Crime News

ಮನುಷ್ಯ ಕಾಣೆ:

ವಿರಾಜಪೇಟೆ ತಾಲೋಕು ಹಾಲುಗುಂದ ಗ್ರಾಮದ ನಿವಾಸಿ ಶ್ರೀಮತಿ ಪಿ.ಎಸ್. ರತಿ ಎಂಬವರ ಪತಿ ಸಂಜೀವ ಎಂಬವರು ದಿನಾಂಕ 18-4-2019 ರಂದು ರಾತ್ರಿ ತಾನು ವಾಸವಾಗಿರುವ ಲೈನುಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ಪತ್ನಿ ಶ್ರೀಮತಿ ಪಿ.ಎಸ್. ರತಿ ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಲ್ಲಿಸಿದ್ದ ಜೆಸಿಬಿಗೆ ಕಾರು ಡಿಕ್ಕಿ:

ಮಂಗಳೂರಿನ ಮೊಗರು ಗ್ರಾಮದ ನಿವಾಸಿ ಬಿ. ಶಿವರಾಜ್ ಎಂಬವರು ತನ್ನ ಸಂಸಾರದೊಂದಿಗೆ ಕಾರಿನಲ್ಲಿ ಮಂಗಳೂರಿನಿಂದ ಮಡಿಕೇರಿಗೆ ದಿನಾಂಕ 1-5-2019 ರಂದು ಬರುತ್ತಿರುವಾಗ್ಗೆ ಕಾಟಕೇರಿ ಗ್ರಾಮದಲ್ಲಿ ಮುಂದುಗಡೆಯಿಂದ ಬರುತ್ತಿದ್ದ ಕಾರೊಂದಕ್ಕೆ ಜಾಗಕೊಡುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಜೆಸಿಬಿ ವಾಹನಕ್ಕೆ ಡಿಕ್ಕಿಯಾಗಿ ಕಾರು ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮವಾಗಿ ಕಾರಿನ ಚಾಲಕ ಬಿ.ಶಿವರಾಜ್ ಹಾಗು ಅವರ ಮಗಳಾದ ಶ್ರಾವ್ಯಳಿಗೂ ಗಾಯಗಳಾಗಿರುತ್ತವೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರದಿಂದ ಬಿದ್ದು ವ್ಯಕ್ತಿ ದುರ್ಮರಣ:

ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಪರಗಟಕೇರಿ ಗ್ರಾಮದ ಅಣ್ಣಾಳಮಾಡ ತಿಮ್ಮಯ್ಯ ಎಂಬವರ ತೋಟದ ಲೈನುಮನೆಯಲ್ಲಿ ವಾಸವಾಗಿದ್ದ ಎರವರ ರಾಜು ಎಂಬವರು ದಿನಾಂಕ 30-4-2019 ರಂದು ಪರಗಟಕೇರಿ ಗ್ರಾಮದ ಕಾಳಿಮಾಡ ಮುತ್ತಪ್ಪ ಎಂಬವರ ಕಾಫಿತೋಟದಲ್ಲಿ  ಮರದ ಕೊಂಬೆಗಳನ್ನು ಕಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮರದಿಂದ ಬಿದ್ದು ಮುರ್ಮರಣಕ್ಕೀಡಾಗಿದ್ದು, ಕಾಳಿಮಾಡ ಮುತ್ತಪ್ಪನವರು ನೀಡಿದ ದೂರಿನ  ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯಮಾರಾಟ ವ್ಯಕ್ತಿಯ ಬಂಧನ:

ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕುಟ್ಟ ಪೊಲೀಸರು ಬಂಧಿಸಿದ್ದಾರೆ.  ದಿನಾಂಕ 1-5-2019 ರಂದು ಶ್ರೀಮಂಗಲ ಠಾಣಾಧಿಕಾರಿ ಕೆ.ಹೆಚ್. ಮೊಹಿದ್ದೀನ್ ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಠಾಣಾ ಸರಹದ್ದಿನ ನಾಥಂಗಾಲ ಕುಟ್ಟ ಗ್ರಾಮದಲ್ಲಿ  ನಾಥಂಗಾಲದ ಉಳ್ಳಿಪಾರೆ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಕುಟ್ಟ ನಾಥಂಗಾಲ ಗ್ರಾಮದ ನಿವಾಸಿ ಟಿ.ಎನ್. ಚಂದ್ರ ಎಂಬವರ ಮೇಲೆ ದಾಳಿ ಮಾಡಿ ರೂ.60.64 ಬೆಲೆಯ 7 ಮದ್ಯ ತುಂಬಿದ 180 ಎಂ.ಎಲ್ ಒರಿಜಿನಲ್ ಚಾಯಿಸ್ ಬ್ರಾಂದಿ ಪ್ಯಾಕೇಟ್‍ಗಳನ್ನು  ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ನಿವಾಸಿ 52 ಪ್ರಾಯದ ದೇವದಾಸ ಎಂಬವರು ದಿನಾಂಕ 15-11-2018 ರಂದು ಮನೆಯಿಂದ ಹೊರಗೆ ಹೋಗಿಬರುವುದಾಗಿ ಹೇಳಿ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಕಾಣೆಯಾದ ವ್ಯಕ್ತಿಯ ಮಗ ಟಿ.ಕೆ. ಕಿರಣ ಎಂಬವರು ದಿನಾಂಕ 1-5-2019 ರಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹುದುಗೂರು ಗ್ರಾಮದ ನಿವಾಸಿ ಶ್ರೀಮತಿ ಎಸ್.ಪಿ. ರತ್ನಮ್ಮ ನವರ ಗಂಡ ಪುಟ್ಟಣ್ಣಚಾರ್ ಎಂಬವರು ದಿನಾಂಕ 29-4-2019 ರಂದು ಅರಣ್ಯ ಇಲಾಖೆಯ ನರ್ಸರಿಯಿಂದ ಕೆಲಸ ಮುಗಿಸಿ ಮನೆಯ ಕಡೆಗೆ ಹೋಗುತ್ತಿದ್ದಾಗ ನಾರಾಯಣ ಹಾಗು ಜಮುನ ಎಂಬವರುಗಳು ಹಳೆ ದ್ವೇಷದಿಂದ ಪುಣ್ಣಚ್ಚಾಚಾರ್ ರವರನ್ನು ದಾರಿಯಲ್ಲಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು:

ದಿನಾಂಕ 1-5-2019 ರಂದು ಸೋಮವಾರಪೇಟೆ ಠಾಣಾ ಸರಹದ್ದಿನ ಅಲೋಕಾ ಬಾರ್ ಮುಂದುಗಡೆ ಇಬ್ಬರು ವ್ಯಕ್ತಿಗಳು ಗಲಾಟೆ ಮಾಡುತ್ತಿದ್ದ ಸ್ಥಳಕ್ಕೆ ಕರ್ತವ್ಯಕ್ಕೆ ಹೋದ ಸೋಮವಾರಪೇಟೆ ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಕೆ.ಪಿ. ಮೋಹನ ಮತ್ತು ಶಿವಕುಮಾರ್‍ರವರನ್ನು ಗಲಾಟೆ ಮಾಡುತ್ತಿದ್ದ  ತಾಕೇರಿ ಗ್ರಾಮದ ಕೆ.ಡಿ. ರಕ್ಷಿತ್ ಮತ್ತು ಕೆ.ಕೆ. ನಾಗೇಶ್‍ ಎಂಬವರು ಪೊಲೀಸ್ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೆ  ಹಲ್ಲೆ ಮಾಡಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.