Crime News

ರಸ್ತೆ ಅಪಘಾತ

ದಿನಾಂಕ 28/04/2019ರಂದು ಹಾಸನ ನಿವಾಸಿ ಚೇತನ್ ಎಂಬವರು ಅವರ ಇನ್ನೋವಾ ಕಾರಿನಲ್ಲಿ ಸ್ನೇಹಿತರಾದ ಹೆಚ್‌.ಎನ್. ಮಹೇಶ್‌ ಎಂಬವರೊಂದಿಗೆ ಮಡಿಕೇರಿಯಿಂದ ಹಾಸನಕ್ಕೆ ಹೋಗುತ್ತಿರುವಾಗ ಮಹೇಶ್‌ರವರು ಕಾರನ್ನು ಚಾಲಿಸುತ್ತಿದ್ದು ಸುಂಟಿಕೊಪ್ಪ ಬಳಿಯ ಕೊಡಗರಹಳ್ಳಿ ಬಳಿ ಮಹೇಶ್‌ರವರು ಮುಂದೆ ಹೋಗುತ್ತಿದ್ದ ಲಾರಿಯೊಂದನ್ನು ಹಿಂದಿಕ್ಕಿ ರಸ್ತೆ ಬದಿಗೆ ತಿರುಗಿಸಿದಾಗ ಕಾರು ಮಹೇಶ್‌ರವರ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿಕೊಂಡು ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 28/04/2019ರಂದು ಸುಂಟಿಕೊಪ್ಪ ಬಳಿಯ ಮತ್ತಿಕಾಡು ನಿವಾಸಿ ಅಕ್ಷಯ್ ಎಂಬವರು ಸುಂಟಿಕೊಪ್ಪ ಬಳಿಯ ಮತ್ತಿಕಾಡಿನ ದೇವಸ್ಥಾನದ ಬಳಿ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಅದೇ ಗ್ರಾಮದ ನಿವಾಸಿ ಹರೀಶ್‌ ಎಂಬವರು ಅಲ್ಲಿಗೆ ಬಂದು ಹಳೆ ವೈಷಮ್ಯದಿಂದ ಜಗಳವಾಡಿ ಕತ್ತಿಯಿಂದ ಅಕ್ಷಯ್‌ರವರ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 29/04/2019ರಂದು ಕುಶಾಲನಗರ ಬಳಿಯ ಕೂಡ್ಲೂರು ನಿವಾಸಿ ಕುಸುಮಾ ಎಂಬವರು ಅವರ ಮನೆಯಲ್ಲಿರುವಾಗ ಅಲ್ಲಿಗೆ ಬಂದ ನೆರೆ ಮನೆಯ ರವಿ, ಸುನೀತಾ ಮತ್ತು ಪದ್ಮ ಎಂಬವರು ಬಂದು ಹಣದ ವಿಚಾರವಾಗಿ ಜಗಳವಾಡಿ ಕುಸುಮಾರವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಹಳೆ ದ್ವೇಷ ; ವ್ಯಕ್ತಿ ಕೊಲೆ ದಿನಾಂಕ 29/04/2019ರಂದು ಪೊನ್ನಂಪೇಟೆ ಬಳಿಯ ಬೆಕ್ಕೆಸೊಡ್ಲೂರು ನಿವಾಸಿ ಪಣಿಎರವರ ನಾಗ ಎಂಬವರು ಲಕ್ಷ್ಮಣ ತೀರ್ಥ ನದಿಯ ಬಳಿ ಇದ್ದಾಗ ಅಲ್ಲಿಗೆ ಬಂದ ಪಣಿಎರವರ ಗಣೇಶ, ಪಣಿ ಎರವರ ಮಣಿ ಮತ್ತು ಪಣಿ ಎರವರ ಬಸವ ಎಂಬವರು ಸೇರಿಕೊಂಡು ಹಳೆ ವೈಷಮ್ಯದಿಂದ ನಾಗರವರೊಂದಿಗೆ ಜಗಳವಾಡಿ ದೊಣ್ಣೆಯಿಂದ ಹೊಡೆದು ಬೀಳಿಸಿ ಕಲ್ಲನ್ನು ತಲೆಯ ಭಾಗಕ್ಕೆ ಎತ್ತಿಹಾಕಿದ್ದು ಗಾಯಗೊಂಡ ನಾಗರವರು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ