Crime News

ವ್ಯಕ್ತಿಯ ಆತ್ಮಹತ್ಯೆ

          ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೋಕಿನ ಬಲ್ಲಮಾವಟಿ ಗ್ರಾಮದಲ್ಲಿ ವರದಿಯಾಗಿದೆ. ಬಲ್ಲಮಾವಟಿ ಗ್ರಾಮದ ನಾಣಯ್ಯ ಎಂಬುವವರು ದಿನಾಂಕ 28-03-2019 ರಂದು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರರಕಣ

         ದಿನಾಂಕ 28-03-2019 ರಂದು ಸುಂಟಿಕೊಪ್ಪದ ಮದುರಮ್ಮ ಬಡಾವಣೆಯ ನಿವಾಸಿ ಮೈಕಲ್ ಸನ್ನಿ ಪಾದುವಾ ಎಂಬುವವರು ಪತ್ನಿ ಜಾನ್ಸಿಯರನ್ನು ಸ್ಕೂಟರಿನ್ಲಲಿ ಹಿಂಬದಿ ಕೂರಿಸಿಕೊಂಡು ಕುಶಾಲನಗರಕ್ಕೆ ಹೋಗುತ್ತಿರುವಾಗ ಆನೆಕಾಡು ಎಂಬಲ್ಲಿಗೆ ತಲುಪುವಾಗ ೆದುರಿನಿಂದ ಬಂದ ಮೋಟಾರು ಸೈಕಲನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಮೈಕಲ್ ಸನ್ನಿ ಪಾದುವಾ ಮತ್ತು ಅವರ ಪತ್ನಿ ಜಾನ್ಸಿ ಹಾಗೂ ಮೋಟಾರು ಸೈಕಲಿನಲ್ಲಿದ್ದ ಇಬ್ಬರಿಗೂ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆಗೆ ಯತ್ನ

           ವಿರಾಜಪೇಟೆ ತಾಲೋಕಿನ ಬೋಯಿಕೇರಿಯ ನಿವಾಸಿಯಾದ ಜ್ಯೋತಿ ಎಂಬುವವರು ಹಾಲುಗುಂದ ಗ್ರಾಮದ ಸಾವಿತ್ರಿ ಮತ್ತು ಅಜಯ್ ಎಂಬುವವರಿಗೆ ಬೇರೆಯವರಿಂದ ಸಾಲ ಕೇಳಿ ಕೊಟ್ಟಿದ್ದ ಹಣವನ್ನು ವಾಪಾಸ್ಸು ಕೊಡುವಂತೆ ಕೇಳಿದಾಗ ಕೊಡದೇ ಸತಾಯಿಸುತ್ತಿದ್ದುದ್ದರಿಂದ ಜ್ಯೋತಿಯವರು ಮನನೊಂದು ದಿನಾಂಕ 27-03-2019 ರಂದು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು,ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

          ದಿನಾಂಕ 29-03-2019 ರಂದು ವಿರಾಜಪೇಟೆ ತಾಲೋಕಿನ ವೆಸ್ಟ್ ನೆಮ್ಮಲೆ ನಿವಾಸಿ ದಿನೇಶ ಎಂಬುವವರು ಶ್ರೀಮಂಗಲದಿಂದ ಟಿ. ಶೆಟ್ಟಿಗೇರಿ ಕಡೆಗೆ ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಎದುರಿನಿಂದ ಬಂದ ಮಾರುತಿ 800 ಕಾರನ್ನು ಅದರ ಚಾಲಕ ರತ್ನ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ದಿನೇಶನವರಿಗೆ ಗಾಯವಾಗಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.