Crime News

ಅಪರಿಚಿತ ವ್ಯಕ್ತಿ ಶವ ಪತ್ತೆ, ಕೊಲೆ ಶಂಕೆ:

ಮಡಿಕೇರಿ ನಗರ ಸಭೆಯ ಕಸ ವಿಲೇ ಮಾಡುವ ವಾಹನದಲ್ಲಿ ಚಾಲಕನಾಗಿ ಕೆಲಸ ಮಾಡುವ ಕೆ.ಆರ್. ವಸಂತ್ ಕುಮಾರ್‍ ರವರು ದಿನಾಂಕ 5-4-2019 ರಂದು ಎಂದಿನಂತೆ ಪೌರ ಕಾರ್ಮಿಕ ತಿಪ್ಪೇಸ್ವಾಮಿರವ ರೊಂದಿಗೆ ಮಡಿಕೇರಿ ನಗರದ ಡಿಹೆಚ್‍ಒ ರವರ ಕಛೇರಿ ಬಳಿ ಇರುವ    ಪಾರ್ಕಿನ ಒಳಗಡೆ ಕಾಂಪೌಂಡ್‍ ಬಳಿ ಕಸವನ್ನು ವಾಹನದಲ್ಲಿ ತುಂಬಲು ಹೋದಾಗ  ಅಲ್ಲಿ  ಅಂದಾಜು 55 ವರ್ಷ ಪ್ರಾಯದ ಒಬ್ಬ ಅಪರಿಚಿತ ವ್ಯಕ್ತಿಯ ಶವ  ಪತ್ತೆಯಾಗಿದ್ದು, ಸದರಿ ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿ ಶವವನ್ನು ಸುಟ್ಟಿರುವುದು ಕಂಡುಬಂದಿರುವುದಾಗಿ  ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.