Crime News

ಅತ್ಯಾಚಾರ ಪ್ರಕರಣ ಆರೋಪಿಗೆ ಶಿಕ್ಷೆ

ದಿನಾಂಕ 23-08-2016ರಂದು ಕೊಡಗು ಜಿಲ್ಲೆಯ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವಳ ಮೇಲೆ ಆರೋಪಿ ಸಿದ್ದಪ್ಪ @ ಸಿದ್ದು ಎಂಬಾತನು ಮಾರಣಾಂತಿಕ ಹಲ್ಲೆ ಮಾಡಿ ಪಕ್ಕದ ತೋಟಕ್ಕೆ ಎಳೆದುಕೊಂಡು ಹೋಗಿ ಬೆದರಿಕೆ ಹಾಕಿ ಬಲತ್ಕಾರವಾಗಿ ಅತ್ಯಾಚಾರ ಮಾಡಿದ್ದು ಈ ಸಂಬಂಧ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ. 92/2016, ವಿಧಿ: 341,324,506,376 ಐಪಿಸಿ ರೀತಿ ಪ್ರಕರಣ ದಾಖಲಾಗಿದ್ದು, ನಂತರ ದಿನಾಂಕ 01/09/2016 ರಂದು ಆರೋಪಿ ಸಿದ್ದಪ್ಪ @ ಸಿದ್ದು @ ಬುಡ್ಡ  ತಂದೆ:ಮಣಿ, ಪ್ರಾಯ 24 ವರ್ಷ,ಕೂಲಿ ಕೆಲಸ, ಸೀಗೆತೋಡು ಗ್ರಾಮ ಈತನನ್ನು ಪಿರ್ಯಾಧಿಯವರು ನೀಡಿದ ಚಹರೆಯ ಆಧಾರದ ಮೇಲೆ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಈ ಹಿಂದೆ ಇದ್ದ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಪಿ.ಕೆ.ರಾಜುರವರು ನಡೆಸಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಮಾನ್ಯ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಡಿಕೇರಿ ಇಲ್ಲಿ ನಡೆದು, ಆರೋಪಿಯ ವಿರುದ್ಧ ಆರೋಪವು ಸಾಭೀತಾದ ಕಾರಣ ಮಾನ್ಯ ನ್ಯಾಯಾಧೀಶರಾದ ಪವನೇಶ್‍ ರವರು ದಿ:30/01/2018 ರಂದು ಆರೋಪಿ ಸಿದ್ದಪ್ಪ @ ಸಿದ್ದು @ ಬುಡ್ಡ  ತಂದೆ:ಮಣಿ, ಪ್ರಾಯ 24 ವರ್ಷ,ಕೂಲಿ ಕೆಲಸ, ಸೀಗೆತೋಡು ಗ್ರಾಮ ಈತನನ್ನು ಅಪರಾಧಿ ಎಂದು ತೀರ್ಮಾನಿಸಿ ಕೇಸಿನ ಅಂತಿಮ ತೀರ್ಪು ನೀಡಿದ್ದು, ಘನ ನ್ಯಾಯಾಲಯದ ಎಸ್‍.ಸಿ ನಂ.107/2016 ರಲ್ಲಿ ವಿಚಾರಣೆಯಲ್ಲಿ ಆರೋಪಿ ವಿರುದ್ದ ದಿನಾಂಕ 02-05-2018ರಂದು ವಿಧಿ:353(2) ಸಿ.ಆರ್‍.ಪಿ.ಸಿಯಂತೆ ಕಲಂ 341 ಐಪಿಸಿಗೆ 500 ರೂ ದಂಢ ತಪ್ಪಿದಲ್ಲಿ 1 ತಿಂಗಳು ಶಿಕ್ಷೆ, ಕಲಂ 506 ಐಪಿಸಿ 03 ವರ್ಷ ಕಠಿಣ ಶಿಕ್ಷೆ ಹಾಗೂ 3500/- ರೂ ದಂಢ, ತಪ್ಪಿದಲ್ಲಿ 02 ತಿಂಗಳ ಸಾದಾ ಶಿಕ್ಷೆ, ಕಲಂ 376 ಐಪಿಸಿ 10 ವರ್ಷ ಕಠಿಣ ಶಿಕ್ಷೆ, ಹಾಗೂ 10000/- ರೂ ದಂಢ, ತಪ್ಪಿದಲ್ಲಿ 04 ತಿಂಗಳ ಶಿಕ್ಷೆ, ಕಲಂ 307 ಐಪಿಸಿ 08 ವರ್ಷ ಕಠಿಣ ಶಿಕ್ಷೆ, ಹಾಗೂ 10000/- ರೂ ದಂಢ, ತಪ್ಪಿದಲ್ಲಿ 04 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶ್ರೀಮತಿ ಕೃಷ್ಣವೇಣಿರವರು ವಾದ ಮಂಡಿಸಿದ್ದರು.

ಈ ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸ್ ವೃತ್ತ ನಿರೀಕ್ಷಕರರಾದ ಶ್ರೀ ಪಿ.ಕೆ.ರಾಜು ಹಾಗು ತನಿಖೆಗೆ ಸಹಕರಿಸಿದ ಪೊಲೀಸ್ ಸಿಬ್ಬಂದಿಯವರನ್ನು ಶ್ಲಾಘಿಸಿದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್ ರವರು ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

ಯುವಕ ಕಾಣೆ:

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಕರಡಿಗೋಡು ಗ್ರಾಮದ ನಿವಾಸಿ ಬಿ.ವಿ. ಸತೀಶ್ ರೈ ಎಂಬವರ ಮಗ 18 ವರ್ಷ ಪ್ರಾಯದ ಶ್ರೇಯಸ್ ಎಂಬವನು ದಿನಾಂಕ 16-4-2018 ರಂದು ಮನೆಯಿಂದ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಸಂಬಂಧ ಬಿ.ವಿ. ಸತೀಶ್ ರೈ ರವರು  ದಿನಾಂಕ 2-5-2018 ರಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ ಕೊಲೆಗೆ ಯತ್ನ:

ಆಸ್ತಿ ವಿಚಾರದಲ್ಲಿ ವ್ಯಕ್ತಿ ಮೇಲೆ ತನ್ನ ಸಹೋದರ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಯಲಕನೂರು ಗ್ರಾಮದಲ್ಲಿ ನಡೆದಿದೆ.  ಫಿರ್ಯಾದಿ ಕೆ.ಜೆ. ಪ್ರಸನ್ನ ಎಂಬವರ ತಂದೆಯವರಿಗೆ ಸೋಮವಾರಪೇಟೆ ತಾಲೋಕಿನ ಶಾಂತಳ್ಳಿ  ಮತ್ತು ಹೊಸಳ್ಳಿ ಗ್ರಾಮದಲ್ಲಿ ಕಾಫಿ ತೋಟವಿದ್ದು, ಸದರಿ ಆಸ್ತಿಯನ್ನು ಪಾಲು ಮಾಡಿಕೊಡದ ವಿಚಾರದಲ್ಲಿ ಕೆ.ಜೆ. ಪ್ರಸನ್ನ ರವರ ಸಹೋದರ ಲತೇಶ ಎಂಬವರು ದಿನಾಂಕ 1-5-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಪ್ರಸನ್ನರವರ ಮನೆಗೆ ಬಂದು ಆಸ್ತಿ ಪಾಲುಮಾಡಿಕೊಡದ ವಿಚಾರದಲ್ಲಿ ಜಗಳ ಮಾಡಿದ್ದು ಅಲ್ಲದೆ ಪ್ರಸನ್ನರವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿ ಕೊಲೆಗೆ ಯತ್ನಿಸಿದ್ದು ಅಲ್ಲದೆ ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆಂದು ನೀಡಿದ ದೂರಿನನ್ವಯ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿದ ಬಾಲಕ ಸಾವು:

ಆಟವಾಡುತ್ತಿದ್ದಾದ  ಆಕಸ್ಮಿಕವಾಗಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ 5 ವರ್ಷದ ಬಾಲಕ ಸಾವನಪ್ಪಿದ ಘಟನೆ ನಡೆದಿದೆ.  ಪೊನ್ನಂಪೇಟೆ ಪೊಲೀಸ್ ಠಾಣೆ ಸರಹದ್ದಿನ ಬಾಳೆಲೆ ಗ್ರಾಮದ ನಿವಾಸಿ ಸಿ.ಎಂ ಪೂಣಚ್ಚ ಎಂಬವರ ಮಗ ಡಿಕ್ಕಿ ದೇವಯ್ಯ ಎಂಬವ ದಿನಾಂಕ 1-5-2018ರಂದು ಆಟವಾಡಿಕೊಂಡಿರುವಾಗ್ಗೆ ಆಕಸ್ಮಿಕವಾಗಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ಸದರಿ ಬಾಲಕ ಸಾವನಪ್ಪಿರುವ ಬಗ್ಗೆ ತಿಳಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನೆಲೆ ದಾರಿ ತಡೆದು ಹಲ್ಲೆ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಮೈಸೂರಮ್ಮ ಕಾಲೋನಿ ನಿವಾಸಿ ಕೆ.ಸಿ. ವಿನೋದ ಎಂಬವರು ದಿನಾಂಕ 30-4-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಗೋಣಿಕೊಪ್ಪದ ಬೈಪಾಸ್ ರಸ್ತೆಯಲ್ಲಿ ತನ್ನ ಆಟೋವನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ  ರಸ್ತೆಯಲ್ಲಿ ಆರೋಪಿಗಳಾದ ಕೆ. ರಾಮು ಹಾಗು ಎಲ್. ಅಯ್ಯಪ್ಪ ಎಂಬವರುಗಳು ನಿಂತಿದ್ದು, ವಿನೋದ್ ರವರ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಹಳೇ ದ್ವೇಷದಿಂದ ಜಗಳ ಮಾಡಿ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖಡ ಕೈಗೊಂಡಿದ್ದಾರೆ.

Leave a Reply

Your email address will not be published.