Crime News

ಹಲ್ಲೆ ಪ್ರಕರಣ

ದಿನಾಂಕ 11/05/2019ರಂದು ವಾಲ್ನೂರು ಬಳಿಯ ಬಾಳೆಗುಂಡಿ ನಿವಾಸಿ ಜೆ.ಜೆ.ಗಣೇಶ್‌ ಎಂಬವರ ತಾಯಿಯೊಂದಿಗೆ ಗಣೇಶ್‌ರವರ ಮಾವ ಜೆ.ಬಿ.ಮುತ್ತರವರು ಜಗಳವಾಡುತ್ತಿದ್ದುದನ್ನು ಆಕ್ಷೇಪಿಸಿದ ಕಾರಣಕ್ಕೆ ಮುತ್ತರವರು ಕತ್ತಿಯಿಂದ ಗಣೇಶ್‌ರವರ ಮೇಲೆ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 11/05/2019ರಂದು ಪೊನ್ನಂಪೇಟೆಯ ಶಾಂತಿನಗರ ನಿವಾಸಿ ಮುಕ್ಕಾಟಿರ ಪೂಣಚ್ಚ ಎಂಬವರು ಅವರ ಮಾರುತಿ ವ್ಯಾನಿನಲ್ಲಿ ಕಾರ್ಮಿಕರನ್ನು ಕರೆದುಕೊಂಡು ಹರಿಹರದಿಂದ ಧನುಗಾಲದಲ್ಲಿರುವ ಅವರ ತಂಗಿಯ ಮನೆಗೆ  ಹೋಗುತ್ತಿರುವಾಗ ಕೋಣನಕಟ್ಟೆ ಬಳಿ ಮಾಯಮುಡಿ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಮನಿಯಪಂಡ ವಿವೇಕ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪೂಣಚ್ಚರವರು ಚಾಲಿಸುತ್ತಿದ್ದ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಲ್ಲಿದ್ದ ಪೂಣಚ್ಚ, ಮಂಜು, ಮಣಿ ಮತ್ತು ಕರಿಯ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 10/05/2019ರಂದು ಶನಿವಾರಸಂತೆ ಬಳಿಯ ಒಡೆಯನಪುರ ನಿವಾಸಿಗಳಾದ ಚಂದ್ರಶೇಖರ್ ಮತ್ತು ಯಶವಂತ್ ಎಂಬವರು ಗೋಪಾಲಪುರದ ಕೂಡು ರಸ್ತೆ ಬಳಿ ಜಿ.ಆರ್.ಧರ್ಮಪಾಲ ಎಂಬವರ ಅಂಗಡಿಯ ಮುಂದೆ ಅವರ ಸ್ಕೂಟರನ್ನು ನಿಲ್ಲಿಸಿ ನಿಂತಿದ್ದಾಗ ನಂದಿಗುಂದ ನಿವಾಸಿ ಜಗದೀಶ ಎಂಬವರು ಅವರ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಿಲ್ಲಿಸಿದ್ದ ಚಂದ್ರಶೇಖರ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಜೊತೆಯಲ್ಲಿಯೇ ನಿಂತಿದ್ದ ಚಂದ್ರಶೇಖರ್ ಮತ್ತು ಯಶವಂತ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 11/05/2019ರಂದು ಶನಿವಾರಸಂತೆ ಬಳಿಯ ಹೆಬ್ಬುಲುಸೆ ಗ್ರಾಮದ ನಿವಾಸಿ ಕರುಣಾಕರ ಎಂಬವರ ಅಣ್ಣ ಗಣೇಶ್‌ ಎಂಬವರು ಅವರ ಸ್ಕೂಟರಿನಲ್ಲಿ ಹಾರೆಹೊಸೂರು ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಕೆಎ-12-ಆರ್-5648ರ ಮೋಟಾರು ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಣೇಶ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಗಣೇಶ್‌ರವರು ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ತಂಬಾಕು ಉತ್ಪನ್ನ ಮಾರಾಟ

ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿಯ ಅಂಗಡಿಯೊಂದರಲ್ಲಿ  ಬಸವನಹಳ್ಳಿ  ನಿವಾಸಿ ನಾಗರಾಜು ಎಂಬವರು ಅಕ್ರಮವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್‌ಐ ನಂದೀಶ್‌ ಕುಮಾರ್‌ರವರು  ದಿನಾಂಕ 12/05/2019ರಂದು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಆರೋಪಿ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಶಾಲೆಯ ಬಳಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸುಮಾರು ರೂ.1,000/- ಮೌಲ್ಯದ ವಿವಿಧ ತಂಬಾಕು ಉತ್ಪನ್ನಗಳಾದ ಸಿಗರೇಟುಗಳನ್ನು ವಶಪಡಿಸಿಕೊಂಡು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.