Crime News

ಹಲ್ಲೆ ಪ್ರಕರಣ

           ದಿನಾಂಕ 10-05-2019 ರಂದು ಮಡಿಕೇರಿ ತಾಲೋಕಿನ ಹಚ್ಚಿನಾಡು ಗ್ರಾಮದ ನಿವಾಸಿ ಮೇದಪ್ಪನವರು ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಜೀಪಿನಲ್ಲಿ ಹೋಗುತ್ತಿರುವಾಗ ದೇವಸ್ತೂರು ಎಂಬಲ್ಲಿಗೆ ತಲುಪುವಾಗ ಕಾಲೂರು ಗ್ರಾಮದ ನಿವಾಸಿಗಳಾದ ಕಾಳಫ್ಪ ಮತ್ತು ಆತನ ಪತ್ನಿ ಪವಿತರವರು ಹಳೇ ದ್ವೇಷದಿಂದ ದಾರಿ ತಡೆದು ಹಲ್ಲೆ ನಡೆಸಿದ್ದು, ಈ ಬಗ್ಗೆ ಮೇದಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಆತ್ಮಹತ್ಯೆ ಪ್ರಕರಣ

          ಮಡಿಕೇರಿ ತಾಲೋಕಿನ ನಾಪೋಕ್ಲುವಿನ ಚೆರಿಯಪರಂಬು ಎಂಬಲ್ಲಿ ಮಂದಪ್ಪನವರ ಲೈನ್ ಮನೆಯಲ್ಲಿ ವಾಸವಾಗಿದ್ದ ಪಣಿಯರವರ ಚುಬ್ಬಿ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಆತ್ಮಹತ್ಯೆ ಪ್ರಕರಣ

          ವಿರಾಜಪೇಟೆ ತಾಲೋಕಿನ ಚೆಂಬೆಬೆಳ್ಳೂರು ಗ್ರಾಮದ ನಿವಾಸಿಯಾದ ರತ್ನರವರು ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಕಳವು ಪ್ರಕರಣ

          ವಿರಾಜಪೇಟೆ ತಾಲೋಕಿನ ದೇವಮಚ್ಚಿ ಗ್ರಾಮದ ಮಾವುಕಲ್ಲು ಮೀಸಲು ಅರಣ್ಯದ ಕೆರೆಯ ದಡದಲ್ಲಿ ಸೋಲಾರ್ ಲೈಟ್ ಗೆ ಅಳವಡಿಸಿದ ಸೋಲಾರ್ ಪ್ಯಾನಲ್ ಹಾಗೂ ಬ್ಯಾಟರಿಗಳನ್ನು ಯಾರೋ ಕಳವು ಮಾಡಿದ್ದು, ಅವುಗಳ ಅಂದಾಜು ಮೌಲ್ಯ 40,000 ರೂ ಆಗಿದ್ದು, ಈ ಬಗ್ಗೆ ಅರಣ್ಯ ರಕ್ಷಕ ಸುರೇಶ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆ ಪ್ರಕರಣ

          ವಿರಾಜಪೇಟೆ ತಾಲೋಕಿನ ಪೊನ್ನಂಪೇಟೆ ನಗರದ ಕಲ್ಲು ಕೋರೆ ಎಂಬಲ್ಲಿ ವಾಸವಿರುವ ಸುಂದರ ಎಂಬುವವರು        ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.