Crime News

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಒಡೆಯನಪುರ ಗ್ರಾಮದ ನಿವಾಸಿ ಶ್ರೀಮತಿ ಲಕ್ಷ್ಮಮ್ಮ ನವರು ದಿನಾಂಕ 2-5-2019 ರಂದು ಮನೆಯಲ್ಲಿರುವಾಗ ಅದೇ ಗ್ರಾಮದ  ಶಂಕರ, ಕಸ್ತೂರಿ ಮತ್ತು ಚಂದನ್ ರವರಗಳು ಬಟ್ಟೆ ಒಗೆಯುವ ಕಲ್ಲಿನ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದು, ಮಾರನೇ ದಿನ ದಿನಾಂಕ 3-5-2019 ರಂದು ಈ ವಿಚಾರವನ್ನು ವಿಚಾರಿಸಲು ಹೋದ ಶ್ರೀಮತಿ ಲಕ್ಷ್ಮಮ್ಮನವರ ಮಗ ಶರತ್‍ರವರ ಮೇಲೂ  ಶಂಕರ ಮತ್ತು ಕಸ್ತೂರಿ ಹಾಗು ಚಂದನ್ ರವರು ಹಲ್ಲೆ ನಡೆಸಿ ಮನೆಯ ಬಾಗಿಲನ್ನು ಒಡೆದು ಹಾಕಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ:

ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಭುವನಗಿರಿ ಗ್ರಾಮದ ನಿವಾಸಿ ಬಸವಯ್ಯ ಎಂಬವರು ದಿನಾಂಕ 5-5-2019 ರಂದು ಕಣಿವೆ ಗ್ರಾಮದ ಸೇತುವೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಮೋಟಾರ್‍ ಸೈಕಲ್ ಡಿಕ್ಕಿಯಾಗಿ ಅವರು ಗಾಯಗೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜುಗುಪ್ಸೆ ಬೆಂಕಿಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ:

ಸಿದ್ದಾಪುರ ಠಾಣಾ ಸರಹದ್ದಿನ ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ಶ್ರೀಮತಿ ಶಾಂತ ರವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇದರಿಂದ ಮನನೊಂದ ಅವರು ದಿನಾಂಕ 4-5-2019 ರಂದು ತನ್ನ ಮೈಮೇಲೆ ಸೀಮೆಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಕ್ಕೆ  ಪ್ರಯತ್ನಿಸಿದ್ದು, ಸದರಿಯವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆಆರ್. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 5-5-2019 ರಂದು ಮೃತಪಟ್ಟಿದ್ದು ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ಕೊಂಡು ವ್ಯಕ್ತಿ ಆತ್ಮಹತ್ಯೆ:

ಮಡಿಕೇರಿ ನಗರದ ವಿದ್ಯಾನಗರದ ನಿವಾಸಿ ಪ್ರಸಾದ್ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 4-5-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿಯವರ ಸಹೋದರ ಬಿ.ಒ. ಹೊನ್ನಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲಿಗೆ ಕಾರು ಡಿಕ್ಕಿ:

ಮಡಿಕೇರಿ ತಾಲೋಕು ಕೊಯನಾಡು ಗ್ರಾಮದ ನಿವಾಸಿ ಕೆ.ಎಂ. ಸತೀಶ್ ಎಂಬವರು ದಿನಾಂಕ 4-5-2019 ರಂದು ತನ್ನ ಮೋಟಾರ್ ಸೈಕಲಿನಲ್ಲಿ ತನ್ನ ಮಗ ಚಂದನ್‍ ನೊಂದಿಗೆ   ಕೊಯನಾಡುವಿನಲ್ಲಿ ಹೋಗುತ್ತಿದ್ದಾಗ ಮಡಿಕೇರಿ ಕಡೆಯಿಂದ ಬಂದ ಇನೋವಾ ಕಾರು ಕೆ.ಎಂ. ಸತೀಶ್‍ರವರು ಚಾಲನೆ ಮಾಡುತ್ತಿದ್ದ ಮೋಟಾರ್‍ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಕೆ.ಎಂ. ಸತೀಶ್ ಹಾಗು ಅವರ ಮಗ ಚಂದನ್ ರವರು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಪ್ರವೇಶ, ಬೇಲಿ ಕಡಿದು ನಷ್ಟ:

ವಿರಾಜಪೇಟೆ ತಾಲೋಕು ಅರುವತ್ತೊಕ್ಲು ಗ್ರಾಮದ  ಕಾಡ್ಯಮಾಡ ನಂಜಪ್ಪ ಎಂಬವರಿಗೆ ಸೇರಿದ ಜಾಗಕ್ಕೆ ದಿನಾಂಕ 29-04-2019 ರಂದು ಅದೇ ಗ್ರಾಮದವರಾದ ಮನಿಯಪಂಡ ಬೋಪಣ್ಣ ಹಾಗು ಮನಿಪಪಂಡ ಸೋಮಣ್ಣ ಎಂಬವರು ಅಕ್ರಮ ಪ್ರವೇಶ ಮಾಡಿ ಕಬ್ಬಿಣದ ಗೇಟನಲ್ಲಿ ಅಳವಡಿಸಿದ್ದ  ನಂಜಪ್ಪನವರ ಪತ್ನಿಯ ನಾಮಪಲಕದವನ್ನು  ಕಿತ್ತು ಹಾಕಿದ್ದು ಅಲ್ಲದೆ  ತಂತಿ ಬೇಲಿಯನ್ನು ಕತ್ತರಿಸಿ ಸುಮಾರು 2000 ರೂ. ನಷ್ಟಪಡಿಸಿ  ಲೈನು ಮನೆಯಲ್ಲಿದ್ದ ಕೆಲಸಗಾರರನ್ನು ಹೊರಗೆ ಕಳುಹಿಸಿ ಅವರ ಕೆಲಸಗಾರರನ್ನು ನಂಜಪ್ಪನವರ ಲೈನುಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.