Crime News

ಟೆಲಿಫೋನ್ ವಯರ್ ಕಳವು

         ಗೋಣಿಕೊಪ್ಪ ನಗರದಲ್ಲಿ ಪೊನ್ನಂಪೇಟೆ ಜಂಕ್ಷನ್ ನಿಂದ ಪಾಲಿಬೆಟ್ಟ ಜಂಕ್ಷನ್ ವರೆಗೆ ಹಾಕಿರುವ ಟೆಲಿಫೋನ್ ವಯರನ್ನು ದಿನಾಂಕ 23-04-2019 ರಂದು ಯಾರೋ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಅಭಿಯಂತರರಾದ ಮಂಜುನಾಥರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆ ಪ್ರಕರಣ

           ದಿನಾಂಕ 23-04-2019 ರಂದು ಗೋಣಿಕೊಪ್ಪಲುವಿನ ಅತ್ತೂರು ಗ್ರಾಮದ, ಸೀಗೆತ್ತೋಡು ನಿವಾಸಿಯಾದ ಚಿಣ್ಣಪ್ಪನವರ ಲೈನ ಮನೆಯಲ್ಲಿ ವಾಸವಿರುವ ಪಣಿಯರವರ ಚುಬ್ರ ಎಂಬುವವರಿಗೆ ಪಣಿಯರವರ ಅಪ್ಪಣ್ಣ ಮತ್ತು ರವಿಯವರು ಹಳೇ ದ್ವೇಷದಿಂದ ಕಲ್ಲಿನಿಂದ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಚುಬ್ರರವರು ಮೃತಪಟ್ಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗ್ಯಾಸ್ ಸಿಲಿಂಡರ್ ಕಳವು

            ಸೋಮವಾರಪೇಟೆ ತಾಲೋಕಿನ ಮಾಲಂಬಿ ಗ್ರಾಮದಲ್ಲಿರುವ ಅಂಗನವಾಡಿಗೆ ದಿನಾಂಕ 15-04-2019 ರ ರಾತ್ರಿ ಯಾರೋ ಬೀಗ ಮುರಿದು ಒಳ ನುಗ್ಗಿ ಗ್ಯಾಸ್ ಸಿಲಿಂಡರನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ವೇದಕುಮಾರಿಯವರು ದಿನಾಂಕ 23-04-2019 ರಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

             ಸೋಮವಾರಪೇಟೆ ತಾಲೋಕಿನ ಕ್ಯಾತೆ ಗ್ರಾಮದ ನಿವಾಸಿಯಾದ ಕೆಂಚಪ್ಪನವರು ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.