Crime News

ಹಲ್ಲೆ ಪ್ರಕರಣ

          ದಿನಾಂಕ 21-04-2019 ರಂದು ವಿರಾಜಪೇಟೆ ತಾಲೋಕಿನ ತಿತಿಮತಿಯ ಭದ್ರಗೋಳ ಗ್ರಾಮದ ನಿವಾಸಿಯಾದ ಹರೀಶರವರು ಬೋಜರವರೊಂದಿಗೆ ಬೈಕಿನಲ್ಲಿ ಮನೆಗೆ ಹೋಗುತ್ತಿರುವಾಗ ಸೈಡ್ ಕೊಡುವ ವಿಚಾರದಲ್ಲಿ ದೋಸ್ತ್ ವಾಹನದಲ್ಲಿದ್ದವರೊಂದಿಗೆ ಜಗಳವಾಗಿದ್ದು, ಇದೇ ವಿಚಾರದಲ್ಲಿ ದೋಸ್ತ್ ವಾಹನದಲ್ಲಿದ್ದ ತಿತಿಮತಿಯ ನಿವಾಸಿಗಳಾದ ಲೋಹಿತ್, ಸುನಿಲ್ ಮತ್ತು ಮನುರವರು ಹರೀಶರವರ ಮನೆಯ ಹತ್ತಿರ ಹೋಗಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಹರೀಶರವರು ದಿನಾಂಕ 26-04-2019 ರಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಮೋಟಾರು ಸೈಕಲ್ ಡಿಕ್ಕಿ

         ದಿನಾಂಕ 25-04-2019 ರಂದು ಕುಶಾಲನಗರದ ಬಸವನಹಳ್ಳಿಯ ನಿವಾಸಿ ಸಣ್ಣಯ್ಯರವರು ಗುಡ್ಡೆಹೊಸೂರುವಿನಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ತೇಜ್ ಪೂಣಚ್ಚ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಸಣ್ಣಯ್ಯನವರಿಗೆ ಡಿಕ್ಕಿಪಡಿಸಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಕಡವೆ ಬೇಟೆ ; ಬಂಧನ

          ವಿರಾಜಪೇಟೆ ತಾಲೋಕಿನ ಕುಟ್ಟ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ಬೇಟೆಯಾಡಿ ಕಡವೆಯನ್ನು ಕೊಂದು ವಾಹನದಲ್ಲಿ ಸಾಗಿಸುತ್ತಿದ್ದವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್‌ ಡಿ ಪೆನ್ನೇಕರ್‌ರವರ ಮಾರ್ಗದರ್ಶನದಲ್ಲಿ  ಜಿಲ್ಲಾ ಡಿಸಿಐಬಿ ತಂಡ ದಿನಾಂಕ 27-04-2019 ರಂದು ಬೆಳಿಗ್ಗೆ ಕುಟ್ಟ-ಇರ್ಪು ಜಂಕ್ಷನ್ ಬಳಿ ಪತ್ತೆ ಹಚ್ಚಿ ಆರೋಪಿಗಳಾದ ಬೇಗೂರು ಗ್ರಾಮದ ಮಾಪಿಳ್ಳೆ ತೋಡು ನಿವಾಸಿಗಳಾದ ಸಿದ್ದಿಕ್, ಎಂ. ಹೆಚ್. ಸಮೀರ್, ಎ. ಯು. ಸಮೀರ್ ಮತ್ತು ಕುಂಜಿಲ ಗ್ರಾಮದ ನಿವಾಸಿಗಳಾದ ಇಸ್ಮಾಯಿಲ್, ಯೂಸುಫ್ ಮತ್ತು ಮೊಹಮ್ಮದ್ ರವರನ್ನು ಬಂಧಿಸಿ, ಅವರಿಂದ 100-150 ಕೆ ಜಿ ತೂಕದ ಕಡವೆ ಮಾಂಸ, ಜಿತೋ ಗೂಡ್ಸ್ ವಾಹನ, ಮಾರುತಿ ಸೆಲರಿಯೋ ಕಾರು ಮತ್ತು ಬಂದೂಕನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

            ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ನಿರೀಕ್ಷಕ ನಾಗೇಶ್‌, ಸಿಬ್ಬಂದಿಗಳಾದ ಅನಿಲ್‌ ಕುಮಾರ್, ಯೋಗೇಶ್‌ ಕುಮಾರ್‌, ವಸಂತ್, ನಿರಂಜನ್ ಮತ್ತು ಚಾಲಕ ಶಶಿಕುಮಾರ್‌ರವರು ಭಾಗವಹಿಸಿದ್ದರು.