Crime News

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಹೊಸೂರು ಗ್ರಾಮದ ಪೂದ್ರಿಮಾಡ ಬೋಪಣ್ಣ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಪಣಿ ಎರವರ ಮಣಿ ಎಂಬವರು ದಿನಾಂಕ 31-3-2019 ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಪತ್ನಿ ಶ್ರೀಮತಿ ಪಣಿಎರವರ ಮುತ್ತಿ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಮಹಿಳೆಯ ಕೊಲೆ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಕೇರಿ ಗ್ರಾಮದಲ್ಲಿ ವಾಸವಾಗಿದ್ದ ಎಂ.ಸಿ. ಉಷಾ ಎಂಬವರು ದಿನಾಂಕ 30-3-2019 ರಂದು ಮನೆಯಲ್ಲಿದ್ದು  ದಿನಾಂಕ 31-3-2019 ರಂದು ಅವರು ಮನೆಯ ಒಳಗೆ ಸಾವನಪ್ಪಿರುವುದು ಕಂಡು ಬಂದಿದ್ದು, ಪರಿಶೀಲಿಸಲಾಗಿ ಸದರಿಯವರ ಮೈಮೇಲೆ ಇದ್ದ ಒಡವೆಗಳು ಕಾಣೆಯಾಗಿದ್ದು ಕಂಡು ಬಂದಿದ್ದು ಯಾರೋ ವ್ಯಕ್ತಿಗಳು ಆಕೆಯನ್ನು ಕೊಲೆ ಮಾಡಿರುತ್ತಾರೆಂದು  ಮೃತೆ ಎಂ.ಸಿ. ಉಷಾರವರ ಸಹೋದರ ಮೈಸೂರಿನ ನಿವಾಸಿ ಎಂ.ಸಿ ಚರಣ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣ ಹಲ್ಲೆ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಹೊಸಕೋಟೆ ಗ್ರಾಮದ ನಿವಾಸಿಯಾದ ಪಿ.ಪಿ. ಲೀಲ ಎಂಬವರಿಗೆ ಅವರ ಪಕ್ಕದ ಮನೆಯ ನಿವಾಸಿ ಅಬಿದಾ ಎಂಬವರು ಬೈಕ್ ವಿಚಾರದಲ್ಲಿ ಜಗಳ ಮಾಡಿದ್ದು ಅಲ್ಲದೆ ಪಿ.ಪಿ. ಲೀಲರವರ ರವರ ಮೇಲೆ ಹಲ್ಲೆ ಮಾಡಿ ನೋವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಶ್ರೀಮಂಗಲ ಠಾಣಾ ಸರಹದ್ದಿನ ಬಿರುನಾಣಿ ಗ್ರಾಮದ ನಿವಾಸಿ ಕುಪ್ಪಣಮಾಡ ಬೋಪಣ್ಣ ಎಂಬವರ ತಂದೆ ಬೆಳ್ಳಿಯಪ್ಪ ಎಂಬವರು ದಿನಾಂಕ 30-3-2019 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಶ್ರೀಮಂಗಲ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದ ನಿವಾಸಿ ಚಿಮ್ಮಣಮಾಡ ಕುಶಾಲಪ್ಪ ಎಂಬವರು ದಿನಾಂಕ 31-3-2019 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರ ಮಗಳಾದ ಚೆರಿಯಪಂಡ ಬಿಂದುರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನ ವಿಚಾರದಲ್ಲಿ ಹಲ್ಲೆ:

ಶ್ರೀಮಂಗಲ ಠಾಣಾ ಸರಹದ್ದಿನ ತೆರಾಲು ಗ್ರಾಮದ ಬೊಟ್ಟಂಗಡ ಸೋಮಯ್ಯ ಎಂಬವರು ದಿನಾಂಕ 31-3-2019 ರಂದು ತಮ್ಮ ಮನೆಯಲ್ಲಿದ್ದ ವೇಳೆಯಲ್ಲಿ ಅದೇ ಗ್ರಾಮದ ಕಿಶು, ಕಿರಣ್, ಲೋಕೇಶ್ ಮತ್ತು ಹರೀಶ್ ರವರುಗಳು ಸೇರಿ ಪಂಚಾಯ್ತಿ ನೀರನ್ನು ಬಿಡುವ ವಿಚಾರದಲ್ಲಿ ಜಗಳ ಮಾಡಿ ಸೋಮಯ್ಯನವರ ಮೇಲೆ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಇಬ್ಬರು ವ್ಯಕ್ತಿಗಳ ದುರ್ಮರಣ:

ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಕೊಡಗರಳ್ಳಿ ಗ್ರಾಮದ ಗಣೇಶ ಹೊಟೇಲ್ ಮುಂಭಾಗದಲ್ಲಿ ದಿನಾಂಕ 31-3-2019 ರಂದು ಪಿಯೇಟ್ ಕಾರು ಮತ್ತು  ಕಾಂಕ್ರೀಟ್ ಮಿಕ್ಸ್‍ರ್ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಕೊಡಗರಳ್ಳಿ ಗ್ರಾಮದ ಇರ್ಪಾನ್ ಎಂಬವರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಸಮದ್ ರವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಗೆ ಬಿದ್ದು ಬಾಲಕಿ ಸಾವು:

ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದಲ್ಲಿ ನೆಲೆಸಿರುವ ಚೋಮ ಎಂಬವರ ಮಗಳು 14 ವರ್ಷ ಪ್ರಾಯದ ಭಾರತಿ ದಿನಾಂಕ 31-3-2019 ರಂದು ಆಟವಾಡುತ್ತಿದ್ದಾಗ ಆಕಸ್ಮಿಕ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿದ್ದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.