Crime News

ರಸ್ತೆ ಅಪಘಾತ ; ಸಾವು

ದಿನಾಂಕ 01/05/2019ರಂದು ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನದ ಬಳಿ ವಾಸವಿರುವ ಮಂಜು ನಾಯಕ್ ಎಂಬವರು ಅವರ ಸ್ಕೂಟರಿನಲ್ಲಿ ಅರಕಲಗೂಡಿನಿಂದ ಮಡಿಕೇರಿಗೆ ಬರುತ್ತಿರುವಾಗ ಕೆದಕಲ್ ಬಳಿ ಎದುರಿನಿಂದ ಒಂದು ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಂಜುನಾಯಕ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಮಂಜುನಾಯಕ್‌ರವರಿಗೆ ತೀವ್ರತರದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಮಂಜುನಾಯಕ್‌ರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 30/04/2019ರಂದು ಕುಶಾಲನಗರ ಬಳಿಯ ಸಿದ್ದಲಿಂಗಪುರ ನಿವಾಸಿ ಪರಮೇಶ ಎಂಬವರು ಅವರ ಅತ್ತೆ ಮತ್ತು ಪತ್ನಿಯೊಂದಿಗೆ ಹೆಬ್ಬಾಲೆಯಿಂದ ಸಿದ್ದಲಿಂಗಪುರಕ್ಕೆ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿರುವಾಗ ಬಾಣಾವರ ರಸ್ತೆಯಲ್ಲಿ ಬಸ್ಸನ್ನು ಅದರ ಚಾಲಕ ಥಾಮಸ್‌ ಲೋಬೋ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್ಸಿನ ಬಲ ಹಿಂಬದಿಯ ಟೈರ್ ಸಿಡಿದು ಬಸ್ಸು ವಾಲಿದ ಪರಿಣಾಮ ಬಸ್ಸಿನಲ್ಲಿದ್ದ ಪರಮೇಶರವರ ಪತ್ನಿ ಮೀನಾಕ್ಷಿ ಹಾಗೂ ಅತ್ತೆ ಸರೋಜಮ್ಮರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗಂಡಸು ಕಾಣೆ ಪ್ರಕರಣ

ಮಡಿಕೇರಿ ನಗರದ ರೇಸ್‌ ಕೋರ್ಸ್‌ ರಸ್ತೆಯ ನಿವಾಸಿ ಲೋಕೇಶ್‌ ಎಂಬವರು ದಿನಾಂಕ 24/04/2019ರಂದು ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿದ್ದು ಕುಶಾಲನಗರದ ಕಾಳೇಘಾಟ್ ಬಾರಿನ ಮುಂದೆ ಆತನ ಸ್ನೇಹಿತ ಶರಣ್ ಎಂಬವರೊಂದಿಗೆ ಮಾತನಾಡಿ ಈಗ ಬರುವುದಾಗಿ ಹೇಳಿ ಹೋದಾತ ಇದುವರೆಗೂ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ; ದೂರು – ಪ್ರತಿ ದೂರು

ದಿನಾಂಕ 02/05/2019ರಂದು ಸೋಮವಾರಪೇಟೆ ಬಳಿಯ ಯಡವಾರೆ ನಿವಾಸಿ ಬಿ.ಎಸ್.ರಘು ಎಂಬವರು ಅವರ ಪತ್ನಿ ಗುಲಾಬಿ ಹಾಗೂ ಮಗ ಅಶ್ವಥ್‌ರವರೊಂದಿಗೆ ಅವರ ಜೀಪಿನಲ್ಲಿ ಅವರ ಜಾಗದಲ್ಲಿ ಬೆಳೆದ ಸುವರ್ಣ ಗೆಡ್ಡೆಯನ್ನು ತರುತ್ತಿರುವಾಗ ರಸ್ತೆಯಲ್ಲಿ ಅದೇ ಗ್ರಾಮದ ನಿವಾಸಿಗಳಾದ ಅಪ್ಪಚ್ಚು, ಗಣೇಶ, ಕಿರಣ್ ಮತ್ತು ನಂದ ಎಂಬವರು ರಸ್ತೆಗೆ ಅಡ್ಡ ಹಾಕಿ ರಘು ಹಾಗೂ ಗುಲಾಬಿರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಅದೇ ರೀತಿ ರಘು ಮತ್ತು ಅಶ್ವಥ್‌ರವರು ಜಾಗದ ಬೇಲಿ ಕಂಬವನ್ನು ಕಿತ್ತ ವಿಚಾರವಾಗಿ ಅಪ್ಪಚ್ಚುರವರು ಪ್ರಶ್ನಿಸಿದ ಕಾರಣಕ್ಕೆ ರಘು ಹಾಗೂ ಅಶ್ವಥ್‌ರವರು ಅಪ್ಪಚ್ಚುರವರ ಮೇಲೆ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದು ಬಿಡಿಸಲು ಬಂದ ಜನಾರ್ಧನ್‌ ಎಂಬವರ ಮೇಲೂ ಹಲ್ಲೆ ಮಾಡಿರುವುದಾಗಿ ಪ್ರತಿ ದೂರು ನೀಡಿದ್ದು  ಸೋಮವಾರಪೇಟೆ ಪೊಲೀಸರು ಎರಡೂ ದೂರುಗಳನ್ನು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜೂಜಾಟ ಪ್ರಕರಣ

ದಿನಾಂಕ 01/05/2019ರಂದು ಶನಿವಾರಸಂತೆ ಬಳಿಯ ಗುಡುಗಳಲೆ ಜಾತ್ರೆ ಮೈದಾನದ ಬಳಿ ಯಾರೋ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಸಿ.ಎಂ.ತಿಮ್ಮಶೆಟ್ಟಿರವರು ಸ್ಥಳಕ್ಕೆ ತೆರಳಿ ಎನ್‌.ಎಸ್.ಸುರೇಶ್‌ ಮತ್ತು ಇತರೆ 16 ಜನರು ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ಸುಮಾರು ಇಸ್ಪೀಟೆಲೆಗಳು ಹಾಗೂ ರೂ.45,780/- ಹಣವನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ 01/05/2019ರಂದು ಶನಿವಾರಸಂತೆ ಬಳಿಯ ದುಂಡಳ್ಳಿ ಗ್ರಾಮದ ಸ್ಮಶಾನದ ಬಳಿ ಯಾರೋ ಕೆಲವರು ಅಕ್ರಮವಾಗಿ ಜೂಜಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಶನಿವಾರಸಂತೆ ಠಾಣೆಯ ಎಎಸ್‌ಐ ಹೆಚ್‌.ಎಂ.ಗೋವಿಂದರವರು ಸ್ಥಳಕ್ಕೆ ತೆರಳಿ ಮೋಹನ  ಮತ್ತು ಇತರೆ 5 ಜನರು ಅಕ್ರಮವಾಗಿ ಜೂಜಾಡುತ್ತಿದ್ದುದನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ಸುಮಾರು ಇಸ್ಪೀಟೆಲೆಗಳು ಹಾಗೂ ರೂ.28,805/- ಹಣವನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 01/05/2019ರಂದು ಶನಿವಾರಸಂತೆ ಬಳಿಯ ಮಾಲಂಬಿ ನಿವಾಸಿ ಜೆ.ಕೆ.ರಾಜೇಶ್‌ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಮಾಲಂಬಿ ನಿವಾಸಿಗಳಾದ ಸುಂದರ, ಗಂಗಾಧರ ಮತ್ತು ನವೀನ ಎಂಬವರು ಹಳೆ ದ್ವೇಷದಿಂದ ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.