Crime News

ಹಲ್ಲೆ ಪ್ರಕರಣ

           ದಿನಾಂಕ 14-05-2019 ರಂದು ಗರ್ವಾಲೆ ಗ್ರಾಮದ ನಿವಾಸಿಯಾದ ಕಾವೇರಪ್ಪನವರು ಮಡಿಕೇರಿಯ ರಾಜಾ ಸೀಟಿಗೆ ಕಾರಿನಲ್ಲಿ ಬಂದು ಕಾರಿನಲ್ಲಿದ್ದವರನ್ನು ಇಳಿಸಿ ಮುಂದೆ ಹೋಗುತ್ತಿದ್ದಾಗ ಅಲ್ಲೇ ಇದ್ದ ಲೋಕೇಶ್ ಮತ್ತು ಕಿಶು ಚಂಗಪ್ಪನವರು ವಿನಾ ಕಾರಣ  ಜಗಳ ಮಾಡಿ ಹಲ್ಲೆ ನಡೆಸಿದ್ದು, ಈ ಬಗ್ಗೆ ಕಾವೇರಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ   

         ವಿರಾಜಪೇಟೆ ತಾಲೋಕಿನ ಅರುವತ್ತೋಕ್ಲು ಗ್ರಾಮದ ಕಾರೆಕಾಡು ಪೈಸಾರಿಯ ನಿವಾಸಿಯಾದ ಪಣಿಯರವರ ಚುಬ್ರ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 13-05-2019 ರಂದು ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಕಾರು ಡಿಕ್ಕಿ

              ದಿನಾಂಕ 11-05-2019 ರಂದು ವಿರಾಜಪೇಠೆ ತಾಲೋಕಿನ ತಿತಿಮತಿಯ ಮಜ್ಜಿಗೆ ಹಳ್ಳದ ವಾಸಿಯಾದ ಅಶೋಕ ಎಂಬುವವರು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಚ್ಚಿನಾಡು ಗ್ರಾಮದ ನಿವಾಸಿಯಾದ ದಿನೇಶ ಎಂಬುವವರು ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಅಶೋಕರವರಿಗೆ ಡಿಕ್ಕಿಪಡಿಸಿ ಗಾಯ ಪಡಿಸಿದ್ದು, ಈ ಬಗ್ಗೆ ದಿನಾಂಕ 14-05-2019 ರಂದು ಅಶೋಕರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

           ಸೋಮವಾರಪೇಟೆ ತಾಲೋಕಿನ ಮಾದಾಪುರದ ಜಂಬೂರು ಬಾಣೆ ನಿವಾಸಿಯಾದ ಕಾರ್ಯಪ್ಪನವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 13-05-2019 ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.