Crime News

ಕಟ್ಟಡದಿಂದ ಬಿದ್ದು ಕಾರ್ಮಿಕನ ಸಾವು

ದಿನಾಂಕ 09/05/2019ರಂದು ಮಕ್ಕಂದೂರಿನ ಜೆ.ಪಿ.ಎಸ್ಟೇಟಿನಲ್ಲಿ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ನೀಲ್ ಜೇಮ್ಸ್ ಎಂಬವರು ಕಟ್ಟಡವೊಂದರ ಕೆಲಸಕ್ಕೆಂದು ಬಂದಿದ್ದು ರಾತ್ರಿ ಕಟ್ಟಡದ ಮೇಲಂತಸ್ತಿನಲ್ಲಿ ಮಲಗಿದ್ದು ಶೌಚಕ್ಕೆಂದು ಎದ್ದು ಹೋಗುವಾಗ ಮೇಲಂತಸ್ತಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ವ್ಯಕ್ತಿ ಆಕಸ್ಮಿಕ ಸಾವು

ದಿನಾಂಕ 11/05/2019ರಂದು ಸಿದ್ದಾಪುರ ಬಳಿಯ ಹಾಲುಗುಂದ ನಿವಾಸಿ ಪಣಿ ಎರವರ ಬೋಪಯ್ಯ ಎಂಬವರು ಮದ್ಯಪಾನ ಮಾಡಿ  ಗ್ರಾಮದ ಕಾಮವ್ವ ದೇವಯ್ಯ ಎಂಬವರ ಕೆರೆಯಲ್ಲಿ ಸ್ನಾನ ಮಾಡಲು ಹೋಗಿದ್ದು ಕೆರೆಯಲ್ಲಿ ಕಾಲು ಜಾರಿ ಬಿದ್ದು ಈಜು ಬಾರದ ಕಾರಣ ಮುಳುಗಿ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ತಂಬಾಕು ಉತ್ಪನ್ನ ಮಾರಾಟ

ಕುಶಾಲನಗರ ಬಳಿಯ ಚಿಕ್ಕ ಅಳುವಾರ ಗ್ರಾಮದ ಟಿ.ಪಿ.ರಾಜು ಎಂಬವರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಅಕ್ರಮವಾಗಿ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ದಿನಾಂಕ 11/05/2019ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್‌ಐ ನಂದೀಶ್‌ ಕುಮಾರ್‌ರವರು ಸ್ಥಳಕ್ಕೆ ತೆರಳಿ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು ರೂ.400/- ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ತಂಬಾಕು ಉತ್ಪನ್ನ ಮಾರಾಟ

ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮದ ಕೆ.ಬಿ.ಸುಂದರ  ಎಂಬವರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ಅಕ್ರಮವಾಗಿ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ದಿನಾಂಕ 11/05/2019ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್‌ಐ ನಂದೀಶ್‌ ಕುಮಾರ್‌ರವರು ಸ್ಥಳಕ್ಕೆ ತೆರಳಿ ಅಂಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು ರೂ.400/- ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.