Crime News

ಹಲ್ಲೆ ಪ್ರಕರಣ

          ದಿನಾಂಕ 25-04-2019 ರಂದು ಚೆಯ್ಯಂಡಾಣೆ ಗ್ರಾಮದ ನಿವಾಸಿಯಾದ ಶಂಕರರವರು ಕೊಡಗದಾಳು ಗ್ರಾಮದ ಪಾಕ ಎಂಬಲ್ಲಿಗೆ ತಿಥಿ ಕರ್ಮಾಂತರಕ್ಕೆ ಹೋಗಿ ವಾಪಾಸ್ಸು ಬರುತ್ತಿರುವಾಗ ಕೊಡಗದಾಳು ಗ್ರಾಮದ ನಿವಾಸಿಗಳಾದ ರನ್ನು, ಪ್ರಕಾಶ್ ಮತ್ತು ಕರ್ಣರವರು ಜೀಪನ್ನು ತಡೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

               ವಿರಾಜಪೇಟೆ ತಾಲೋಕಿನ ನಾಲ್ಕೇರಿ ಗ್ರಾಮದಲ್ಲಿರುವ ಸುಬ್ರಮಣ್ಯ ದೇವಸ್ಥಾನಕ್ಕೆ ದಿನಾಂಕ 27-04-2019 ರಂದು ಯಾರೋ ಕಳ್ಳರು ನುಗ್ಗಿ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು 9000-10000 ರೂಗಳನ್ನು ಹಾಗೂ ಕತ್ತಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮರ ಬಿದ್ದು ವ್ಯಕ್ತಿಯ ಸಾವು

                ದಿನಾಂಕ 27-04-2019 ರಂದು ಸೋಮವಾರಪೇಟೆ ತಾಲೋಕಿನ ಕಿರುದಾರೆ ಗ್ರಾಮದ ಬಿಜಾಂಜಿ ಎಸ್ಟೇಟ್ ನಲ್ಲಿ ಕಿಬ್ಬೆಟ್ಟ ಗ್ರಾಮದ ಪುರುಷೋತ್ತಮ, ಗರಗಂದೂರು ಗ್ರಾಮದ ಮಂಜ ಮರ ಕಡಿಯುತ್ತಿರುವಾಗ ಕೆಳಗ ಕೆಲಸ ಮಾಡುತ್ತಿದ್ದ ಮೋಹನರವರ ಮೇಲೆ ಕಡಿದ ಸಿಲ್ವರ್ ಮರ ಬಿದ್ದು ಮೃತಪಟ್ಟಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ

            ದಿನಾಂಕ 27-04-2019 ರಂದು ಸೋಮವಾರಪೇಟೆ ತಾಲೋಕಿನ ಹಳೆ ಗೋಟೆ ಗ್ರಾಮದ ನಿವಾಸಿ ಬಸಪ್ಪ ಎಂಬುವವರು ತನ್ನ ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಬಸಪ್ಪರವರನ್ನು ವಶಕ್ಕೆ ಪಡೆದುಕೊಂಡು 180 ಎಂ ಎಲ್ ನ 14 ಟೆಟ್ರಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ

ಹಲ್ಲೆ ಪ್ರಕರಣ

           ದಿನಾಂಕ 26-04-2019 ರಂದು ಶನಿವಾರಸಂತೆಯ ಸುಳುಗಳಲೆ ಕಾಲೋನಿ ನಿವಾಸಿ ಸಂಜಯ ರವರು ಇತರರೊಂದಿಗೆ ಶಾಲಾ ಮೈದಾನದಲ್ಲಿ ಆಟವಾಡುತ್ತಿರುವಾಗ ನೀರಿನ ಪೈಪು ಒಡೆದು ಹಾಕಿರುವ ವಿಚಾರದಲ್ಲಿ ಸಣ್ಣರವರು ಹಲ್ಲೆ ನಡೆಸಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.