Crime News
ರಸ್ತೆ ಅಪಘಾತ
ದಿನಾಂಕ 01/04/2019ರಂದು ಮಡಿಕೇರಿ ನಗರದ ಟಿ.ಜಾನ್ ಲೇಔಟ್ ನಿವಾಸಿ ಆಲ್ಬರ್ಟ್ ಪಿ ಸೆಬಾಸ್ಟಿನ್ ಎಂಬವರು ರಿಕ್ಷಾವೊಂದರಲ್ಲಿ ಮಡಿಕೇರಿಯ ಬಸ್ ನಿಲ್ದಾಣದಿಂದ ಮನೆಗೆ ಹೋಗುತ್ತಿರುವಾಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಒಂದು ಪಿಕ್ಅಪ್ ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮುಂದಕ್ಕೆ ಚಾಲಿಸಿದ ಪರಿಣಾಮ ಪಿಕ್ಅಪ್ ವಾಹನವು ರಿಕ್ಷಾಕ್ಕೆ ಡಿಕ್ಕಿಯಾಗಿ ಮಗುಚಿಕೊಂಡಿದ್ದು ಆಲ್ಬರ್ಟ್ ಸೆಬಾಸ್ಟಿನ್ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಪ್ರಕರಣ
ದಿನಾಂಕ 31/03/2019ರ ರಾತ್ರಿ ವೇಳೆ ವಿರಾಜಪೇಟೆ ಬಳಿಯ ಬೇಟೋಳಿ ಗ್ರಾಮದ ಚಿಟ್ಟಡೆ ನಿವಾಸಿ ಕೆ.ಎಂ.ಮೂಸಾ ಎಂಬವರಿಗೆ ಅದೇ ಗ್ರಾಮದ ನಿವಾಸಿಗಳಾದ ಹಮೀದ್, ಮೊಹಮದ್, ಶಾಹಿದ್ ಮತ್ತು ನಿಸ್ಸಾರ್ ಎಂಬವರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವಿದ್ಯುತ್ ಸ್ಪರ್ಶ, ಮೂವರ ಸಾವು
ದಿನಾಂಕ 31/03/2019ರಂದು ಗೋಣಿಕೊಪ್ಪ ಬಳಿಯ ಅರುವತೊಕ್ಲು ಗ್ರಾಮದಲ್ಲಿರುವ ರಾಮಜನಮ್ ಎಂಬವರ ತೋಟದಲ್ಲಿ ಅಲ್ಯುಮಿನಿಯಂ ಏಣಿ ಬಳಸಿ ತೆಂಗಿನಕಾಯಿ ಕೀಳುತ್ತಿದ್ದ ಅಮ್ಮತ್ತಿ ಕಾವಾಡಿ ನಿವಾಸಿಗಳಾದ ಧರ್ಮಜ, ರವಿ, ಸತೀಶ ಎಂಬ ಕಾರ್ಮಿಕರು ಏಣಿ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಹರಿದು ದಾರುಣವಾಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಪ್ರಕರಣ
ದಿನಾಂಕ 31/03/2019ರಂದು ಶ್ರೀಮಂಗಲ ಬಳಿಯ ತೆರಾಲು ನಿವಾಸಿಗಳಾದ ಬೊಟ್ಟಂಗಡ ಕಿರಣ್, ಕಿಶೋರ್ ಮತ್ತು ಹರೀಶ್ ಎಂಬವರು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಎಂಬವರೊಂದಿಗೆ ಮಾತನಾಡುತ್ತಾ ನಿಂತಿರುವಾಗ ಅಲ್ಲಿಗೆ ಬಂದ ಬೊಟ್ಟಂಗಡ ಸೋಮಯ್ಯ, ರೂಪ, ಕಾರ್ಯಪ್ಪ, ಗಣಪತಿ, ರಘು ಮತ್ತು ಪೊನ್ನಮ್ಮ ಎಂಬವರು ಏಕಾ ಏಕಿ ಜಗಳ ತೆಗೆದು ಕತ್ತಿ ಹಾಗೂ ಕಬ್ಬಿಣದ ರಾಡಿನಿಂದ ಕಿರಣ್, ಕಿಶೋರ್ ಮತ್ತು ಹರೀಶ್ರವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹಲ್ಲೆ ಪ್ರಕರಣ
ದಿನಾಂಕ 01/04/2019ರಂದು ಕುಶಾಲನಗರ ಬಳಿಯ ಮುಳ್ಳುಸೋಗೆ ನಿವಾಸಿ ಎಂ.ಎಸ್.ಶಿವಾನಂದ ಎಂಬವರು ಕುಶಾಲನಗರದ ಕನ್ನಿಕಾ ಹೋಟೆಲಿಗೆ ಹೋಗುತ್ತಿರುವಾಗ ಹೋಟೆಲಿನಿಂದ ಹೊರಗೆ ಬರುತ್ತಿದ್ದ ಮುಳ್ಳುಸೋಗೆ ನಿವಾಸಿ ರಾಜೇಶ್ ಎಂ.ಎಸ್. ಎಂಬವರು ಶಿವಾನಂದರವರನ್ನು ಕುರಿತು ಬೈದು ನಿಂದಿಸಿ ಅಲ್ಲೇ ಇದ್ದ ಪ್ಲಾಸ್ಟಿಕ್ ಕುರ್ಚಿಯಿಂದ ಶಿವಾನಂದರವರ ಭುಜಕ್ಕೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮರದಿಂದ ಬಿದ್ದು ವ್ಯಕ್ತಿ ಸಾವು
ದಿನಾಂಕ 01/04/2019ರಂದು ಶನಿವಾರಸಂತೆ ಬಳಿಯ ಒಡೆಯನಪುರ ನಿವಾಸಿ ವಿ.ಕೆ.ಸಂಜೀವ್ ಎಂಬವರು ಚಿಕ್ಕಕೊಳತ್ತೂರು ಗ್ರಾಮದಲ್ಲಿ ಕಾಳು ಮೆಣಸು ಕುಯ್ಯಲು ಹೋಗಿದ್ದು, ಕಾಳು ಮೆಣಸು ಕುಯ್ಯುವ ಸಂದರ್ಭ ಕಾಲು ಜಾರಿ ಮರದಿಂದ ಬಿದ್ದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.