Crime News

ವಂಚನೆ ಪ್ರಕರಣ

ಚೇರಂಬಾಣೆ ಬಳಿಯ ಬೇಂಗೂರು ನಿವಾಸಿ ಕುಂಚೆಟ್ಟಿರ ಎಸ್ ಪೆಮ್ಮಯ್ಯ ಎಂಬವರಿಗೆ ಸೇರಿದ ಸುಮಾರು 1.60 ಏಕರೆ ಜಾಗವನ್ನು ಕುಂಚೆಟ್ಟಿರ ಸಿ ಗಣೇಶ್‌ ಮತ್ತು ಕುಂಚೆಟ್ಟಿರ ಪೂಣಚ್ಚ ಎಂಬವರು ಕುಂಚೆಟ್ಟಿರ ಪೆಮ್ಮಯ್ಯನವರ ಸಹಿಯನ್ನು ನಕಲು ಮಾಡಿ ಅವರ ಹೆಸರಿಗೆ ವರ್ಗಾಯಿಸಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 04/04/2019ರಂದು ಶ್ರೀಮಂಗಲ ಬಳಿಯ ವೆಸ್ಟ್‌ ನೆಮ್ಮಲೆ ನಿವಾಸಿ ಮಣಿಕಂಠ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.