Crime News

ನೀರಿನಲ್ಲಿ ಮುಳುಗಿ ಬಾಲಕ ಸಾವು

                          ದಿನಾಂಕ 29/04/2018ರಂದು ಸಿದ್ದಾಪುರ ಬಳಿಯ ಬೈರಂಬಾಡ ಗ್ರಾಮದ ನಿವಾಸಿ ಎಂ.ಸಿ. ಕಾರ್ಯಪ್ಪ ಎಂಬವರ ತೊಟದಲ್ಲಿ ಕೆರೆ ಕೆಲಸ ಮಾಡುತ್ತಿದ್ದ ಹಾಸನದ ಅರಸೀಕೆರೆ ನಿವಾಸಿ ಈರ ಬೋವಿ ಎಂಬವರ ಮಗ ಕಿರಣ್ ಎಂಬ ಬಾಲಕನು ಬಾಳೆ ದಿಂಡಿನ ಸಹಾಯದೊಂದಿಗೆ ಗೆಳೆಯರ ಜೊತೆ ಕೆರೆಯಲ್ಲಿ ಈಜುತ್ತಿರುವಾಗ ಆಕಸ್ಮಿಕವಾಗಿ ಬಾಳೆ ದಿಂಡು ಆತನ ಕೈಯಿಂದ ಜಾರಿ ಕಿರಣನು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 ರಸ್ತೆ ಅಪಘಾತ

                          ದಿನಾಂಕ 30/04/2018ರಂದು ಚೇರಂಬಾಣೆ ಬಳಿಯ ಕೊಟ್ಟೂರು ನಿವಾಸಿ ಟಿ.ಎಸ್.ಸುಬ್ಬಯ್ಯ ಎಂಬವರು ಅವರ ಮೋಟಾರು ಸೈಕಲ್ ಸಂಖ್ಯೆ ಕೆಎ-12-ಆರ್-8951ರಲ್ಲಿ ಕೊಟ್ಟೂರುವಿನಿಂದ ಮಡಿಕೇರಿಗೆ ಬರುತ್ತಿರುವಾಗ ಮಡಿಕೇರಿ ನಗರದ ಮಂಗಳೂರು ರಸ್ತೆಯ ಬಳಿ ಮಡಿಕೇರಿ ಕಡೆಯಿಂದ ಕೆಎ-07-ಎ-7963ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಬ್ಬಯ್ಯನವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಕಾಣೆ

                      ಮಡಿಕೇರಿ ಬಳಿಯ ಬೋಯಿಕೇರಿ ನಿವಾಸಿ ಅಳಗುಸ್ವಾಮಿ ಎಂಬ ವ್ಯಕ್ತಿಯು ದಿನಾಂಕ 07/04/2018ರಂದು ಮಡಿಕೇರಿ ನಗರದ ಬಸ್‌ ನಿಲ್ದಾಣದಿಂದ ಕಾಣೆಯಾಗಿರುವುದಾಗಿ ಆತನ ಅಕ್ಕ ಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಲ್ಲೆ ಪ್ರಕರಣ

                     ದಿನಾಂಕ 29/04/2018ರಂದು ಶನಿವಾರಸಂತೆ ನಗರದ ತ್ಯಾಗರಾಜ ಕಾಲೊನಿ ನಿವಾಸಿ ಮಂಜ ಎಂಬವರು ಅವರ ಪತ್ನಿಯ ಮನೆಯಲ್ಲಿ ಊಟ ಮಾಡುತ್ತಿರುವಾಗ ಕುಮಾರ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮಂಜರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

                    ದಿನಾಂಕ 29/04’2018ರಂದು ಶನಿವಾರಸಂತೆಯ ಅರಣ್ಯ ಇಲಾಖೆಯ ಉದ್ಯೋಗಿ ಚಂದ್ರ ಎಂಬವರು ಕೆಎ-43-ಹೆಚ್-306 ರ ಬೈಕಿನಲ್ಲಿ ಕರ್ತವ್ಯಕ್ಕೆ ಹೋಗುತ್ತಿರುವಾಗ ಶನಿವಾರಸಂತೆ ನಗರದ ಅರಣ್ಯ ಇಲಾಖೆ ಕಚೇರಿ ಬಳಿ ಹಿಂದಿನಿಂದ ಕೆಎ-46-3174ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂದ್ರರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಚಂದ್ರರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

                    ದಿನಾಂಕ 30/04/2018ರಂದು ಸೋಮವಾರಪೇಟೆ ಬಳಿಯ ಮಾದಾಪುರ ನಿವಾಸಿ ಸುಧಾಕರ ಎಂಬಾತನು ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕಾಫಿ ಕೃಷಿಯಲ್ಲಿ ನಷ್ಟ ಹಾಗೂ ಸ್ನೇಹಿತರೊಂದಿಗೆ ಪಡೆದ ಸಾಲ ತೀರಿಸಲಾಗದೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                    ದಿನಾಂಕ 29/04/2018ರಂದು ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿ ನಿವಾಸಿ ಜೇನುಕುರುಬರ ರಾಜು ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಜೇನು ಕುರುಬರ ದಿನೇಶ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ರಾಜುರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.