Crime News

ಹಲ್ಲೆ ಪ್ರಕರಣ

          ದಿನಾಂಕ 12-04-2019 ರಂದು ಕೊಡ್ಲಿಪೇಟೆ ನಗರದ ನಿವಾಸಿ ಶೋಭಿತ್ ಎಂಬುವವರು ಹಣದ ವಿಚಾರದಲ್ಲಿ ದಿಲೀಪ್ ಕುಮಾರ್,ಮಣಿ ಮತ್ತು  ತೀರ್ಥ ರವರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ಶವ ಪತ್ತೆ

          ಮಡಿಕೇರಿ ತಾಲೋಕಿನ ಬೇಂಗೂರು ಗ್ರಾಮದ ಜೀವನ್ ಎಂಬುವವರ ತೋಟದ ಬೇಲಿಯ ಪಕ್ಕದಲ್ಲಿ ಅಂದಾಜು 45-50 ವರ್ಷ ಪ್ರಾಯದ ಗಂಡಸಿನ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ದೊರೆತ್ತಿದ್ದು, ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

           ಮಡಿಕೇರಿಯ ಇಂದಿರಾ ನಗರದ ನಿವಾಸಿ ವಿಶಾಲಾಕ್ಷಿ ಎಂಬುವವರು ದಿನಾಂಕ 13-04-2019 ರಂದು ಮನೆಗೆ ಬೀಗ ಹಾಕಿ ಹೋಗಿದ್ದವರು ವಾಪಾಸ್ಸು ಬಂದು ನೋಡಿದಾಗ ಮನೆಯ ಹಿಂಬಾಗಿಲಿನಿಂದ ಯಾರೋ ಒಳನುಗ್ಗಿ 2,200 ರೂ ನಗದು, 1 ಗ್ರಾಂ ಚಿನ್ನದ ಗುಂಡು ಹಾಗೂ ಕ್ರೀಡೆಯಲ್ಲಿ ಪಡೆದ 105 ಪದಕಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

         ವಿರಾಜಪೇಟೆ ತಾಲೋಕಿನ ಮಾಯಮುಡಿ ಗ್ರಾಮದ ಶಂಭುರವರ ತೋಟದ ಮನೆಯಲ್ಲಿ ವಾಸವಿರುವ ಹೆಬ್ಬಾಲೆ ಗ್ರಾಮದ ರಾಜು ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ರಾಜುರವರ ಪತ್ನಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

          ದಿನಾಂಕ 13-04-2019 ರಂದು ವಿರಾಜಪೇಟೆ ತಾಲೋಕಿನ ಬೆಳ್ಳೂರು ಗ್ರಾಮದ ನಿವಾಸಿಗಳಾದ ವೈಭವಿ, ಭಾಗ್ಯವತಿ ಮತ್ತು ಸುಬ್ಬಯ್ಯನವರು ಕ್ಷುಲ್ಲಕ ಕಾರಣಕ್ಕೆ ನೇತ್ರಾವತಿ ಹಾಗೂ ಉತ್ತಯ್ಯನವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ, ಲಾರಿ ವಶ

          ದಿನಾಂಕ 13-04-2019 ರಂದು ಗೋಣಿಕೊಪ್ಪ ಠಾಣೆಯ ಪಿಎಸ್ಐ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಕುಂದಾ ಕಡೆಯಿಂದ ಲಾರಿಯಲ್ಲಿ ಮರಳನ್ನು ತುಂಬಿಸಿಕೊಂಡು ಹಾತೂರು ಗ್ರಾಮದ ಕಡೆಗೆ ಬರುತ್ತಿರುವಾಗ ದಾಳಿ ಮಾಡಿ ಲಾರಿಯ ಚಾಲಕ ಉಮೇಶ ಮತ್ತು ಸಿದ್ದುರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.