Crime News

ಮನುಷ್ಯ ಕಾಣೆ:

ಕುಶಾಲನಗರ ಪಟ್ಟಣ ಠಾಣೆ ಸರಹದ್ದಿನ ಗೋಪಾಲ ಸರ್ಕಲ್‍ ನಲ್ಲಿ ವಾಸವಾಗಿರುವ ಶ್ರೀಮತಿ ದಾಕ್ಷಾಯಿಣಿ ಎಂಬವರ ಗಂಡ ಜಗದೀಶ ಎಂಬವರು ದಿನಾಂಕ 15-4-2019 ರಂದು ರಾತ್ರಿ 11-50 ಗಂಟೆಗೆ ಯಾರೋ ಹೊರಗಡೆ ಆಟೋದಲ್ಲಿ ಬಂದು ಕರೆಯುತ್ತಿದ್ದಾರೆ ಎಂದು ತಿಳಿಸಿ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ ಬೇಲಿ ಕಂಬಗಳನ್ನು ಕಡಿದು ನಾಶ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಣಜೂರು ಗ್ರಾಮದಲ್ಲಿ ವಾಸವಾಗಿರುವ ಎಸ್.ಎನ್. ಗುರುಲಿಂಗಪ್ಪ ಎಂಬವರು ದಿನಾಂಕ 23-4-2019 ರಂದು ಬೆಳಿಗ್ಗೆ ತಮ್ಮ ಮಗನೊಂದಿಗೆ ಅಡಿಕೆ ತೋಟಕ್ಕೆ ಹೋಗಿ ವಾಪಾಸು ಬಂದು ಅಪರಾಹ್ನ ಪುನ: ತೋಟಕ್ಕೆ ಹೋದಾಗ ಅವರ ತೋಟದ ಪಕ್ಕದ ತೋಟದ ಮಾಲಿಕರಾದ ಸೋಮಪ್ಪ ಎಂಬವರು  ಎಸ್.ಎನ್. ಗುಗುಲಿಂಗಪ್ಪನವರ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಬೇಲಿಗೆ ಹಾಕಿದ ಸುಮಾರು 16 ಕಂಬಗಳನ್ನು ತುಂಡರಿಸಿ ಅಂದಾಜು 8,000/- ರೂ. ನಷ್ಟ ಪಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್‍ ಸೈಕಲಿಗೆ ಜೀಪು ಡಿಕ್ಕಿ:

ದಿನಾಂಕ 2-5-2019 ರಂದು ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿ ತಿಮ್ಮಯ್ಯ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಗುಡ್ಡೆಹೊಸೂರು ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದಾಗ ಕುಶಾಲನಗರದ ಅತಿಥಿ ಹೊಟೇಲ್ ಮುಂಭಾಗದಲ್ಲಿ ರೈತಭವನ ಕಡೆಯಿಂದ ಬಂದ ಜೀಪೊಂದು ತಿಮ್ಮಯ್ಯನವರು ಚಲಾಯಿಸುತ್ತಿದ್ದ ಮೋಟಾರ್‍ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ತಿಮ್ಮಯ್ಯನವರಿಗೆ ತೀವ್ರ ತರಹದ ಗಾಯಗಳಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕೊಡಗರಳ್ಳಿ ಗ್ರಾಮದ ನಿವಾಸಿ ಶ್ರೀಮತಿ ವಸಂತಿ ಎಂಬವರ ಪತಿ ಸುಬ್ರಮಣಿ ಎಂಬವರು ದಿನಾಂಕ 25-4-2019 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡು ಸದರಿಯವರನ್ನು ಚಿಕಿತ್ಸೆಗೆ ಮೈಸೂರಿನ ಕುವೆಂಪುನಗರದ ಹುಸೈನ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಸದರಿಯವರು ದಿನಾಂಕ 3-5-2019 ರಂದು ಮೃತಪಟ್ಟಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿಯ ಸಾವು ಪ್ರಕರಣ ದಾಖಲು:

ಕೇರಳ ಮೂಲಕ ವ್ಯಕ್ತಿ ಮನೋಜ್ ಎಂಬವರು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೋಕು  ಮೆಣಸ ಬೆಟ್ಟದಳ್ಳಿ ಗ್ರಾಮದಲ್ಲಿರುವ ಕೈರಾಲಿ ಪ್ಲಾಂಟೇಶನ್ ನಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದು ದಿನಾಂಕ 2-5-2019 ರಂದು ಸ್ನಾನ ಮಾಡಲು ಹೋದ ಸಂದರ್ಭದಲ್ಲಿ ರಕ್ತ ವಾಂತಿಯಾಗಿದ್ದು, ಅವರನ್ನು ಚಿಕಿತ್ಸೆಗೆ ಶನಿವಾರಸಂತೆ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಮೃತರ ಸಹೋದರ ಎಂ. ಮಧು ಎಂಬವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಐಮಂಗಲ ಗ್ರಾಮದ ನಿವಾಸಿ ಕೆ.ಹೆಚ್‍. ಹಂಸ ರವರು ತನ್ನ ಮಗನ ಮಗನಾದ 12 ವರ್ಷ ಪ್ರಾಯದ ಅಲ್ ಅಮೀನ್ ಎಂಬವನೊಂದಿಗೆ ಬಿಳುಗುಂದ ಗ್ರಾಮದಲ್ಲಿ ಮಸೀದಿಗೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಮಾರುತಿ ಕಾರು ಅಲ್ ಅಮೀನ್ ಗೆ ಡಿಕ್ಕಿಯಾಗಿ ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ:

ಶ್ರೀಮಂಗಲ ಠಾಣಾ ಸರಹದ್ದಿನ ಕಾಯಿಮನೆ ಗ್ರಾಮದ ನಿವಾಸಿ ಶ್ರೀಮತಿ ಸಿ.ಕೆ. ಸರಸ್ವತಿ ಎಂಬವರ ಮಗ ಸುಧಾ ರವರು ದಿನಾಂಕ 3-5-2019 ರಂದು ಬೆಳಗ್ಗೆ 6-00 ಗಂಟೆಗೆ ಅಂಗಡಿಯಿಂದ ಹಾಲು ತರಲೆಂದು ಬ್ರಹ್ಮಗಿರಿ ಕ್ಲಬ್‍ನ ಹತ್ತಿರದ ಅಂಗಡಿಗೆ ಹೋಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಆನೆಗಳನ್ನು ಕಂಡು ಪಕ್ಕದ ಮಚ್ಚಮಾಡ ಬೋಸ್‍ ರವರ ಲೈನುಮನೆ ಕಡೆಗೆ ಓಡಿದಾಗ ಸದರಿ ತೋಟದಲ್ಲಿದ್ದ ಆನೆಯೊಂದು ಅವರ ಮೇಲೆ ದಾಳಿ ಮಾಡಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಮೇಲೆ ಹಲ್ಲೆ:

ಮಡಿಕೇರಿ ನಗರದ ಮಹದೇವಪೇಟೆಯ ಡೇಲೈಟ್ ಸ್ಟುಡಿಯೋದಲ್ಲಿ ಕೆಲಸ ಮಾಡುವ ಕೆ.ಆರ್. ಸಂತೋಷ್ ಎಂಬವರು ದಿನಾಂಕ 1-5-2019 ರಂದಿ ಮಡಿಕೇರಿ ನಗರದ ಕಾವೇರಿ ಹಾಲ್ ನಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ 10-30 ಗಂಟೆಗೆ ಸ್ಟಡಿಯೋಗೆ ಹೋಗುತ್ತಿದ್ದಾಗ ಮುನೀರ್, ಹನೀಫ್ ಮತ್ತು ಇತರರು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚರಂಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಸಾವು:

ದಿನಾಂಕ 3-5-2019 ರಂದು ಕೆ.ಎಸ್.ಆರ್.ಟಿ.ಸಿ ಬಸ್‍ ನಿಲ್ದಾಣದ ಬಳಿ ಹಾಲೇರಿ ಗ್ರಾಮದ ಬಿ.ಕೆ.ಗಣಪತಿ ಎಂಬವರು ಕಟ್ಟಡ ಕೆಲಸ ಮಾಡುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಕೊಳಚೆ ನೀರು ಹರಿಯುತ್ತಿದ್ದ ಚರಂಡಿಗೆ ಬಿದ್ದಿರುವುದನ್ನು ಬಿ.ಕೆ. ಗಣಪತಿಯವರು ಇತರ ಸಾರ್ವಜನಿಕರ ಸಹಾಯದಿಂದ ಸದರಿ ವ್ಯಕ್ತಿ ಯನ್ನು ಮೇಲಕ್ಕೆತ್ತಿ ನೋಡಿದಾಗಿ ಆತ ಸಾವನಪ್ಪಿರುವುದು ಕಂಡು ಬಂದಿದ್ದು ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣುಬಿಗಿದು ಮಹಿಳೆ ಆತ್ಮಹತ್ಯೆ:

ನಾಪೋಕ್ಲು ಠಾಣಾ ಸರಹದ್ದಿನ ಬಲ್ಲಮಾವಟಿ ನಿವಾಸಿ ಎ.ಜಿ.ಟಿಂಸ ಎಂಬವರ ತಂಗಿ ಎ.ಜಿ. ಉಷಾ ರವರು ದಿನಾಂಕ 26-4-2019 ರಂದು ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಿನಾಂಕ 3-5-2019 ರಂದು ಮಡಿಕೇರಿ ತಾಲೋಕು ಬಲ್ಲಮಾವಟ್ಟಿ ಗ್ರಾಮದ ನುಚ್ಚುಮಣಿಯಂಡ ಉತ್ತಪ್ಪನವರ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಎ.ಜಿ. ಉಷಾ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.