Crime News

ಕಾರು ಅಪಘಾತ ವ್ಯಕ್ತಿ ಸಾವು:

ಕಾರು ಅಪಘಾತಕ್ಕೀಡಾಗಿ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ವಿರಾಜಪೇಟೆ ತಾಲೋಕಿನ ಐಮಂಗಲ ಗ್ರಾಮದಲ್ಲಿ ಸಂಭವಿಸಿದೆ.  ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ನಿವಾಸಿ ಡಿ.ಎಸ್‍.ಆಲಿ ಎಂಬವರು  ನಲ್ವತ್ತೊಕ್ಲು ಗ್ರಾಮದಲ್ಲಿ ವಾಸವಾಗಿರುವ ಅವರ ಅಣ್ಣ ಮುಸ್ತಾಫ ಹಾಗು ಅವರ ಕುಟುಂಬ ದವರೊಂದಿಗೆ ದಿನಾಂಕ 13-3-2019 ರಂದು ಎಮ್ಮೆಮಾಡು ದರ್ಗಾಕ್ಕೆ ಹೋಗಿ ಐಮಂಗಲ ಗ್ರಾಮಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಐಮಂಗಲ ಗ್ರಾಮದಲ್ಲಿ ಕಾರು ಅಪಘಾತಕ್ಕೀಡಾಗಿ ಕಾರಿನಲ್ಲಿದ್ದ ಮುಸ್ತಫಾನವರು ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನಪ್ಪಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷ ವ್ಯಕ್ತಿಗಳ ಮೇಲೆ ಹಲ್ಲೆ:

ಶ್ರೀಮಂಗಲ ಠಾಣಾ ಸರಹದ್ದಿನ ಬೆಳ್ಳೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಬಿ.ಎಸ್. ಭಾಗ್ಯವತಿ ಹಾಗು ಅವರ ಗಂಡ ಬಿ.ಬಿ. ಸುಬ್ಬಯ್ಯನವರು ದಿನಾಂಕ 13-4-2019 ರಂದು ಬೆಳ್ಳೂರು ಗ್ರಾಮದಲ್ಲಿ ನಡೆದ ಕಾರಣತೆರೆ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ  ಅದೇ ಗ್ರಾಮದ ಶ್ರೀಮತಿ ನೇತ್ರಾವತಿ ಹಾಗು ಆಕೆಯ ಗಂಡ ಉತ್ತಯ್ಯ ರವರುಗಳು ಹಳೇ ದ್ವೇಷದಿಂದ ಹಲ್ಲೆ ಮಾಡಿದ್ದು ಅಲ್ಲದೆ ಚೂರಿಯಿಂದ ಹಲ್ಲೆಗೆ ಯತ್ನಿಸಿದ ಸಂದರ್ಭದಲ್ಲಿ ಬಿ.ಎಸ್. ಭಾಗ್ಯವತಿಯವರಿಗೆ ಗಾಯಗಳಾಗಿದ್ದು, ಸದರಿ ಬಿ.ಎಸ್. ಭಾಗ್ಯವತಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೋಂಸ್ಟೇ ಯಿಂದ ಪ್ರವಾಸಿಗರ ಮೊಬೈಲ್ ಕಳವು:

ದಿನಾಂಕ 12/4/2019 ರಂದು ಮೈಸೂರಿನ ಜಿ. ಶಶಿಕುಮಾರ್‍ ಎಂಬವರು ತನ್ನ ಸ್ನೇಹಿತ ವಿವೇಕಾನಂದರವರೊಂದಿಗೆ ಪ್ರವಾಸ ನಿಮಿತ ತಿತಿಮತಿಯ ಸ್ಕಂದ ಹೋಂಸ್ಟೇಗೆ ಬಂದು ರಾತ್ರಿ ತಂಗಿದ್ದು ಬೆಳಿಗ್ಗೆ ಎದ್ದು ನೋಡಿದಾಗ ಬಾತ್ ರೂಂನ ತೆರೆದ ಯಾವುದೇ ಭದ್ರತೆ ಇಲ್ಲದ ಕಿಟಕಿಯ ಒಳಗೆ ಯಾರೋ ಕಳ್ಳರು ನುಗ್ಗಿ ಅವರುಗಳ  ಬಾಪ್ತು ಸಾಂ ಸಾಂಗ್ ಗ್ಯಾಲಕ್ಷಿ ಮೊಬೈಲ್ ಎರಿಟೆಲ್ ಸಿಮ್ 9343826731 ಐಡಿಯಾ ಸಿಮ್ 9632999513 ರನ್ನು ಬೆಲೆ 10,000/- ಹಾಗೂ  9980345666, 89900787264 ಸಿಮ್‍ಗಳಿರುವ  ಬೆಲೆ 10,000/- ಜಿಯೋನಿ ಮೊಬೈಲ್  ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಯಿಂದ ಮೊಬೈಲ್ ಕಳ್ಳತನ:

ಪೊನ್ನಂಪೇಟೆ  ಪೊಲೀಸ್ ಠಾಣಾ ಸರಹದ್ದಿನ ತಿತಿಮತಿ ಗ್ರಾಮದ ನಿವಾಸಿ ಎನ್.ಟಿ. ಸತೀಶ್ ರವರು ದಿನಾಂಕ 12-4-2019 ರಂದು ರಾತ್ರಿ ಮನೆಯಲ್ಲಿ ಮಲಗಿದ ಸಂದರ್ಭದಲ್ಲಿ ಕಿಟಕಿಯ ಮೇಲೆ ಇಟ್ಟಿದ್ದ 11,000 ರೂ ಬೆಲೆ ಬಾಳುವ ಮೊಬೈಲ್‍ ನ್ನು ಕಿಟಕಿಯ ಮೂಲಕ ಕಳವು ಮಾಡಿದ್ದು ಈ ಸಂಬಂಧ  ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ಯುವತಿ ಆತ್ಮಹತ್ಯೆ:

ಜೀವನದಲ್ಲಿ ಜಿಗುಪ್ಸೆಗೊಂಡ ಯುವತಿಯಾರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಧನುಗಾಲ ಗ್ರಾಮದಲ್ಲಿ ನಡೆದಿದೆ.  ಧನುಗಾಲ  ಗ್ರಾಮದ ನಿವಾಸಿ ಕೆ.ಕೆ. ರಾಜೀವನ್ ಎಂಬವರ ಮಗಳು ಆದೀರ ಎಂಬಾಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 6-4-2019 ರಂದು ವಿಷ ಸೇವಿಸಿ ಅಸ್ವಸ್ಥಗೊಂಡು ಆಕೆಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಸದರಿಯಾಕೆ ದಿನಾಂಕ 14-4-2019 ರಂದು ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ ಪ್ರಕರಣ ದಾಖಲು:

ಸೋಮವಾರಪೇಟೆ ತಾಲೊಕು ಹುಲುಗುಂದ ಹಾರಂಗಿಯಲ್ಲಿ ವಾಸವಾಗಿರುವ ಟಿ.ಆರ್. ವೆಂಕಟೇಶ್ ಎಂಬವರ ತಂದೆ 74 ವರ್ಷ ಪ್ರಾಯದ ರಂಗನಾಯಕ ಎಂಬ ವ್ಯಕ್ತಿ ಕೆಲವು ಸಮಯದಿಂದ ಬುದ್ದಿಮಾಂಧ್ಯತೆಯಿಂದ ಬಳಲುತ್ತಿದ್ದು, ದಿನಾಂಕ 10-4-2019 ರಂದು ಶಿವಮೊಗ್ಗಕ್ಕೆ ಹೋಗಿ ಬರುವುದಾಗಿ  ಹೋಗಿದ್ದು ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.