Crime News

ಪರಸ್ಪರ ಕಾರು ಡಿಕ್ಕಿ

                      ದಿನಾಂಕ 03/05/2018ರಂದು ಮಡಿಕೇರಿ ನಗರದ ವಿದ್ಯಾನಗರ ನಿವಾಸಿ ಬಿ.ಎಸ್.ಉಮೇಶ್ ಎಂಬವರು ಅವರ ಕೆಎ-12-ಬಿ-4313ರ ಕಾರಿನಲ್ಲಿ ಮನೆಗೆ ಹೋಗುತ್ತಿರುವಾಗ ಗಾಳಿಬೀಡು ಗ್ರಾಮದಲ್ಲಿ ಎದುರಿನಿಂದ ಕೆಎ-12-ಬಿ-0294ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉಮೇಶ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೂ ಕಾರುಗಳು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಚಿನ್ನಾಭರಣ ಕಳವು

                       ಸಿದ್ದಾಪುರ ನೆಲ್ಲಿಹುದಿಕೇರಿ ಬಳಿಯ ನಲ್ವತೆಕ್ರೆ ನಿವಾಸಿ ಫಾತಿಮಾ ಎಂಬವರು ದಿನಾಂಕ 22/04/2018ರಂದು ಅವರ ಪತಿಯ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಕೇರಳದ ಮಂಜೇರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಿನಾಂಕ 03/05/2018ರಂದು ಮರಳಿ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಹಿಂಬಾಗದ ಕಿಟಕಿಯ ವೆಂಟಿಲೇಟರ್ ಮೂಲಕ ಮನೆಯೊಳಗೆ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು ರೂ.1,90,000/- ಮೌಲ್ಯದ ಚಿನ್ನಾಭರಣ, ಡಿವಿಡಿ ಪ್ಲೇಯರ್, ಬಟ್ಟೆಗಳು ಮತ್ತು ನಗದು ರೂ. 28,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಲ್ಲೆ ಪ್ರಕರಣ 

                      ದಿನಾಂಕ 03/05/2018ರಂದು  ಶ್ರೀಮಂಗಲ ಬಳಿಯ ಹೈಸೊಡ್ಲೂರು ನಿವಾಸಿ ಚೇಂದಿರ ಪವಿತ್ರ ಕುಮಾರ್‌ ಎಂಬವರು ಮನೆಯಲ್ಲಿರುವಾಗ ಅಲ್ಲಿಗೆ ಬಂದ ಚೇಂದಿರ ಡ್ಯಾನಿ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮರದ ದೊಣ್ಣೆಯಿಂದ ಪವಿತ್ರ ಕುಮಾರ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ

                  ದಿನಾಂಕ 03/05/2018ರಂದು ಅರಕಲಗೂಡು ಬಳಿಯ ಹಿಪ್ಪಲಿ ನಿವಾಸಿ ಚರಣ್‌ರಾಜ್‌ ಎಂಬವರು ಹರೀಶ್‌ ಎಂಬವರೊಂದಿಗೆ ಕೆಎ-12-ಆರ್-4426ರ ಬೈಕಿನಲ್ಲಿ ಬಾಗದಾಳು ಗ್ರಾಮದಿಂದ ಶನಿವಾರಸಂತೆ ಬಳಿಯ ಕಿತ್ತೂರು ಗ್ರಾಮಕ್ಕೆ ಹೋಗುತ್ತಿರುವಾಗ ಕಿತ್ತೂರು ಗ್ರಾಮದ ಬಳಿ ಶನಿವಾರಸಂತೆ ಕಡೆಯಿಂದ ಕೆಎ-05-ಎಂಕೆ-6522ರ ಕಾರನ್ನು ಅದರ ಚಾಲಕ ಸಚಿನ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚರಣ್‌ರಾಜ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಚರಣ್‌ರಾಜ್ ಮತ್ತು ಹರೀಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆಕಸ್ಮಿಕ ಸಾವು

                     ದಿನಾಂಕ 02/05/2018ರಂದು ಸೋಮವಾರಪೇಟೆ ಬಳಿಯ ಕಾರೆಕೊಪ್ಪ ಗ್ರಾಮದ ನಿವಾಸಿ ಸತೀಶ್‌ ಎಂಬವರ ತೋಟದಲ್ಲಿ ತಮಿಳುನಾಡಿನ ಸೇಲಂ ನಿವಾಸಿ ಉನ್ನಮಲೈ ಎಂಬವರು ಮರಗಸಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.