Crime News

ಕಳವು ಪ್ರಕರಣ

        ಮಡಿಕೇರಿ ತಾಲೋಕಿನ ಮೂರ್ನಾಡು ನಗರದಲ್ಲಿ ಜಾಸಿರ್ ಎಂಬುವವರು ಮೆಟ್ರೋ ಟ್ರೇಡರ್ಸ್ ಎಂಬ ಕಾಫಿ, ಕರಿಮೆಣಸು ಖರೀದಿ ಮಳಿಗೆಯನ್ನು ಹೊಂದಿದ್ದು, ದಿನಾಂಕ 30-03-2019 ರಂದು ಜಾಸಿರ್ ರವರು ಮದ್ಯಾಹ್ನ ಅಂಗಡಿಯ ಬಾಗಿಲನ್ನು ಹಾಕಿ ಮನೆಗೆ ಊಟಕ್ಕೆ ಹೋಗಿದ್ದಾಗ ಅಂಗಡಿಗೆ ಯಾರೋ ನುಗ್ಗಿ ಡ್ರಾಯರ್ ನಲ್ಲಿದ್ದ 96,000 ರೂ ನಗದು ಹಣವನ್ನು ಕಳ್ಳತನ ಮಾಡಿದ್ದು, ಈ ಬಗ್ಗೆ ಜಾಸಿರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

         ದಿನಾಂಕ 31-03-2019 ರಂದು ಕೇರಳ ರಾಜ್ಯದ ಕಾಸರಗೋಡುವಿನ ನಿವಾಸಿ ಮಹಮ್ಮದ್ ಹ್ಯಾರಿಸ್ ಎಂಬುವವರು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಕಾಸರಗೋಡುವಿಗೆ ನೂರುದ್ದೀನ್ ಮತ್ತು ತಾಯಿ ರುಖಿಯಾಬಿರವರೊಂದಿಗೆ ಹೋಗುತ್ತಿರುವಾಗ ಕಾಟಕೇರಿ ಎಂಬಲ್ಲಿಗೆ ತಲಪುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ರುಖಿಯಾಬಿಯವರಿಗೆ ಗಾಯವಾಗಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

         ದಿನಾಂಕ 31-03-2019 ರಂದು ವಿರಾಜಪೇಟೆ ತಾಲೋಕಿನ ಕೈಕೇರಿ ಗ್ರಾಮದ ನಿವಾಸಿಯಾದ ರಾಜುರವರು ಮನುರವರನ್ನು ಸ್ಕೂಟರಿನಲ್ಲಿ ಹಿಂಬದಿ ಕೂರಿಸಿಕೊಂಡು ವಿರಾಜಪೇಟೆಯಿಂದ ಮನೆಗೆ ಹೋಗುತ್ತಿರುವಾಗ ಕೊಳ್ತೋಡು ಬೈಗೋಡು ಎಂಬಲ್ಲಿಗೆ ತಲುಪುವಾಗ ಸ್ಕೂಟರನ್ನು ಚಾಲನೆ ಮಾಡುತ್ತಿದ್ದ ರಾಜುರವರು ನಿಯಂತ್ರ ತಪ್ಪಿ ಬಿದ್ದ ಪರಿಣಾಮ ರಾಜುರವರಿಗೆ ಗಾಯವಾಗಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

         ದಿನಾಂಕ 02-04-2019 ರಂದು ಸೋಮವಾರಪೇಟೆ ತಾಲೋಕಿನ ಚೌಡ್ಲು ಗ್ರಾಮದ ನಿವಾಸಿಯಾದ ಉಮೇಶರವರೊಂದಿಗೆ ಪ್ರಕಾಶ ಮತ್ತು ಮಹದೇವರವರು ಹಣದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 02-04-2019 ರಂದು ಗೋಣಿಕೊಪ್ಪ ಠಾಣೆಯ ಪಿಎಸ್ಐರವರಿಗೆ ಮಾಯಮುಡಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾರಾಯಣರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರರಕಣ

             ದಿನಾಂಕ 01-04-2019 ರಂದು ವಿರಾಜಪೇಟೆ ತಾಲೋಕಿನ ತಿತಿಮತಿಯ ನಿವಾಸಿ ಜ್ಯೋತಿ ಎಂಬುವವರು ಸ್ಕೂಟರಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಜ್ಯೋತಿಯವರ ಕಾಲು ಮುರಿದಿದ್ದು, ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ಮಡಿಕೇರಿ ತಾಲೋಕಿನ ಕೋಡಂಬೂರು ಗ್ರಾಮದ ನಿವಾಸಿಯಾದ ಅಶೋಕ್ ರವರು ತಮ್ಮ ಲೈನ್ ಮನೆಗೆ ದಿನಾಂಕ 02-04-2019 ರಂದು ಹೋದಾಗ ಯಾರೋ ಲೈನ್ ಮನೆಯ ಬಾಗಿಲನ್ನು ಒಡೆದು ನುಗ್ಗಿ ಒಣಗಿಸಿ ಇಟ್ಟಿದ್ದ ಕರಿಮೆಣಸಿನಲ್ಲಿ ಅಂದಾಜು 180 ಕೆಜಿ ಯಷ್ಟು ಮೆಣಸನ್ನು ಕಳವು ಮಾಡಿರುವುದು ಕಂಡು ಬಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.