Crime News

ವಂಚನೆ ಪ್ರಕರಣ

ಕುಶಾಲನಗರದಲ್ಲಿರುವ ಟ್ರೀಪರ್ ಹೋಂ ಸ್ಟೇಯಲ್ಲಿ ಕೆಲಸ ಮಾಡುತ್ತಿದ್ದ ರಾಂಚಿ ಮೂಲದ ಈಶ್ವರ್ ದಯಾಳ್ ಪ್ರಮಾಣಿಕ್‌ ಎಂಬ ವ್ಯಕ್ತಿಯು ತನ್ನ ಸ್ನೇಹಿತರಾದ ಪಶ್ಚಿಮ ಬಂಗಾಳದ ಬಿಗಿನಿ ದಾಸ್ ಮತ್ತು ವಿಪಿನ್‌ ಎಂಬವರು ವ್ಯಾಪಾರ ಮಾಡಲು ಹೋಂ ಸ್ಟೇ ಒಂದನ್ನು ತನ್ನ ಮಾಲೀಕರಾದ ಮಂಜುನಾಥರವರಿಂದ ಗುತ್ತಿಗೆಗೆ ನೀಡುವುದಾಗಿ ನಂಬಿಸಿ ಜನವರಿ ತಿಂಗಳಲ್ಲಿ ಬಿಗಿನಿ ದಾಸ್‌ ಮತ್ತು ವಿಪಿನ್‌ರವರನ್ನು ಕುಶಾಲನಗರಕ್ಕೆ ಕರೆಸಿಕೊಂಡು ಹೋಂ ಸ್ಟೇ ಒಂದನ್ನು ತೋರಿಸಿ ಅದರ ಮಾಲೀಕರೊಂದಿಗೆ ಮಾತನಾಡಿ ಗುತ್ತಿಗೆ ಒಪ್ಪಂದ ಮಾಡಿಕೊಡುವುದಾಗಿ ನಂಬಿಸಿ ಗುತ್ತಿಗೆಯ ಹಣವೆಂದು ಸುಮಾರು ರೂ.11,57,874/- ಗಳಷ್ಟನ್ನು ಈಶ್ವರ್‌ ದಯಾಳ್‌ ಪ್ರಮಾಣಿಕ್‌ನು ತನ್ನ ಬ್ಯಾಂಕ್‌ ಖಾತೆಗೆ ಬಿಗಿನಿ ದಾಸ್‌ ಮತ್ತು ವಿಪಿನ್‌ರವರಿಂದ ಜಮಾ ಮಾಡಿಸಿಕೊಂಡು ನಂತರ ಹೋಂ ಸ್ಟೇಯನ್ನು ಗುತ್ತಿಗೆಗೆ ಮಾಡಿಕೊಡದೆ, ಹಣವನ್ನು ಸಹಾ ಮರಳಿಸದೆ ಎಲ್ಲಿಗೋ ಹೋಗಿ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ಕಳವು

ದಿನಾಂಕ 06/05/2019ರಂದು ಕುಶಾಲನಗರದ ಬೈಚನಹಳ್ಳಿ ನಿವಾಸಿ ಮಹಮದ್ ಹಾಜಿ ಎಂಬವರಿಗೆ ಸೇರಿದ ತೈಬ ಲಾಡ್ಜಿಗೆ ಮಡಿಕೇರಿಯ ಸುಮಂತ್ ಎಂಬ ಯುವಕನು ಬಂದು ಕೊಠಡಿಯನ್ನು ಪಡೆದಿದ್ದು, ನಂತರ ಮಾಲೀಕ ಮಹಮದ್ ಹಾಜಿರವರು ಮಸೀದಿಗೆ ಹೋಗಿ ಸಂಜೆ 7 ಗಂಟೆಗೆ ಬಂದು ನೋಡಿದಾಗ ಮೇಜಿನ ಕೆಳಗೆ ಇಟ್ಟಿದ್ದ ಕ್ಯಾಷ್‌ ಡ್ರಾಯರ್‌ನ ಕೀ ಯಿಂದ ಸುಮಂತನು ಡ್ರಾಯರನ್ನು ತೆಗೆದು ಅಲ್ಲಿದ್ದ ಹಣ ಸುಮಾರು ರೂ.24,000/- ಹಾಗೂ ಸುಮಂತನ ಆಧಾರ್‌ ಕಾರ್ಡನ್ನು ಕಳವು ಮಾಡಿ, ಗಿರಾಕಿಗಳ ನೋಂದಣಿ ಪುಸ್ತಕದಲ್ಲಿ ಬರೆಯಲಾಗಿದ್ದ ಆತನ ವಿಳಾಸವನ್ನೂ ಸಹ ಅಳಿಸಿಹಾಕಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪಘಾತ ಪ್ರಕರಣ

         ದಿನಾಂಕ 08/05/2019 ರಂದು ಸೋಮವಾರಪೇಟೆ ತಾಲೋಕಿನ ದೊಡ್ಡಹಣಗೋಡು ಗ್ರಾಮದ ನಿವಾಸಿಯಾದ ಮೋಹನ ಎಂಬುವವರು ಮೋಟಾರು ಸೈಕಲಿನಲ್ಲಿ ಹೋಗುತ್ತಿದ್ದಾಗ ಶನಿವಾರಸಂತೆ ಕಡೆಯಿಂದ ಬಂದ ಮಾರುತಿ ವ್ಯಾನನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಸಿದ ಪರಿಣಾಮ ಮೋಹನರವರಿಗೆ ಗಾಯವಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

         ಮಡಿಕೇರಿ ತಾಲೋಕಿನ ಮುತ್ತಾರ್ಮುಡಿ ಗ್ರಾಮದ ನಿವಾಸಿಯಾದ  ಮೀನಾಕುಮಾರಿಯವರು ತಮ್ಮ ತೋಟಕ್ಕೆ ನೀರನ್ನು ಹಾಯಿಸಲು ಸೋಲಾರ್ ವಿದ್ಯುತ್ ಪಂಪಿನ ಸುಮಾರು ರೂ 10,000 ಮೌಲ್ಯದ 4 ಪ್ಯಾನಲ್ ನ್ನು ಯಾರೋ ದಿನಾಂಕ 08/05/2019 ರಂದು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿ ಕಾಣೆ

           ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೋಕಿನ ನಿವಾಸಿಯಾದ ರಘು ಎಂಬುವವರು ಮಡಿಕೇರಿಯ ಕೆ. ನಿಡುಗಣೆ ಗ್ರಾಮದ ವಿದ್ಯಾನಗರದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಕಟ್ಟಡದ ಕಾಂರ್ಪೆಂಟರ್ ಕೆಲಸ ಮಾಡುತ್ತಿದ್ದವರು ದಿನಾಂಕ 03-05-2019 ರಂದು ಮಡಿಕೇರಿ ನಗರಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವರು ವಾಪಾಸ್ಸು ಬಾರದೇ ಕಾಣೆಯಾಗಿದ್ದು, ಈ ಬಗ್ಗೆ ಉಮೇಶರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.