Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 19/04/2019ರಂದು ಮಾಲ್ದಾರೆ ಬಳಿಯ ತಟ್ಟಳ್ಳಿ ಹಾಡಿ ನಿವಾಸಿ ಲೋಕೇಶ್‌ ಎಂಬವರು ಮನೆಯ ಬಳಿ ನೈಲಾನ್‌ ಹಗ್ಗದಿಂದ ನೇಣು ಬಿಗಿದುಕೊಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತ ಲೋಕೇಶ್‌ರವರು ಅತೀವ ಮದ್ಯವ್ಯಸನಿಯಾಗಿದ್ದು ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ 20/04/2019ರಂದು ಕೇರಳದ ಮಟ್ಟನೂರು ನಿವಾಸಿ ನೌಶಾದ್ ಎಂಬವರು ಮುನೀರ್‌ ಎಂಬವರ ಕಾರಿನಲ್ಲಿ ಸ್ನೇಹಿತ ತೌಫೀಲ್ ಎಂಬವರೊಂದಿಗೆ ಮಟ್ಟನೂರಿನಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಗೋಣಿಕೊಪ್ಪ ಬಳಿಯ ಹಾತೂರಿನಲ್ಲಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನೌಶಾದ್‌ರವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ನೌಶಾದ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 19/04/2019ರಂದು ಕುಶಾಲನಗರದ ವಿವೇಕಾನಂದ ಬಡಾವಣೆ ನಿವಾಸಿ ಧರ್ಮರಾಜ್‌ ಎಂಬವರು ಕುಶಾಲನಗರದ ಕದಂಬ ಬಾರ್‌ ಮುಂದೆ ಇರುವಾಗ ಅಲ್ಲಿಗೆ ಬಂದ ಕುಶಾಲನಗರದ ನಿವಾಸಿಗಳಾದ ಜಗದೀಶ್‌, ಕೀರ್ತಿ, ಲೋಹಿತಾಶ್ವ, ಮದನ್, ಮೋಹನ್, ಪ್ರದೀಪ್, ರಘು ಮತ್ತು ರವಿ ಎಂಬವರುಗಳು ಸೇರಿಕೊಂಡು ಹಳೆ ದ್ವೇಷದಿಂದ ಕತ್ತಿ ಹಾಗೂ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು, ಅದೇ ರೀತಿ ಕಾಳಮ್ಮ ಕಾಲೋನಿ ನಿವಾಸಿ ಶೆಟ್ಟಿ ಎಂಬವರಿಗೆ ಧರ್ಮ, ಬಾಲಾಜಿ, ಪ್ರಕಾಶ್‌, ದೇವರಾಜು, ಸಂತೋಷ್‌ ಮತ್ತಿತರರು ಸೇರಿಕೊಂಡು ಹಲ್ಲೆ  ಮಾಡಿರುವುದಾಗಿ ಶೆಟ್ಟಿಯವರು ಪ್ರತಿ ದೂರು ನೀಡಿದ್ದು, ಕುಶಾಲನಗರ ಪಟ್ಟಣ ಪೊಲೀಸರು ಎರಡೂ ದೂರುಗಳಿಗೆ ಸಂಬಂಧಿಸಿದಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 20/04/2019ರಂದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಅರಕಲಗೂಡು ಡಿಪೋದ ಚಾಲಕ ಚಂದ್ರೇಗೌಡ ಎಂಬವರು ಸಂಸ್ಥೆಯ ಬಸ್ಸನ್ನು ಚಾಲಿಸಿಕೊಂಡು ಕುಶಾಲನಗರದಿಂದ ಹಾಸನಕ್ಕೆ ಹೋಗುತ್ತಿರುವಾಗ ಹೆಬ್ಬಾಲೆ ಬಳಿ ಎದುರಿನಿಂದ ಒಂದು ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚಂದ್ರೇಗೌಡರವರು ಚಾಲಿಸುತ್ತಿದ್ದ ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 20/04/2019ರಂದು ಕುಶಾಲನಗರದ ಪ್ರವೀಣ್‌ ಎಂಬವರು ಅವರ ಕಾರಿನಲ್ಲಿ ಗುಮ್ಮನಕೊಲ್ಲಿಗೆ ಹೋಗುತ್ತಿರುವಾಗ ಮುಳ್ಳುಸೋಗೆ ಬಳಿ ಸೂಳೆಕೋಟೆ ನಿವಾಸಿ ಕುಮಾರ್‌ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರವೀಣ್‌ರವರ ಕಾರಿಗೆ ಹಿಂಬದಿಯಿಂದ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಕುಮಾರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ  ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.