Crime News

ಮಹಿಳೆ ಅಸ್ವಾಭಾವಿಕ ಸಾವು:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೆಬ್ಬೆಟ್ಟಗೇರಿ ಗ್ರಾಮದ ಬಿ.ಸಿ. ವನಿತ ಎಂಬವರ ತಾಯಿ 60 ವರ್ಷ ಪ್ರಾಯದ ಗಿರಿಜ ಎಂಬವರು ದಿನಾಂಕ 6-4-2019 ರಂದು ಊಟಕ್ಕೆ ಸಿದ್ದಪರಿಸುವ ವೇಳೆ ಸಾರಿನ ಪಾತ್ರೆಯೊಳಗೆ ಮುಗ್ಗರಿಸಿ ಮುಖವು ಪಾತ್ರೆಯೊಳಗೆ ಹೋಗಿ ಸುಧಾರಿಸಿಕೊಳ್ಳಲು ಸಾದ್ಯವಾಗದೇ ಸಾವನಪ್ಪಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ಕರ್ತವ್ಯದಲ್ಲಿದ ಪೊಲೀಸ್ ಮೇಲೆ ಹಲ್ಲೆಗೆ ಯತ್ನ:

ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಯ್ಯನಕೋಟೆ ಗ್ರಾಮದ ಗಣಪತಿ ದೇವಸ್ಥಾನದ ಸಾರ್ವಜನಿಕ ರಸ್ತೆಯಲ್ಲಿ ಅದೇ ಗ್ರಾಮದ ಸಿ.ಟಿ. ದಿನೇಶ್ ಹಾಗು ಹೆಚ್‍.ಆರ್. ರಮೇಶ್ ಎಂಬವರು ತೆಂಗಿನಕಾಯಿ ಇಟ್ಟು ಕಲ್ಲು ಎಸೆಯುತ್ತಿದ್ದು ಇದನ್ನು ಪ್ರಶ್ನಿಸಿದ ಸಿದ್ದಾಪುರ ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಸಮವಸ್ತ್ರದಲ್ಲಿದ್ದ ಆರ್.ಎಂ. ಭರತ್  ಹಾಗು ಸಂತೋಷ್ ಚೌಹಾಣ್ ಎಂಬವರನ್ನು ಅವಾಚ್ಯವಾಗಿ ನಿಂದಿಸಿ ಸಂತೋಷ್ ಚೌಹಾಣ್ರವರ ಕತ್ತಿನ ಪಟ್ಟಿಯನ್ನು ಹಿಡಿದು ತಳ್ಳಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಸಿದ್ದಾಪುರ ಠಾಣಾ ಸರಹದ್ದಿನ  ಹಾಲುಗುಂದ ಗ್ರಾಮದ ಕಂಡ್ರತಂಡ ಸುಬ್ಬಯ್ಯನವರ ಕಾಫಿ ತೋಟದ ಲೈನುಮನೆಯಲ್ಲಿ ವಾಸವಾಗಿದ್ದ ಪಂಜರಿ ಎರವರ ಮಲ್ಲ ಎಂಬವರ ಮಗ 16 ವರ್ಷ ಪ್ರಾಯದ ಸಿದ್ದು  ದಿನಾಂಕ 5-4-2019 ರಂದು ಪ್ರೀತಿ ಪ್ರೇಮ ವಿಚಾರದಲ್ಲಿ ಮನನೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರ್ ಅಪಘಾತ ವ್ಯಕ್ತಿ ಸಾವು:

ವಿರಾಜಪೇಟೆ ಸಮೀಪದ ಆರ್ಜಿಗ್ರಾಮದ ನಿವಾಸಿ ಸುಧಾಕರ ಎಂಬವರ  ಅಕ್ಕನ ಮಗ ವಿನೋದ್ ಕುಮಾರ್ ದಿನಾಂಕ 6-4-2019 ರಂದು ಬೆಂಗಳೂರಿನಿಂದ ತನ್ನ ಸ್ನೇಹಿತನ ಮದುವೆಗೆಂದು ವಿರಾಜಪೇಟೆಗೆ ಬಂದು ಮದುವೆ ಮುಗಿಸಿ ವಾಪಾಸ್ಸು ಪೆರಂಬಾಡಿಯಲ್ಲಿರುವ ತನ್ನ ಮನೆಗೆ ನೊಂದವಣೆಯಾಗದ ಹೊಸ TVS NTORQ ಸ್ಕೂಟರಿನಲ್ಲಿ ಹೋಗುತ್ತಿದ್ಧಾಗ ನಿರ್ಮಾಣ ಹಂತದಲ್ಲಿರುವ ಸೇತುವೆಯ ಹಳ್ಳಕ್ಕೆ ಬಿದ್ದು ತಲೆ ಹಾಗೂ ಮುಖಕ್ಕೆ ಗಾಯವಾಗಿ ಮೃತಪಟ್ಟಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ವಾಹನ ಅಪಘಾತ 8 ಮಂದಿಗೆ ಗಾಯ:

ಕೇರಳಾ ರಾಜ್ಯದ ಕಣ್ಣೂರು ಜಿಲ್ಲೆಯ ಈರ್ಕೂರು ವಿನಲ್ಲಿ ವಾಸವಾಗಿರುವ ಖಾಲಿದ್ ಪಿ.ಕೆ ರವರು ತನ್ನ ಅತ್ತೆಮಗನ ಮದುವೆಗೆ ನೆಂಟರಿಷ್ಟರೊಂದಿಗೆ ಟೆಂಪೋಟ್ರಾವ್ಲರ್ ವಾಹನದಲ್ಲಿ  ದಿನಾಂಕ 1-4-2019 ರಂದು ವಿರಾಜಪೇಟೆಗೆ ಬಂದು ಮರಳಿ ಅದೇ ವಾಹನದಲ್ಲಿ ಹೋಗುತ್ತಿದ್ದಾಗ ಮಾಕುಟ್ಟ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅವರ ವಾಹನ ಅಪಘಾತಕ್ಕೀಡಾಗಿ ವಾಹನದಲ್ಲಿದ್ದ ಸುಮಾರು 8 ಮಂದಿಗೆ ಗಾಯಗಳಾಗಿದ್ದು, ಈ ಸಂಬಂಧ ಖಾಲಿದ್ ರವರು ದಿನಾಂಕ 7-4-2019 ರಂದು ನೀಡಿದ  ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ವಾಸವಾಗಿರುವ ಶ್ರೀಮತಿ ಶರಣ್ಯ ಎಂಬವರ ತಂದೆ  61 ವರ್ಷ ಪ್ರಾಯದ ಮಾಯಾಗ ರವರು ದಿನಾಂಕ 6-4-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ದಿನಾಂಕ 06.04.2019 ರಂದು ಸಮಯ 19.30 ಗಂಟೆಗೆ ಸುಂಟಿಕೊಪ್ಪದಲ್ಲಿರುವ ಬಾಳೆಕಾಡು ಎಸ್ಟೇಟ್ ಲೈನುಮನೆಯಲ್ಲಿ ವಾಸವಾಗಿರುವ ವಿ. ಬಾಲಕೃಷ್ಣ ಎಂಬವರು ಸುಂಟಿಕೊಪ್ಪ ನಗರಕ್ಕೆ ಬಂದು ದಿನಸಿ ಸಾಮಾನುಗಳನ್ನು ತೆಗೆದುಕೊಂಡು ಸಮಯ ರಾತ್ರಿ 09.30ಗಂಟೆಗೆ ಆಟೋರಿಕ್ಷಾದಲ್ಲಿ ಮನೆಗೆ ಹೋಗುತ್ತಿರುವಾಗ ಬಾಳೇಕಾಡು ನಿವಾಸಿ ಬಿ. ಪ್ರಕಾಶ್ ರವರು ಆಟೋರಿಕ್ಷಾ ನಂ ಕೆಎ-12 ಬಿ-2253 ರನ್ನು ಚಾಲನೆ ಮಾಡಿಕೊಂಡು ಬಂದು ವಿ. ಬಾಲಕೃಷ್ಣ ಹೋಗುತ್ತಿದ್ದ ಆಟೋ ರಿಕ್ಷಾವನ್ನು ಅಡ್ಡಗಟ್ಟಿ ನಿಲ್ಲಿಸಿ ಅವ್ಯಾಚ್ಚ  ಶಬ್ದಗಳಿಂದ ಬೈಯ್ದು ನಿನ್ನಿಂದಾಗಿ ಬಾಳೆಕಾಡು ಕಾಫಿ ತೋಟ ಹಾಳಾಗಿದೆ ಎಂದು ಹೇಳುತ್ತಾ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ವಿ. ಬಾಲಕೃಷ್ಣರವರ ಹೊಟ್ಟೆಯ ಎಡಬಾಗ ಮತ್ತು ಬೆನ್ನಿಗೆ ಹೊಡೆದು ಗಾಯಪಡಿಸಿದ್ದು ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.