Crime News

ಕಾರಿಗೆ ಲಾರಿ ಡಿಕ್ಕಿ:

ನಾಪೋಕ್ಲು ಠಾಣಾ ಸರಹದ್ದಿನ ಸೆಕ್ರೇಡ್ ಹಾರ್ಟ್‍ ಆಂಗ್ಲ ಶಾಲೆಯಲ್ಲಿ ಉಪಾದ್ಯಾಯರಾಗಿ ಕೆಲಸ ಮಾಡುತ್ತಿರುವ ಟಿ.ಬಿ. ಕೆಂಡಗಣ್ಣ ಎಂಬವರು ದಿನಾಂಕ 11-4-2019 ರಂದು ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕಾರಿನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಪಾಲೂರು ಗ್ರಾಮದಲ್ಲಿ  ಎದುರುಗಡೆಯಿಂದ ಬಂದ ಲಾರಿಯೊಂದು ಟಿ.ಬಿ. ಕೆಂಡಗಣ್ಣರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕೆಂಡಗಣ್ಣ ಹಾಗು ಅವರ ಪತ್ನಿ ಮಂಜುಳಾರವರಿಗೆ ಗಾಯಗಳಾಗಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಗೆಂದು ಪಡೆದ ಚಿನ್ನಾಭರಣ ಮರಳಿಸದೆ ವಂಚನೆ:

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಾರೆಕಾಡು ಬೇತು ಗ್ರಾಮದ ನಿವಾಸಿ ಶ್ರೀಮತಿ ಪಿ.ಎ. ಅಲೀಮ ಎಂಬವರು ನಾಪೋಕ್ಲು ನಿವಾಸಿಗಳಾದ ಕನ್ನಡಿಯಂಡ ಮಾಹಿನ್ ಹಾಗು ಅವರ ಪತ್ನಿ ರಾಬೀಯಾ ರವರಿಗೆ ಅವರ ಕೋರಿಕೆಯಂತೆ ಮದುವೆ ಸಮಾರಂಭಕ್ಕೆ ಹೋಗಲು ಸದರಿ ಅಲೀಮರವರ ಬಾಪ್ತು ವಿವಿಧ 339.39 ಗ್ರಾಂ ತೂಕದ ಚಿನ್ನಾಭರಣಗಳನ್ನು ಕೊಟ್ಟಿದ್ದು, ಅದನ್ನು  ಮರಳಿಸಲು ಕೇಳಿದಾಗ ಕೊಡದೆ ಸತಾಯಿಸುತ್ತಿದ್ದು ಇದೀಗ ಊರನ್ನೇ ಬಿಟ್ಟು ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವಿಸಲು ಅನವು:

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಂಡಂಗಾಲ ಗ್ರಾಮದಲ್ಲಿ ಮೂಕಚಂಡ ಈರಪ್ಪ ಎಂಬವರು ದಿನಾಂಕ 11-4-2019 ರಂದು ತಮ್ಮ ಮನೆಯ ಮುಂದುಗಡೆ ಸರಕಾರದ ಪರವಾನಗಿ ಇಲ್ಲದೆ ಅಪರಿಚಿತ ವ್ಯಕ್ತಿಗಳಿಗೆ ಮದ್ಯ ಸೇವಿಸಲು ಅನುವುಮಾಡಿಕೊಟ್ಟಿದ್ದು ಈ ಸಂದರ್ಭದಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಹಾಗು ಸಿಬ್ಬಂದಿಗಳು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ,

ಸ್ಕೂಟರಿಗೆ ಓಮ್ನಿ ಡಿಕ್ಕಿ:

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬಸವನಳ್ಳಿ ಗ್ರಾಮದ ನಿವಾಸಿ ಬಿ.ಆರ್. ಆಕಾಶ್ ಎಂಬವರು ದಿನಾಂಕ 4-4-2019 ರಂದು ಹೆರೂರು ಗ್ರಾಮದಲ್ಲಿರುವ ತಮ್ಮ ಮನೆಗೆ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ನಟೇಶ್ ಎಂಬವರು ಎದುರುಗಡೆಯಿಂದ ತಮ್ಮ ಬಾಪ್ತು ಮಾರುತಿ ವ್ಯಾನನ್ನು ಚಲಾಯಿಸಿಕೊಂಡು ಬಂದು ಬಿ.ಆರ್. ಆಕಾಶ್ ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಸದರಿ ಆಕಾಶ್‍ರವರು ಸ್ಕೂಟರಿನಿಂದ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಗೆ ಬಸ್ಸ್ ಡಿಕ್ಕಿ:

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಅಳುವಾರ ಗ್ರಾಮದಲ್ಲಿ ದಿನಾಂಕ 7-4-2019 ರಂದು ನಾಗರಾಜೇಗೌಡ ಎಂಬವರು ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ  ಸದರಿ ಮೋಟಾರ್‍ ಸೈಕಲಿಗೆ ಖಾಸಗಿ ಬಸ್ಸು ಡಿಕ್ಕಿಯಾಗಿ ನಾಗರಾಜೇಗೌಡರವರು ಗಾಯಗೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.