾಂಕ 27-03-2019 ರಂದು ಪೊನ್ನಂಪೇಟೆ ನಗರದಲ್ಲಿ ಪೌರ ಕಾರ್ಮಿಕರಾದ ನಂಜುಂಡ, ಪರಮೇಶ, ಮಾ, ನಾಗಿ, ಜ್ಯೋತಿ ಹಾಗೂ ಪಾಪಮ್ಮನವರು ನಗರದ ಮುತ್ತಪ್ಪ ದೇವಸ್ಥಾನದ ಮುಂದೆ ಚರಂಡಿ ಸ್ವಚ್ಚತಾ ಕೆಲಸ ಮಾಡುತ್ತಿರುವಾಗ ಉತ್ತಯ್ಯ ಎಂಬುವವರು ಕಾರನ್ನು ಅಜಾಗರೂಮತೆಯಿಂದ ಚಾಲನೆ ಮಾಡಿ ಕೆಲಸ ಮಾಡಿಕೊಂಡಿದ್ದ ಉಮಾ ಮತ್ತು ನಾಗಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಾಯವಾಗಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರದಿಂದ ಬಿದ್ದು ವ್ಯಕ್ತಿಯ ದುರ್ಮರಣ

            ದಿನಾಂಕ 27-03-2019 ರಂದು ಗೋಣಿಕೊಪ್ಪಲುವಿನ ಅರುವತ್ತೋಕ್ಲು ಗ್ರಾಮದ ಮೇದಪ್ಪ ಎಂಬುವವರ ತೋಟದಲ್ಲಿ ಕಾಳು ಮೆಣಸನ್ನು ಅಭಿ ಎಂಬುವವರು ಕುಯ್ಯುತ್ತಿದ್ದಾಗ ಮರದಿಂದ ಬಿದ್ದು ಗಾಯಗೊಂಡವರು ಮೃತಪಟ್ಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 28-03-2019 ರಂದು ಸೋಮವಾರಪೇಟೆ ತಾಲೋಕಿನ ಹಾರಂಗಿ ಗ್ರಾಮದ ನಿವಾಸಿ ಭಾಗ್ಯಲಕ್ಷ್ಮಿ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಭಾಗ್ಯಲಕ್ಷ್ಮಿ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 28-03-2019 ರಂದು ಸೋಮವಾರಪೇಟೆ ತಾಲೋಕಿನ ಸುಂದರನಗರ ಗ್ರಾಮದ ನಿವಾಸಿ ರಮೇಶ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ರಮೇಶ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಪಾದಚಾರಿಗೆ ಬೈಕ್ ಡಿಕ್ಕಿ

            ದಿನಾಂಕ 25-03-2019 ರಂದು ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ಗಣೇಶ ಎಂಬುವವರು ಅಂಗಡಿಗೆ ಹೋಗಿ ವಾಪಾಸ್ಸು ಮನೆಗೆ ನಡೆದುಕೊಂಡು ಬರುತ್ತಿರುವಾಗ  ಕೂಡಿಗೆ ಕಡೆಯಿಂದ ನಾಸೀರ್ ಶರೀಪ್ ಎಂಬವರು  ಚಾಲನೆ ಮಾಡಿಕೊಂಡು ಬಂದ ಮೋಟಾರು ಸೈಕಲ್ ಸದರಿ ಗಣೇಶರವರಿಗೆ ಡಿಕ್ಕಿಯಾಗಿ  ಗಾಯಗೊಂಡಿದ್ದು ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪಘಾತ ಮಾಡಿ ವ್ಯಕ್ತಿಯ ಕೊಲೆ ಮಾಡಿದ ಪ್ರಕರಣ ಬಯಲು:

ದಿನಾಂಕ 19-03-2019 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ  ವ್ಯಾಪ್ತಿಯ ಮೇಕೇರಿ ಗ್ರಾಮದಲ್ಲಿ  ಮಾರುತಿ ಓಮ್ನಿ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓಮ್ನಿ ವ್ಯಾನಿನ ಚಾಲಕ ಸಂಪಾಜೆ ನಿವಾಸಿ ಬಾಲಚಂದ್ರ ಕಳಗಿರವರು  ಮೃತಪಟ್ಟಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿ, ತನಿಖೆ ಕೈಗೊಳ್ಳಲಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಚಿಕ್ಕಪ್ಪನವರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದ ಮೇರೆಗೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಗ್ರಾಮಾಂತರ ಠಾಣಾ ಪೊಲೀಸರು ತನಿಖೆಯನ್ನು ಕೈಗೊಂಡು  ದಿನಾಂಕ 29-03-2019 ರಂದು ಪ್ರಕರಣಕ್ಕೆ ಸಂಬಂದಿಸಿದಂತೆ ಮೂವರು ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ತನಿಖೆಯಲ್ಲಿ ಸದರಿ ಆರೋಪಿಗಳಾದ ಸಂಪಾಜೆ ನಿವಾಸಿಗಳಾದ  ಸಂಪತ್ ಕುಮಾರ್ @ ಸಂಪ, ತಂದೆ: ಅಪ್ಪು ಕುಂಞಿ, 34 ವರ್ಷ ವಾಸ ಸಂಪಾಜೆ, ಜಯನ್ @ ಜಗ್ಗು, ತಂದೆ: ಕೃಷ್ಣನ್, 34 ವರ್ಷ ಪ್ರಾಯ, ಗೌಳಿಬೀದಿ, ಮಡಿಕೇರಿ, ಹರಿಪ್ರಸಾದ್ @ ಹರಿ, ತಂದೆ: ಲೇಟ್ ಕೃಷ್ಣ, 36 ವರ್ಷ, ಸಂಪಾಜೆ. ರವರುಗಳು ಹಳೇ ದ್ವೇಷದಿಂದ  ದಿನಾಂಕ 19-03-2019 ರಂದು ಸಾಯಂಕಾಲ 06.30 ರ ಸಮಯದಲ್ಲಿ ಮೇಕೇರಿ ಕಡೆಯಿಂದ ಸಂಪಾಜೆಗೆ ಬಾಲಚಂದ್ರ ಕಳಗಿಯವರು ತಮ್ಮ ಓಮ್ನಿ ಕಾರ್ ನಂ KA-12 N- 4085 ರಲ್ಲಿ ಹೋಗುತ್ತಿರುವಾಗ ಆರೋಪಿತ ಜಯನ್ @ ಜಗ್ಗು ಈತನು ಎದುರಿನಿಂದ ವೇಗವಾಗಿ ಬಂದು ಓಮಿನಿ ಕಾರಿಗೆ ತಿರುವಿನಲ್ಲಿ ಡಿಕ್ಕಿಪಡಿಸಿ ಅಪಘಾತವಾಗಿದೆ ಎಂದು ಬಿಂಬಿಸಿ ಕೊಲೆ ಮಾಡಿದ್ದು ಕಂಡು ಬಂದ ಹಿನ್ನೆಲೆಯಲ್ಲಿ  ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.