Crime News

ವಾಹನ ಅಪಘಾತ ಮಹಿಳೆಗೆ ಗಾಯ:

ಮಡಿಕೇರಿ ನಗರದ ಆಜಾದ್‍ನಗರದ ನಿವಾಸಿ ಶ್ರೀಮತಿ ನಜಮುನ್ನೀಸ ಎಂಬವರು ದಿನಾಂಕ 27-4-2019 ರಂದು ಮಡಿಕೇರಿಯಿಂದ ಕೊಟ್ಟಮುಡಿಗೆ ರಿಕ್ಷಾದಲ್ಲಿ ಹೋಗುತ್ತಿದ್ದಾಗ ಬೆಟ್ಟಗೇರಿ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಟಿ.ಟಿ. ವಾಹನವೊಂದು ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ ರಿಕ್ಷಾ ಜಖಂಗೊಂಡಿದ್ದು ರಿಕ್ಷಾದಲ್ಲಿದ್ದ ನಜಮುನ್ನೀಸ ರವರಿಗೆ ಗಾಯಗಳಾಗಿ ಸದರಿಯವರು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ವಿಚಾರದಲ್ಲಿ ಜಗಳ, ಹಲ್ಲೆ:

ಮಡಿಕೇರಿ ತಾಲೋಕು ಮರಗೋಡು ಗ್ರಾಮದ ನಿವಾಸಿ ಎಂ.ಮುತ್ತಪ್ಪ ತನ್ನ  ಅಣ್ಣ ಮಂಜು ರವರ ಜೊತೆಯಲ್ಲಿ ದಿನಾಂಕ 27-4-2019 ರಂದು ಸಂಜೆ 7-30 ಗಂಟೆಗೆ ತನ್ನ ಪತ್ನಿಯ ಮನೆಗೆ ಹೋಗಿದ್ದು ಸದರಿ ಮನೆಯ ಪಕ್ಕದ ಮನೆಯವರಾದ ಮಹೇಶ್, ಭವಾನಿ ಮತ್ತು ಕಾಂತು ಎಂಬವರುಗಳು ಮುತ್ತಪ್ಪನವರು ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದ ವಿಚಾರದಲ್ಲಿ ಜಗಳ ಮಾಡಿ ಕೈಯಿಂದ ಹಾಗು ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟು ಮಾಡಿದ್ದಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿಯ ಬ್ಯಾಟರಿ ಮತ್ತು ಡೀಸಿಲ್ ಕಳವು:

ಮಡಿಕೇರಿ ನಗರದ ನಿವಾಸಿ ಶರೀನ್ ಎಂಬವರಿಗೆ ಸೇರಿದ ಕರಣ್ ಟ್ರಾನ್ಸ್‍ಪೋರ್ಟ್ ರವರು ಮಡಿಕೇರಿ-ಸಂಪಾಜೆ ಹೈವೇ ಯನ್ನು ಡಾಮರೀಕರಣ ಕಾರ್ಯ ನಿರ್ವಹಿಸುತ್ತಿದ್ದು ಸದರಿ ಟ್ರಾನ್ಸ್‍ ಪೋರ್ಟ್‍ಗೆ ಸೇರಿದ ಲಾರಿಯನ್ನು ದಿನಾಂಕ 27-4-2019 ರಂದು ಸಂಜೆ ಚಾಲಕರಾದ ಸಾಜುರವರು  ಕಾಟಕೇರಿ ಶಾಲೆಯ ಬಳಿ ನಿಲ್ಲಿಸಿ ಹೋಗಿದ್ದು, ಸದರಿ ಲಾರಿ ಬ್ಯಾಟರಿಯನ್ನು ಮತ್ತು ಲಾರಿಯ ಟ್ಯಾಂಕ್‍ ನಿಂದ 30 ಲೀಟರ್‍ ಡೀಸೆಲ್‍ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಈ ಸಂಬಂಧ ಕರಣ್ ಟ್ರಾನ್ಸ್‍ಪೋರ್ಟ್ನ ಮ್ಯಾನೇಜರ್‍ ಬಿ.ಸಿ. ರೋಷನ್‍ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಕತ್ತಯಿಂದ ಕಡಿದು ಮಹಿಳೆಯ ಕೊಲೆಗೆ ಯತ್ನ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮರಗೋಡು ಗ್ರಾಮದ ನಿವಾಸಿ ಪಿ.ಕೆ. ಚಂದ್ರಕುಮಾರ ಎಂಬವರು ದಿನಾಂಕ 27-4-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಮನೆಯಲ್ಲಿದ್ದಾಗ ಅದೇ ಗ್ರಾಮದ ಮುತ್ತಪ್ಪ ಎಂಬವರು ಬಂದು ವಿನಾಕಾರಣ ಪಿ.ಕೆ. ಚಂದ್ರಕುಮಾರ ರವರ ತಾಯಿ  ಪಿ.ಕೆ. ಭವಾನಿರವರ ಮೇಲೆ ಕತ್ತಯಿಂದ ಹಲ್ಲೆ ನಡೆಸಿ ಕೊಲೆಗೆ ಪ್ರಯತ್ನಿಸಿದ್ದು, ಪಿ.ಕೆ. ಭವಾನಿಯವರು ತೀವ್ರವಾಗಿ ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ್ವರದಿಂದ ಮಹಿಳೆಯ ಸಾವು, ಪ್ರಕರಣ ದಾಖಲು:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದ ನಿವಾಸಿ  ಲೋಕೇಶ ಎಂಬವರ ಪತ್ನಿ ಶ್ರೀಮತಿ ಲತಾ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಆಕೆಯನ್ನು ಚಿಕಿತ್ಸೆಗಾಗಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸದರಿ ಶ್ರೀಮತಿ ಲತಾರವರು 27-4-2019 ರಂದು ಮೃತಪಟ್ಟಿದ್ದು, ಈ ಸಂಬಂಧ ಮೃತರ ಪತ್ನಿ ಶ್ರೀಮತಿ ಮಾದೆಗಂಡ ಮೊದುರ ಎಂಬವರು ಶ್ರೀಮತಿ ಲತಾರವರ ಸಾವಿನ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಳೇ ದ್ವೇಷದ ಹಿನ್ನಲೆ ಪರಸ್ಪರ ಹಲ್ಲೆ:

ದಿನಾಂಕ 27-04-2019 ರಂದು ಪೊನ್ನಂಪೇಟೆ ಠಾಣ ಸರಹದ್ದಿನ ಬೇಗೂರು ಗ್ರಾಮದ ನಿವಾಸಿ ಮಂಡೆಗಡ ಮಾದಪ್ಪ ಹಾಗು ಮಗ ಬೋಪಣ್ಣ  ಮತ್ತು ಎನ್‍.ಪಿ ಮನು ಹಾಗು ಅವರ ಅಣ್ಣ ಈಶರವರ ನಡುವೆ ಹಳೇ ದ್ವೇಷದಿಂದ ಜಗಳ ಏರ್ಪಟ್ಟು ಪರಸ್ಪರ ಹಲ್ಲೆ ಮಾಡಿಕೊಂಡು ಪರಸ್ಪರ ಜೀವ ಬೆದರಿಕೆ ಒಡ್ಡಿರುವ ಸಂಬಂಧ   ಮಂಡೆಗಡ ಮಾದಪ್ಪ  ಹಾಗೂ ಮನು ರವರು ಪೊನ್ನಂಪೇಟೆ ಪೊಲೀಸರು ಠಾಣೆಯಲ್ಲಿ ನೀಡಿದ ದೂರಿಗಳನ್ವಯ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.