Crime News

ವ್ಯಕ್ತಿಯ ಶವ ಪತ್ತೆ

ಮಡಿಕೇರಿ ಸಮೀಪದ ಕಡಗದಾಳು ಗ್ರಾಮದ ನಿವಾಸಿ ಮುತ್ತಪ್ಪ ಎಂಬವರು ದಿನಾಂಕ 04/04/2019ರಿಂದ ಕಾಣೆಯಾಗಿದ್ದು ದಿನಾಂಕ 05/04/2019ರಂದು ಮುತ್ತಪ್ಪರವರ ಶವವು ಗ್ರಾಮದ ಅಯ್ಯಪ್ಪ ಎಂಬವರ ಕೆರೆಯಲ್ಲಿ ಪತ್ತೆಯಾಗಿದ್ದು ಮುತ್ತಪ್ಪನವರು ಬಟ್ಟೆ ಒಗೆಯಲೆಂದು ಕೆರೆಗೆ ಹೋಗಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿರಬಹುದೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಪತ್ತೆ

ದಿನಾಂಕ 05/04/2019ರಂದು ಪೊನ್ನಂಪೇಟೆ ವ್ಯಾಪ್ತಿಯ ತಿತಮತಿ ಗ್ರಾಮದ ದೇವಮಚ್ಚಿ ಎಂಬಲ್ಲಿನ ಬಸ್‌ ತಂಗುದಾಣದಲ್ಲಿ ಮಂಜುನಾಥ ಮತ್ತು ನಾಗರಾಜ ಎಂಬವರು ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ತರುತ್ತಿದ್ದುದನ್ನು ಗೋಣಿಕೊಪ್ಪ ಠಾಣೆಯ ಪಿಎಸ್‌ಐ ಬಿ.ಎಸ್.ಶ್ರೀಧರ್‌ರವರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಮಡಿಕೇರಿಯ ಮ್ಯಾನ್ಸ್‌ ಕಾಂಪೌಂಡ್‌ ಬಳಿಯ ನಿವಾಸಿ ಕೆ.ಕೆ.ಬೆಳ್ಳಿಯಪ್ಪ ಎಂಬವರು ಅವರ ಸಿಎನ್‌ಜೆಡ್‌-0784 ಸಂಖ್ಯೆ ಜೀಪನ್ನು ಸುಮಾರು ಏಳೆಂಟು ತಿಂಗಳ ಹಿಂದೆ ಸುಂಟಿಕೊಪ್ಪ ಬಳಿಯ ಪೊನ್ನತ್‌ಮೊಟ್ಟೆ ನಿವಾಸಿ ಉನೈಸ್‌ ಎಂಬವರಿಗೆ ಮಾರಾಟ ಮಾಡಿದ್ದು ಉನೈಸ್‌ರವರು ಜೀಪಿನ ದಾಖಲಾತಿಗಳನ್ನು ಅವರ ಹೆಸರಿಗೆ ವರ್ಗಾಯಿಸಿಕೊಳ್ಳದೆ ಸುಂಟಿಕೊಪ್ಪದ ಗದ್ದೆಹಳ್ಳ ನಿವಾಸಿ ರಫೀಕ್‌ ಎಂಬವರೊಂದಿಗೆ ಸೇರಿಕೊಂಡು ಬೆಳ್ಳಿಯಪ್ಪನವರಿಂದ ಖರೀದಿಸಿದ ಜೀಪಿನ ಇಂಜಿನ್‌ ಅನ್ನು ಬೇರೆ ಜೀಪಿನ ಚಾಸಿಗೆ ಆಳವಡಿಸಿಕೊಂಡು ಬೆಳ್ಳಿಯಪ್ಪನವರಿಂದ ಖರೀದಿಸಿದ ಜೀಪಿನ ಸಂಖ್ಯೆಯನ್ನು ಅಕ್ರಮವಾಗಿ ಬೇರೆ ಜೀಪಿಗೆ ಆಳವಡಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ, ವ್ಯಕ್ತಿ ಸಾವು

ದಿನಾಂಕ 05/04/2019ರಂದು ಗುಡ್ಡೆಹೊಸೂರು ಬಳಿಯ ಬೊಳ್ಳೂರು ನಿವಾಸಿ ವಿ.ಬಿ.ನಾಗರಾಜ ಎಂಬವರು ಗುಡ್ಡೆಹೊಸೂರಿನ ಸವಿರುಚಿ ಹೋಟೆಲಿನ ಮುಂದೆ ನಿಂತು ಕೊಂಡಿರುವಾಗ ಕುಶಾಲನಗರ ಕಡೆಯಿಂದ ಕೆಎ-45-ವೈ-8309ರ ಬೈಕನ್ನು ಅದರ ಚಾಲಕ ಸತೀಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಡಿಕೇರಿ ಕಡೆಯಿಂದ ಬರುತ್ತಿದ್ದ ಒಂದು ಲಾರಿಯ ಬಲಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಚಾಲಕ ಸತೀಶ್‌ ಎಂಬವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಹಿಂಬದಿ ಸವಾರ ಶಿವಪ್ಪ ಎಂಬವರಿಗೆ ಗಂಭೀರ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.