Crime News

ರಸ್ತೆ ಅಪಘಾತ

ದಿನಾಂಕ 08/04/2019ರಂದು ಮೈಸೂರಿನ ಬೋಗಾದಿ ನಿವಾಸಿ ಆದರ್ಶ ಎಂಬವರು ಅವರ ಕಾರಿನಲ್ಲಿ ಪತ್ನಿ ಹರ್ಷಿತಾ ಎಂಬವರೊದಿಗೆ ವಿಟ್ಲದಿಂದ ಮೈಸೂರಿಗೆ ಹೋಗುತ್ತಿರುವಾಗ ಕುಶಾಲನಗರದ ಬಳಿಯ ಗುಡ್ಡೆಹೊಸೂರಿನ ಸುಣ್ಣದಕೆರೆ ಜಂಕ್ಷನ್ ಬಳಿ ಎದುರಿನಿಂದ ಓರ್ವ ಬೈಕ್‌ ಸವಾರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕನ್ನು ಏಕಾಏಕಿ ಬಲಕ್ಕೆ ತಿರುಗಿಸಿ ಆದರ್ಶರವರ ಕಾರಿನ ಮುಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಚಾಲಕ ಮತ್ತು ಹಿಂಬದಿ ಸವಾರ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 08/04/2019ರಂದು 7ನೇ ಹೊಸಕೋಟೆ ನಿವಾಸಿ ರಾಜಾಜಿ ಎಂಬವರು ಅವರ ಪತ್ನಿ ಸುಗಂಧಿ ಎಂಬವರೊಂದಿಗೆ ಸಂಗಯ್ಯನಪುರದಿಂದ ಹೊಸಕೋಟೆಗೆ ಬೈಕಿನಲ್ಲಿ ಹೋಗುತ್ತಿರುವಾಗ ಗುಡ್ಡೆಹೊಸೂರಿನ ಸುಣ್ಣದಕೆರೆ ಜಂಕ್ಷನ್ ಬಳಿ ಹಿಂದಿನಿಂದ ಒಂದು ಕೆಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಪ್ರಕಾಶ್ ಎಂಬಾತ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಜಾಜಿರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ರಾಜಾಜಿ ಮತ್ತು ಅವರ ಪತ್ನಿ ಸುಗಂಧಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 08/04/2019ರಂದು ಕುಶಲನಗರ ಬಳಿಯ ದೊಡ್ಡತ್ತೂರು ನಿವಾಸಿ ಎಂ.ಆರ್.ಮುರುಗೇಶ್ ಎಂಬವರು ಅವರ ಸ್ಕೂಟಿಯಲ್ಲಿ ಚಿಕ್ಕತ್ತೂರಿಗೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿ ಗಣೇಶ್‌ ಎಂಬವರು ದಾರಿ ತಡೆದು ಶುಂಠಿ ಬೆಳೆಯ ವ್ಯವಹಾರದ ವಿಷಯವಾಗಿ ಜಗಳವಾಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಸಿದ್ದಾಫುರ ಬಳಿಯ ಕರಡಿಗೋಡು ಗ್ರಾಮದ ಮಾರುಕಟ್ಟೆಯ ಮಳಿಗೆಗಳಲ್ಲಿ ಇಟ್ಟಿದ್ದ ಸುಮಾರು ರೂ. 10,000/- ಮೌಲ್ಯದ ಗುಜರಿ ಸಾಮಾನುಗಳನ್ನು ದಿನಾಂಕ 05/04/2019 ರಿಂದ 08/04/2019ರ ಒಳಗೆ ಯಾರೋ ಕಳವು ಮಾಡಿದ್ದು ಸಿದ್ದಾಪುರದ ಪೌರ ಕಾರ್ಮಿಕ ಸುಬ್ರಮಣಿ ಎಂಬಾತನ ಮೇಲೆ ಗುಮಾನಿ ಇರುವುದಾಗಿ ಸಿದ್ದಾಪುರದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಕೆ.ಸಿ.ವಿಶ್ವನಾಥ್‌ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 08/04/2019ರಂದು ಸೋಮವಾರಪೇಟೆ ಬಳಿಯ ಕಿರಗಂದೂರು ನಿವಾಸಿ ನೇತ್ರಾವತಿ ಎಂಬವರಿಗೆ ಚಂಗಪ್ಪ, ರಮೇಶ ಮತ್ತು ಸರಸ್ವತಿ ಎಂಬವರು ಕ್ಷುಲ್ಲಕ ಕಾರಣಕ್ಕೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 08/04/2019ರಂದು ಸೋಮವಾರಪೇಟೆ ಬಳಿಯ ಯಡವಾರೆ ನಿವಾಸಿ ಸುಬ್ರಮಣಿ ಮತ್ತು ಅವರ ಮಗ ಚಂದ್ರ ಎಂಬವರಿಗೆ ಅದೇ ಗ್ರಾಮದ ನಿವಾಸಿಗಳಾದ ಗಣೇಶ, ಕೃಷ್ಣಪ್ಪ ಮತ್ತು ಚುಮ್ಮ ಎಂಬವರು ಸೇರಿಕೊಂಡು ಹಲ್ಲೆ ಮಾಡಿರುವುದಾಗಿ ಸುಬ್ರಮಣಿರವರು ದೂರು ನೀಡಿದ್ದು ಅದೇ ರೀತಿ ಸುಬ್ರಮಣಿ, ಚಂದ್ರ ಮತ್ತು ನವೀನ ಎಂಬವರು ಸೇರಿಕೊಂಡು ಚುಮ್ಮ ಎಂಬವರಿಗೆ ಹಲ್ಲೆ ಮಾಡಿರುವುದಾಗಿ ಚುಮ್ಮರವರು ಪ್ರತಿ ದೂರು ನೀಡಿದ್ದು ಸೋಮವಾರಪೇಟೆ ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.