Crime News

ಅಪಘಾತ ಪ್ರಕರಣ

           ಮಡಿಕೇರಿ ನಗರದ ನಿವಾಸಿ ತೋಮಸ್ ಎಂಬುವವರು ದಿನಾಂಕ 08-04-2019 ರಂದು ಮೇಕೇರಿಯಲ್ಲಿರುವ ತನ್ನ ಅಣ್ಣನ ಮನೆಗೆ ತನ್ನ ಆಟೋ ರಿಕ್ಷಾದಲ್ಲಿ ಹೋಗಿದ್ದು, ಆಟೋ ರಿಕ್ಷಾವನ್ನು ಮನೆಯ ಮುಂದೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ರಾತ್ರಿ ವಿರಾಜಪೇಟೆ ಕಡೆಯಿಂದ ಬಂದ ಕಾರನ್ನು ಅದರ ಚಾಲಕ ಭೀಮಯ್ಯನವರು ಅಜಾಗರೂಕತೆಯಿಂದ ಚಾಲನೆ ಮಾಡಿ ನಿಲ್ಲಿಸಿದ್ದ ಆಟೋಗೆ ಡಿಕ್ಕಿಪಡಿಸಿದ ಪರಿಣಾಮ ಆಟೋ ರಿಕ್ಷಾ ಜಖಂಗೊಂಡಿದ್ದು, ಈ ಬಗ್ಗೆ ತೋಮಸ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

          ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೋಕಿನ ಮೇಕೇರಿ ಗ್ರಾಮದಲ್ಲಿ ವರದಿಯಾಗಿದೆ. ಮೇಕೇರಿ ಗ್ರಾಮದ ನಿವಾಸಿಯಾದ ಗುರುವಪ್ಪ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 09-04-2019 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

        ದಿನಾಂಕ 08-04-2019 ರಂದು ಸೋಮವಾರಪೇಟೆ ನಗರದಲ್ಲಿ ಬಾಡಿಗೆಗೆ ಕಾರು ಓಡಿಸುತ್ತಿರುವ ರಾಘವೇಂದ್ರರವರು ನಗರದಲ್ಲಿರುವ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವಾಗ ದೂರು ನೀಡಿರುವ ವಿಚಾರದಲ್ಲಿ ಟ್ಯಾಕ್ಸಿ ಚಾಲಕರುಗಳಾದ ನಂದ, ಜಗದೀಶ, ಶೇಷಪ್ಪ, ಚೆನ್ನಪ್ಪ ಮತ್ತು ರಾಮುರವರು ರಾಘವೇಂದ್ರವರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.