Crime News

ಬಾಗಿಲು ಮುರಿದು ಪೂಜಾ ಸಾಮಾಗ್ರಿ ಕಳವು:

ಮಡಿಕೇರಿ ನಗರದ  ಜೂನಿಯರ್ ಕಾಲೇಜು ಬಳಿ ವಾಸವಾಗಿರುವ ಎಂ.ಕೆ. ರಮೇಶ್ ಎಂಬವರು ದಿನಾಂಕ 1-4-2019 ತಮ್ಮ ಮಗಳಿಗೆ ಉಷಾರಿಲ್ಲದ ಕಾರಣ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಹೋಗಿದ್ದು ಇದೇ ಸಂದರ್ಭದಲ್ಲಿ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ಮುರಿದು ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿಟ್ಟಿದ್ದ ಸುಮಾರು 20,000/- ರೂ ಮೌಲ್ಯದ ಕಂಚು ಮತ್ತು ತಾಮ್ರದ ಸಾಮಾಗ್ರಿಗಳನ್ನು ಮತ್ತು ಪೂಜಾ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜೂಜಾಟ ಪ್ರಕರಣ ದಾಖಲು:

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣಿಮಾನಿ, ಭಾಗಮಂಡಲ ಗ್ರಾಮದ ದೇವಂಗೋಡಿ ಭರತ್ ಎಂಬವರ ಮನೆಯ ಅಂಗಳದಲ್ಲಿ ಅಣ್ಣಯ್ಯ ಹಾಗು ಇತರೆ 7 ಜನರು ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟು ಜೂಜಾಟವಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಭಾಗಮಂಡಲ ಠಾಣಾಧಿಕಾರಿ ಲೋಹಿತ್ ಕುಮಾರ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಬಳಸಿದ ರೂ.6,220/- ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿರುತ್ತಾರೆ.

ಪಾದಚಾರಿಗೆ ಬೈಕ್ ಡಿಕ್ಕಿ:

ಶನಿವಾರಸಂತೆ ಠಾಣೆ ಸರಹದ್ದಿನ ನಾಕಲಗೂಡು ಗ್ರಾಮದಲ್ಲಿ ದಿನಾಂಕ 3-4-2019 ರಂದು ಕೆ.ಬಿ. ಮಧು ಎಂಬವರು ಬಸ್ಸು ತಂಗುದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಹಿಂದಿನಿಂದ ಬಂದ ಮೋಟಾರ್ ಸೈಕಲ್ ಅವರಿಗೆ  ಡಿಕ್ಕಿಯಾದ ಪರಿಣಾಮ ಸದರಿಯವರಿಗೆ ನೋವಾಗಿದ್ದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಶನಿವಾರಸಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕತ್ತಿಯಿಂದ ಕಡಿದು ವ್ಯಕ್ತಿಯ ಕೊಲೆಗೆ ಯತ್ನ:

ಸೋಮವಾರಪೇಟೆ ತಾಲೋಕು, ಬಾಣವಾರ ಗ್ರಾಮದ ಜಯಣ್ಣ ಎಂಬವರು ದಿನಾಂಕ 3-4-2019 ರಂದು ಕೆಲಸ ಮುಗಿಸಿ ಎರಪರೆ ಗ್ರಾಮದ ಬಸ್ಸು ತಂಗುದಾಣದ ಬಳಿ ಬಂದಾಗ  ಬಾಣವಾರದ ದುಷ್ಯಂತ್ ಎಂಬವರು ಅಲ್ಲಿಗೆ ಬಂದು ಗೆಣಸು ಲೋಡ್ ಮಾಡುವ ವಿಚಾರದಲ್ಲಿ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ಜಯಣ್ಣರವರ ತಲೆಯ ಎಡಭಾಗಕ್ಕೆ ಕಡಿದು ಗಾಯಪಡಿಸಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:

ಸೋಮವಾರಪೇಟೆ ತಾಲೋಕು ಯಡುಂಡೆ ಗ್ರಾಮದ ದುಷ್ಯಂತ್ ರವರು ದಿನಾಂಕ 03/04/2019 ರಂದು ಸಮಯ 10:15 ಪಿ ಎಂ ಗೆ   ಹೊಲಕ್ಕೆ  ಎರಪರೆ  ಗ್ರಾಮದ ಬಸ್ಸು ತಂಗುದಾಣದ ಬಳಿ ನೆಡೆದುಕೊಂಡು ಹೋಗುತ್ತಿರುವಾಗ್ಗೆ  ಜಯಣ್ಣ ಎಂಬವರು ಗೆಣಸು  ಲೋಡ್ ಮಾಡುವ ವಿಚಾರದಲ್ಲಿ ಜಗಳ ತೆಗೆದು  ಕಲ್ಲಿನಿಂದ  ತುಟಿಗೆ  ಹೊಡೆದು ಗಾಯ ಪಡಿಸಿದ್ದಲ್ಲದೇ  ಅತನ ಜೊತೆಯಲ್ಲಿದ್ದ ಪವನ್ ರವರು ಸಹ ದೊಣ್ಣೆಯಿಂದ  ಎಡ ರೆಟ್ಟೆಗೆ ಹೊಡೆದು  ನೋವು ಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.