Crime News

ಹಣದ ವಿಚಾರದಲ್ಲಿ ತಂದೆಯ ಕೊಲೆಗೆ ಯತ್ನ:

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೋಕು ಮಣಗಲಿ ಗ್ರಾಮದ ನಿವಾಸಿ ಪುಟ್ಟಸ್ವಾಮಿ ಎಂಬವರು ದಿನಾಂಕ 24-4-2019 ರಂದು ಸಂಜೆ 6-30 ಗಂಟೆ ಸಮಯದಲ್ಲಿ ತಮ್ಮ ಮೋಟಾರ್ ಸೈಕಲಿನಲ್ಲಿ ಮಣಗಲಿ ಗ್ರಾಮದಲ್ಲಿ ಹೋಗುತ್ತಿದ್ದಾಗ ಹಣದ ವಿಚಾರದಲ್ಲಿ ಕೊಲೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಅವರ ಮಗ ಮೇಘಾನಂದ ರವರು ಸ್ವಿಪ್ಟ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು  ಪುಟ್ಟಸ್ವಾಮಿಯವರು ಚಲಾಯಿಸುತ್ತಿದ್ದ ಮೋಟಾರ್‍ ಸೈಕಲಿಗೆ ಡಿಕ್ಕಿಪಡಿಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಮೀನಿನಲ್ಲಿದ್ದ ಬೆಳೆ ನಾಶ, ಕೊಲೆ ಬೆದರಿಕೆ:

ಹಾಸನ ಜಿಲ್ಲೆಯ ಬಳೆಗಾರರ ಬೀದಿಯಲ್ಲಿ ವಾಸವಾಗಿರುವ ಶ್ರೀಮತಿ ಕಮಲಮ್ಮ ಎಂಬವರಿಗೆ ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲಕೊಡ್ಲಿ ಗ್ರಾಮದಲ್ಲಿ ಜಮೀನು ಇದ್ದು ಸದರಿ ಜಮೀನಲ್ಲಿ ಕಾಫಿ  ಸಿಲ್ವರ್ ಮರಳಗಳನ್ನು ಬೆಳೆಸಿದ್ದು, ಜಮೀನಿಗೆ ಸುತ್ತಲೂ ಮುಳ್ಳು ತಂತಿ ಬೇಲಿಯನ್ನು  ಅಳವಡಿಸಿದ್ದು,  ಕೆಲಕೊಡ್ಲಿ ಗ್ರಾಮದ ಶಿವಲಿಂಗಯ್ಯ ಮತ್ತು ದಿನೇಶ ರವರುಗಳು ದಿನಾಂಕ  24-4-2019 ರ  ಹಿಂದಿನ ದಿನಗಳಲ್ಲಿ ಜಾಗದಲ್ಲಿ ಬೆಳೆದಿದ್ದ ಕಾಫಿ, ಸಿಲ್ವರ್ ಗಿಡಗಳನ್ನು ಕಡಿದು ನಾಶಪಡಿಸಿದ್ದು, ಅಲ್ಲದೆ ತಂತಿಬೇಲಿಯನ್ನು ಸಹ ತೆಗೆದು ಹಾನಿ ಪಡಿಸಿ ಶ್ರೀಮತಿ ಕಮಲಮ್ಮನವರ ಪತಿಯವರಿಗೆ ಕೊಲೆ ಬೆದರಿಕಿ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ವಿರಾಜಪೇಟೆ ತಾಲೋಕು ನಾಥಂಗಾಲ ಕುಟ್ಟ ಗ್ರಾಮದ ನಿವಾಸಿ ಪಿ.ಪಿ. ಸುಬ್ರು ಎಂಬವರ ಮಗ ರಾಕೇಶ ಎಂಬ ವ್ಯಕ್ತಿ ದಿನಾಂಕ 23-4-2019 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು. ಇದರ ಸಂಬಂಧ ಮೃತರ ತಂದೆ ಪಿ.ಪಿ. ಸುಬ್ರುರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಪಿಕ್ ಅಪ್ ವಾಹನ ಡಿಕ್ಕಿ:

ಕೇರಳ ರಾಜ್ಯದ ಇರಟ್ಟಿ ನಿವಾಸಿ ಬಬಿನ್ ವರ್ಕಿ ಎಂಬವರು ತನ್ನ ಸ್ನೇಹಿತನೊಂದಿಗೆ ಬೆಂಗಳೂರಿನಿಂದ ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ವಿರಾಜಪೇಟೆ ತಾಲೋಕು ಬಾಳುಗೋಡು ಗ್ರಾಮದಲ್ಲಿ ಮೋಟಾರ್ ಸೈಕಲಿನ ಎದುರುಗಡೆಯಿಂ ದ ಬಂದ ಪಿಕ್ ಅಪ್ ವಾಹನವು ಸದರಿ ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಮೋಟಾರ್ ಸೈಕಲ್ ಜಖಂ ಗೊಂಡಿದ್ದು ಅಲ್ಲದೆ ಮೋಟಾರ್‍ ಸೈಕಲಿನಲ್ಲಿ ಸವಾರಿ ಮಾಡುತ್ತಿದ್ದ ಬಬಿನ್ ವರ್ಕಿ ಹಾಗು ಅವರ ಸ್ನೇಹಿತ ನದಿನ್ ರವರುಗಳಿಗೆ ಗಾಯವಾಗಿದ್ದು ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ ಸೈಕಲಿಗೆ ಅಪರಿಚಿರ ವಾಹನ ಡಿಕ್ಕಿ:

ಮಡಿಕೇರಿ ನಗರದ ಡೈರಿ ಫಾರಂ ಬಳಿ ವಾಸವಿರುವ ಎಂ.ಡಿ. ಮುದ್ದಪ್ಪ ಎಂಬವರು ದಿನಾಂಕ 24-4-2019 ರಂದು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ತಾನು ಕೆಲಸ ಮಾಡುವ ವಾಲ್ನೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಮಡಿಕೇರಿ ಸಮೀಪದ ನೀರುಕೊಲ್ಲಿ ಎಂಬಲ್ಲಿ ಯಾವುದೋ ಅಪರಿಚರ ವಾಹನ ಅವರ ಚಲಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮುದ್ದಪ್ಪನವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯಿಂದ ಕರ್ತವ್ಯ ನಿರತ ವೈದ್ಯರಿಗೆ ಕೊಲೆ ಬೆದರಿಕೆ:

ದಿನಾಂಕ 23-4-2019 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ: ದೇವದಾಸ್ ರವರು ಕರ್ತವ್ಯದಲ್ಲಿದ್ದಾಗ ಚಂದ್ರಶೇಖರ್ ಎಂಬವರು ಪಾನಮತ್ತನಾಗಿ ಆಸ್ಪತ್ರೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಸಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.