Crime News

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ದಿನಾಂಕ 08/05/2019ರಂದು ಕುಟ್ಟ ಬಳಿಯ ಬಾಡಗ ನಿವಾಸಿ ಪಣಿ ಎರವರ ಸೀತೆ ಯಾನೆ ಬೊಳಚಿ ಎಂಬ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಸೀತೆಯು ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಈ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಸ್ಪರ್ಷ ; ವ್ಯಕ್ತಿ ಸಾವು

ದಿನಾಂಕ 09/05/2019ರಂದು ಪೊನ್ನಂಪೇಟೆ ಬಳಿಯ ಹುದೂರು ನಿವಾಸಿ ಪಂಜರಿ ಎರವರ ಮಣಿ ಎಂಬವರು ಸಮೀಪದ ಕಲ್ಲು ಕೋರೆಯ ಉಮ್ಮರ್ ಎಂಬವರ ಕಾಫಿ ತೋಟದಲ್ಲಿ ಅಲ್ಯುಮಿನಿಯಮ ಏಣಿ ಇಟ್ಟುಕೊಂಡು ಮರ ಹತ್ತಿ ಮರಗಸಿ ಕೆಲಸ ಮಾಡುತ್ತಿರುವಾಗ ಮರದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಏಣಿಗೆ ತಾಗಿ ಏಣಿಯ ಮೇಲೆ ಕೆಲಸ ಮಾಡುತ್ತಿದ್ದ ಮಣಿರವರಿಗೆ ವಿದ್ಯುತ್ ಸ್ಪರ್ಷವಾಗಿ ವಿದ್ಯುದಾಘಾತದಿಂದ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 06/05/2019ರಂದು ಶನಿವಾರಸಂತೆ ದುಂಡಳ್ಳಿ ನಿವಾಸಿ ಕಿರಣ್ ಎಂಬವರು ಕಿರಣ್‌ರವರ ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ ನೆರೆಮನೆಯ ವಾಸಿ ಹಾವುಗೊಲ್ಲರ ಬಾಬು ಎಂಬವರು ಜಗಳವನ್ನು ವಿಚಾರಿಸಿ ಸಮಾಧಾನ ಮಾಡಲು ಪ್ರಯತ್ನಿಸಿದಾಗ ಕಿರಣನು ಅಲ್ಲೇ ಬಿದ್ದಿದ್ದ ಒಂದು ಮರದ ದೊಣ್ಣೆಯಿಂದ ಬಾಬುರವರ ಮೇಲೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.