Crime News

ಮಹಿಳೆ ಕಾಣೆ

ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಬಲ್ಲಮಾವಟಿ ಗ್ರಾಮದ ನಿವಾಸಿ ಟಿ.ಎಸ್. ಐಶ್ವರ್ಯ ಎಂಬವರ ತಾಯಿ ಎ.ಜಿ. ಉಷಾ ಎಂಬವರು ಕೆಲವು ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ದಿನಾಂಕ 26-4-2019 ರಂದು ಬೆಳಿಗ್ಗೆಯಿಂದ ಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಟಿ.ಎಸ್. ಐಶ್ವರ್ಯರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ದ್ವೇಷ, ವ್ಯಕ್ತಿ ಮೇಲೆ ಹಲ್ಲೆ:

ಸಿದ್ದಾಪುರ ಠಾಣಾ ಸರಹದ್ದಿನ ಹಾಲುಗುಂದ ಗ್ರಾಮದ ನಿವಾಸಿ ಪಿ.ಎ. ಲಕ್ಷ್ಮಣ ಎಂಬವರು ದಿನಾಂಕ 30-4-2019 ರಂದು ಹಾಲುಗುಂದ ಗ್ರಾಮದಲ್ಲಿ ತಮ್ಮ ಸ್ನೇಹಿತರೊಂದಿಗೆ ಮಾತನಾಡಿಕೊಂಡಿರುವಾಗ್ಗೆ ಅದೇ ಗ್ರಾಮದ ಪಿ.ಕೆ. ಉತ್ತಯ್ಯ ಎಂಬವರು ಅಲ್ಲಿಗೆ ಬಂದು ಹಳೇ ದ್ವೇಷದಿಂದ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಕೈಕೇರಿ ಗ್ರಾಮದ ನಿವಾಸಿ ಹೆಚ್.ಎ. ಮೋಟಯ್ಯ ಎಂಬವರು ದಿನಾಂಕ 30-4-2019 ರಂದು ತಮ್ಮ ಮೆನೆಯ ಮುಂದುಗಡೆ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗಾಂಜಾ ಸೇವನೆ:

ವಿರಾಜಪೇಟೆ ನಗರದ ಬ್ರೈಟ್ ಸ್ಕೂಲ್ ಮೈದಾನದಲ್ಲಿ  ದಿನಾಂಕ 30-4-2019 ರಂದು ಅಪರಾಹ್ನ 3-30 ಗಂಟೆಗೆ  ವಿರಾಜಪೇಟೆ ಸಮೀಪದ ಕಲ್ಲುಬಾಣೆ ನಿವಾಸಿಗಳಾದ  ಮಿಥುನ್ ಹಾಗು ಶಿಯಾಬ್ ಎಂಬವರು ಅಕ್ರಮವಾಗಿ ಮಾದಕ ಪದಾರ್ಥವಾದ ಗಾಂಜಾವನ್ನು ಸೇವನೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ವಿರಾಜಪೇಟೆ ನಗರ ಠಾಣಾ ಪಿ.ಎಸ್.ಐ. ಆರ್. ಸಂತೋಷ್ ಕಶ್ಯಪ್ ಹಾಗು ಸಿಬ್ಬಂದಿಗಳು ಆರೋಪಿಗಳಾದ ಮಿಥುನ್ ಹಾಗು ಶಿಯಾಬ್‍ ರವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪತಿಯ ಕಿರುಕುಳ ಮಹಿಳೆ ಆತ್ಮಹತ್ಯೆ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಅರಪಟ್ಟು ಗ್ರಾಮದ ನಿವಾಸಿ ಹರೀಶ್ ಕುಮಾರ್ ರವರ ಪತ್ನಿ ಶ್ರೀಮತಿ ಪ್ರಮಿಳ ಎಂಬವರು ದಿನಾಂಕ 19-4-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,  ಈಕೆಯ ಗಂಡ ಹರೀಶ್ ಕುಮಾರ್‍ರವರು  2ನೇ ಮದುವೆಯಾಗಿ ತನ್ನ ಮೊದಲ ಪತ್ನಿ ಶ್ರೀಮತಿ ಪ್ರಮೀಳರವರನ್ನು ಮಾನಸಿಕ ಹಾಗು ದೈಹಿಕ ಹಿಂಸಿಸುತ್ತಿದ್ದ ಕಾರಣ ಸದರಿ ಪ್ರಮೀಳರವರು ನೊಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಮೃತರ ತಾಯಿ ಶ್ರೀಮತಿ ಪ್ರೇಮರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿನಾ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ 27.04.2019 ರಂದು ಪಿರಿಯಾಪಟ್ಟಣ ನಿವಾಸಿ ಹೆಚ್‍.ಯು. ದಿಗಂತ ಎಂಬವರು  ತನ್ನ ತಮ್ಮ ನಿಧಿಯೊಂದಿಗೆ  ಹೆಬ್ಬಾಲೆಯ ನಂದಿನಿ ಚಾಟ್ಸ್ ಹೊಟೇಲ್ ಬಳಿ ನಿಂತಿರುವಾಗ ಸಮಯ 19.45 ಗಂಟೆ ಸುಮಾರಿಗೆ ಗಣೇಶ ಎಂಬವರು ಬಂದು ದಿಗಂತ್ ಯಾರು ಎಂದು ಕೇಳಿ ಏಕಾಏಕಿ ದಿಗಂತ್ ನವರ ಮುಖಕ್ಕೆ ಹೊಡೆದು ಕಬ್ಬಿಣದ ರಾಡಿನಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿದ ಬಗ್ಗೆನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಾಯಿ ಮಗಳ ಕೊಲೆ:

ಸೋಮವಾರಪೇಟೆ ತಾಲೋಕು      ದೊಡ್ಡಮಳ್ತೆ ಗ್ರಾಮದ ನಿವಾಸಿ ಶ್ರೀಮತಿ ಕವಿತಾ ಹಾಗು ಆಕೆಯ ಮಗಳಾದ ಜಗಶ್ರೀ ರವರನ್ನು ದಿನಾಂಕ 30-4-2019 ದೊಡ್ಡಮಳ್ತೆ ಗ್ರಾಮದಲ್ಲಿರುವ ಅವರ ತೋಟದಲ್ಲಿ ಯಾರೋ ಯಾವುದೋ ಆಯುಧದಿಂದ ಕಡಿದು ಕೊಲೆ ಮಾಡಿದ್ದು,  ಅವರ ತೋಟದ ಪಕ್ಕದ ಜಾಗದಲ್ಲಿ ಮನೆ ಕಟ್ಟುತ್ತಿರುವ ದಿಲೀಪ ಎಂಬವರು ಈ ಕೊಲೆಯನ್ನು ಮಾಡಿರಬಹುದಾಗಿ ಸಂಶಯವಿರುದಾಗಿ ಮೃತರ ಸಹೋದರಿಯಾದ ಶ್ರೀಮತಿ ವನಿತರವರು ನೀಡಿದ ದೂರಿನ  ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.