Crime News

ಮಹಿಳೆ ಆತ್ಮಹತ್ಯೆ ವರದಕ್ಷಿಣೆ ಕಿರುಕುಳ ಆರೋಪ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚೆಟ್ಟಳ್ಳಿ ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ಸುನಿಲ್ ಎಂಬವರ ಪತ್ನಿ ಶ್ರೀಮತಿ ದಿಶಾ ಎಂಬವರು ದಿನಾಂಕ 10-4-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಗೆ ತನ್ನ ಪತಿ ಸುನೀಲ್ ರವರು ಪ್ರತಿದಿನ  ವರದಕ್ಷಿಣೆ ಹಣ ತರುವಂತೆ  ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ಸದರಿ ಸುನಿಲ್ ರವರ ಪತ್ನಿ ಶ್ರೀಮತಿ ದಿಶಾರವರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಮೃತೆ ದಿಶಾರವರ ತಂದೆ ಟಿ.ಕೆ. ಸುರೇಶ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಕೊಲೆ ಪ್ರಕರಣ ದಾಖಲು:

ಭಾಗಮಂಡಲ ಪೊಲೀಸ್ ಠಾಣಾ ಸರಹದ್ದಿನ ಬೇಂಗೂರು ಗ್ರಾಮದಲ್ಲ ವಾಸವಾಗಿರುವ ಶ್ರೀಮತಿ ಪಾರ್ವತಿ ಎಂಬವರು ದಿನಾಂಕ ತನ್ನ ಗಂಡ ರಾಜು ಹಾಗು ಮಗ ದಿನಾಂಕ 9-4-2019 ರಂದು ಸಂಜೆ ಮನೆಯಲ್ಲಿದ್ದಾಗ ರಾಜುರವರ ತಂಗಿಯ ಮಗ ಸುರೇಶ ಅವರ ಮನೆಗೆ ಬಂದು ಜಗಳ ಮಾಡಿ ದೊಣ್ಣೆಯಿಂದ ಶ್ರೀಮತಿ ಪಾರ್ವತಿಯವರ ಮೇಲೆ ಹಲ್ಲೆ ಮಾಡಿ ನಂತರ ಆಕೆಯ ಗಂಡ ರಾಜುರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ಸರ್ವೆಕಾರ್ಯಕ್ಕೆ ಅಡ್ಡಿ, ಹಲ್ಲೆ:

ಕುಶಾಲನಗರ ಪಟ್ಟಣ ಠಾಣೆ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದಲ್ಲಿ ಮೈಸೂರು ಜಿಲ್ಲೆಯ ಹಿನಕಲ್ ನಿವಾಸಿ ಶ್ರೀಮತಿ ಸಿಸಿಲಿಯ ಎಂಬವರು ದಿನಾಂಕ 2-4-2019 ರಂದು ಬೆಳಗ್ಗೆ 11-30 ಗಂಟೆಗೆ ತಮ್ಮ ಬಾಪ್ತು ಮುಳ್ಳುಸೋಗೆ ಗ್ರಾಮದಲ್ಲಿರುವ ಜಮೀನಿನ ಸರ್ವೆಕಾರ್ಯವನ್ನು ತನ್ನ ಮಕ್ಕಳಾದ ವನಿತ  ಮತ್ತು ರಘುನಾಥ್ ರವರೊಂದಿಗೆ ನಡೆಸುತ್ತಿರುವಾಗ್ಗೆ  ಅವರ ಸಂಬಂಧಿಗಳಾದ ಸುರೇಶ ಮತ್ತು ಧನರಾಜ್ ರವರು ಸದರಿ ಸರ್ವೆಕಾರ್ಯ ನಡೆಯುತ್ತಿದ್ದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಶ್ರೀಮತಿ ಸಿಸಿಲಿಯ ಮತ್ತು ಮಕ್ಕಳನ್ನು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.