Crime News

ರಸ್ತೆ ಅಪಘಾತ ; ಸಾವು

ದಿನಾಂಕ 21/04/2019ರಂದು ಪೊನ್ನಂಪೇಟೆಯ ಶಾಂತಿನಗರ ನಿವಾಸಿ ಎನ್‌.ಎಸ್.ಸರೋಜ ಎಂಬವರ ಮಗ ಎನ್‌.ಎಂ.ಕಾವೇರಪ್ಪ ಎಂಬಾತನು ಬಾಳೆಲೆಯಿಂದ ಮದುವೆ ಸಮಾರಂಭ ಮುಗಿಸಿಕೊಂಡು ಕಾರಿನಲ್ಲಿ ಪೊನ್ನಂಪೇಟೆಗೆ ಬರುತ್ತಿರುವಾಗ ಪೊನ್ನಂಪೇಟೆಯ ಬಳಿ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ಕಾವೇರಪ್ಪನವರ ನಿಯಂತ್ರಣ ತಪ್ಪಿ ವರ್ಕ್‌ಶಾಪ್‌ ಒಂದರ ಬಳಿ ನಿಲ್ಲಿಸಿದ್ದ ಜೆಸಿಬಿ ಯಂತ್ರಕ್ಕೆ ಡಿಕ್ಕಿಯಾದ ಪರಿಣಾಮ ಕಾವೇರಪ್ಪನವರು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 21/04/2019ರಂದು ಪೊನ್ನಂಪೇಟೆ ಬಳಿಯ ಹುದೂರು ಗ್ರಾಮದ ಕಾಟ್ರಕೊಲ್ಲಿ ನಿವಾಸಿ ರಾಜಮ್ಮ ಎಂಬವರು ಅವರ ಸೊಸೆ ರೇಖಾ ಮತ್ತು ಮಗ ಆರ್ಮುಗ ಎಂಬವರೊಂದಿಗೆ ಪೊನ್ನಂಪೇಟೆ ನಗರದಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಒಂದು ಕೆಎ-45-ವೈ-3006ರ ಸ್ಕೂಟರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಜಮ್ಮರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಜಮ್ಮರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ ; ಹಾನಿ

ದಿನಾಂಕ 21/04/2019ರಂದು ಹುದಿಕೇರಿ ಬಳೀಯ ಬೆಳ್ಳೂರು ನಿವಾಸಿ ನೂರೇರ ಮನೋಹರ್‌ ಎಂಬವರ ಜಾಗಕ್ಕೆ ಮಲ್ಲೇಂಗಡ ರಾಬಿನ್‌ ಮತ್ತು ಅವರ ತಾಯಿ ಅತಿಕ್ರಮ ಪ್ರವೇಶ ಮಾಡಿ ಮನೋಹರ್‌ರವರು ಅವರ ಜಾಗದಲ್ಲಿ ಅಳವಡಿಸಿದ್ದ ಗೇಟನ್ನು ಕಿತ್ತು ಹಾಕಿ ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 20/04/2019ರ ರಾತ್ರಿ ಸುಂಟಿಕೊಪ್ಪ ಬಳಿಯ ಗರಗಂದೂರು ನಿವಾಸಿ ಮಧು ಎಂಬವರು ಅವರ ರಿಕ್ಷಾದಲ್ಲಿ ಗರಗಂದೂರಿನ ಅವರ ಮನೆಗೆ ಹೋಗುತ್ತಿರುವಾಗ ಹರದೂರು ಸೇತುವೆ ಬಳಿ ಹಿಂದಿನಿಂದ ಧನುಷ್‌ ಎಂಬವರು ಅವರ ಮೋಟಾರು ಸೈಕಲನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ  ಚಾಲಿಸಿಕೊಂಡು ಬಂದು ಮಧುರವರ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ರಿಕ್ಷಾಕ್ಕೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ದಿನಾಂಕ 19/04/2019ರಂದು ಕುಶಾಲನಗರದ ಕೂಡ್ಲೂರು ಬಳಿಯ ನವಗ್ರಾಮದ ನಿವಾಸಿ ರಘು ಎಂಬವರು ಮನೆಯಲ್ಲಿ ಇದ್ದವರು ಎಲ್ಲಿಗೋ ಹೋಗಿದ್ದು ಮರಳಿ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ಅವರ ಪತ್ನಿ ವಿಜಯಲಕ್ಷ್ಮಿರವರು ನೀಡಿದ ದುರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ; ಸಾವು

ದಿನಾಂಕ 21/09/2019ರಂದು ಮಡಿಕೇರಿಯ ಎಫ್‌ಎಂಸಿ ಕಾಲೇಜಿನ ವಿದ್ಯಾರ್ಥಿ ಲೋಹಿತ್‌ ಎಂಬವರು ಅವರ ಸ್ನೇಹಿತರಾದ ಗಗನ್, ಮಿಥುನ್ ಮತ್ತು ಮಂಜುನಾಥ ಎಂಬವರೊಂದಿಗೆ ಎರಡು ಬೈಕುಗಳಲ್ಲಿ ಮಲ್ಲಳ್ಳಿ ಜಲಪಾತ ನೋಡಲು ಹೋಗಿ ಮರಳಿ ಬರುತ್ತಿರುವಾಗ ಮಾದಾಪುರ ನಗರದ ಗರ್ವಾಲೆಗೆ ಹೋಗುವ ತಿರುವಿನಲ್ಲಿ ಎದುರಿನಲ್ಲಿ ಹೋಗುತ್ತಿದ್ದ ಒಂದು ಪಿಕ್‌ಅಪ್‌ ವಾಹನವನ್ನು ಅದರ ಚಾಲಕ ವಿನೋದ್‌ ಕುಮಾರ್‌ ಎಂಬವರು ಯಾವುದೇ ಸೂಚನೆ ನೀಡದೆ ನಿರ್ಲಕ್ಷ್ಯತನದಿಂದ ಏಕಾ ಏಕಿ ಬಲಕ್ಕೆ ತಿರುಗಿಸಿದ ಕಾರಣ ಗಗನ್‌ರವರು ಚಾಲಿಸುತ್ತಿದ್ದ ಬೈಕು ಪಿಕ್‌ಅಪ್‌ ವಾಹನಕ್ಕೆ ಡಿಕ್ಕಿಯಾಗಿ ಬೈಕಿನಲ್ಲಿದ್ದ ಲೋಹಿತ್‌ ಹಾಗೂ ಗಗನ್‌ರವರಿಗೆ ತೀವ್ರ ಗಾಯಗಳಾಗಿ ಮಡಿಕೇರಿಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಗಗನ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.