Crime News

ಬಸ್‍ ಮತ್ತು ವ್ಯಾನ ನಡುವೆ ಅಪಘಾತ ಮೂವರಿಗೆ ಗಾಯ:

ದಿನಾಂಕ 12-4-2019 ರಂದು ಸೋಮವಾರಪೇಟೆ ತಾಲೋಕು ಚೌಡ್ಲು ಗ್ರಾಮದ ನಿವಾಸಿ ಕೆ.ಎಂ. ರಫೀಕ್ ಎಂಬವರು ತಮ್ಮ ಬಾಪ್ತು ಕೆಎ-12-ಎನ್‍-5794ರ ಮಾರುತಿ ವ್ಯಾನಿನಲ್ಲಿ ತನ್ನ ಸ್ನೇಹಿತರೊಂದಿಗೆ ವಿರಾಜಪೇಟೆಗೆ ಹೋಗುವ ಸಲುವಾಗಿ  ಸೋಮವಾರಪೇಟೆಯಿಂದ ವಿರಾಜಪೇಟೆಯ ಕಡೆಗೆ ಹೋಗುತ್ತಿದ್ದಾಗ ಕುಸುಬೂರು ಗ್ರಾಮದ ದೇವಸ್ಥಾನದ ಬಳಿ  ಮುಂದೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸನ್ನು ದಾಟಿ ಮುಂದೆ ಹೋಗುವ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ ವ್ಯಾನಿಗೆ ತಾಗಿ  ವ್ಯಾನ್ ರಸ್ತೆಮೇಲೆ ಮಗುಚಿ ಬಿದ್ದ ಪರಿಣಾಮ ಚಾಲಕ ಕೆ.ಎಂ. ರಫೀಕ್ ಹಾಗು ಅವರ ಜೊತೆಯಲ್ಲಿದ್ದ ಶಫೀರ್ ಮತ್ತು ಇರ್ಫಾನ್ ರವರು ಗಾಯಗೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.