Crime News

ಮರ ಬಿದ್ದು ಗಾಯಗೊಂಡಿದ್ದ ಮಹಿಳೆಯ ಸಾವು

           ದಿನಾಂಕ 11-05-2019 ರಂದು ವಿರಾಜಪೇಟೆ ತಾಲೋಕಿನ ಕಿರುಗೂರು ಗ್ರಾಮದ ದೇವಯ್ಯನವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಮಂಜುಳ, ದೇವಿರಮ್ಮ ಮತ್ತು ಇತರರು ಕೆಲಸ ಮುಗಿಸಿ ವಾಪಾಸ್ಸು ಸಂಜೆ 4-00 ಗಂಟೆಗೆ ಹೋಗುತ್ತಿರುವಾಗ ಜೋರಾಗಿ ಗಾಳಿ ಬೀಸಿದ ಪರಿಣಾಮ ಒಣಗಿದ ಮರ ಮಂಜುಳ ಮತ್ತು ಇತರರ ಮೇಲೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡ ಮಂಜುಳರವನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮಂಜುಳರವರು ದಿನಾಂಕ 12-05-2019 ರಂದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೊಬೈಲ್ ಕಳ್ಳತನ

       ದಿನಾಂಕ 15-05-2019 ರಂದು ವಿರಾಜಪೇಟೆ ತಾಲೋಕಿನ ತಿತಿಮತಿಯ ನಿವಾಸಿಯಾದ ಜೇನುಕುರುಬರ ಸುರೇಶ ಎಂಬುವವರು ಮನೆಯಲ್ಲಿ ರಾತ್ರಿ ಮಲಗುವಾಗ ಹಾಸಿಗೆಯ ದಿಂಬಿನ ಕಳಗಡೆ ಎರಡು ಮೊಬೈಲ್ ಇಟ್ಟು ಮಲಗಿದ್ದು, ರಾತ್ರಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿಸಿಂದ ನುಗ್ಗಿ ಎರಡು ಮೋಬೈಲ್ ಗಳನ್ನು ಕಳವು ಮಾಡಿದ್ದು, ಮೊಬೈಲ್ ಗಳ ಅಂದಾಜು ಮೌಲ್ಯ 10,500 ರೂಗಳು ಆಗಿದ್ದು, ಈ ಬಗ್ಗೆ ಸುರೇಶರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆತ್ಮಹತ್ಯೆ ಪ್ರಕರಣ

            ದಿನಾಂಕ 13-05-2019 ರಂದು ಸೋಮವಾರಪೇಟೆ ತಾಲೋಕಿನ ಜಂಬೂರು ಗ್ರಾಮದ ನಿವಾಸಿಯಾದ ಬೇಬಿ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

           ದಿನಾಂಕ 13-05-2019 ರಂದು ಕುಶಾಲನಗರದ ಮಾರುಕಟ್ಟೆಯ ಬಳಿ ಕಾವೇರಿ ಹೊಳೆಯಲ್ಲಿ ಅಂದಾಜು 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು,  ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

         ದಿನಾಂಕ 13-05-2019 ರಂದು ಹೇಮರಾಜ್ ಮತ್ತು ಪ್ರಕ್ಯಾತ ಎಂಬುವವರು ಮೋಟಾರು ಸೈಕಲಿನಲ್ಲಿ ಹುಲಸೆ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಕೃಷ್ಣ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ಪ್ರಕ್ಯಾತ ಮತ್ತು ಕಾರಿನ ಚಾಲಕ ಕೃಷ್ಣ ಮತ್ತು ಮಂಜುರವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹತ್ತಿಯಿಂದ ಕಡಿದು ಗಾಯ

        ದಿನಾಂಕ 12-05-2019 ರಂದು ಮಡಿಕೇರಿ ನಗರದ ಇಂದಿರ ನಗರದ ನಿವಾಸಿ ಪೊನ್ನಪ್ಪ ಎಂಬುವವರು ಮದ್ಯಪಾನ ಮಾಡಿಕೊಂಡು ತನ್ನ ಪತ್ನಿಯೊಂದಿಗೆ ಜಗಳ ಮಾಡುತ್ತಿರುವಾಗ ಮಗ ಅಯ್ಯಪ್ಪ ಎಂಬುವವರು ಕತ್ತಿಯಿಂದ ಪೊನ್ನಪ್ಪನವರ ಭುಜಕ್ಕೆ ಕಡಿದು ಗಾಯಪಡಿಸಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಾನು ಅಪಘಾತ, ವ್ಯಕ್ತಿಯ ದುರ್ಮರಣ

         ದಿನಾಂಕ 13-05-2019 ರಂದು ಸಂಪಾಜೆ ಗ್ರಾಮದ ನಿವಾಸಿಯಾದ ಉಮ್ಮರುಞ ಎಂಬುವವರು ತನ್ನ ಮನೆಯ ಮುಂದೆ ರಾಷ್ಟ್ರೀಯ ಹೆದ್ದಾರಿಗೆ ಒತ್ತಾಗಿ ಕಚ್ಚಾ ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಭಾಗಕ್ಕೆ ಮಡಿಕೇರಿ ಕಡೆಯಿಂದ ಹೋಗುತ್ತಿದ್ದ ಮಾರುತಿ ಓಮಿನಿ ವ್ಯಾನು ಡಿಕ್ಕಿಯಾಗಿ ಜಯರಾಮ ಎಂಬುವವರು ಸ್ಥಳದಲ್ಲೆ ಮೃತಪಟ್ಟಿದ್ದು, ಚಾಲಕ ವಿಜಯರವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.