Crime News

ದ್ವೇಷದಿಂದ ಬಾರಿನ ಗ್ಲಾಸ್ ಒಡೆದು ಹಾನಿ, ಕೊಲೆ ಬೆದರಿಕೆ:

ಮಡಿಕೇರಿ ನಗರದ ಹಿಲ್ ರಸ್ತೆಯಲ್ಲಿರುವ ಕಾವೇರಿ ಬಾರಿಗೆ ದಿನಾಂಕ 12-5-2019 ರಂದು ಸಂಜೆ 5-30 ಗಂಟೆಗೆ ಮಡಿಕೇರಿ ನಗರದ ಲೋಕೇಶ ಎಂಬ ವ್ಯಕ್ತಿ ಬಂದು ಬಾರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರ್. ಹೇಮಂತ್ ಎಂಬವರನ್ನು ಜೈಲಿನಲ್ಲಿದ್ದಾಗ ನೋಡಲು ಬರಲಿಲ್ಲ ಎಂಬ ಕಾರಣಕ್ಕೆ ಗದರಿಸಿ ಬಾರಿನ ಗ್ಲಾಸ್‍ಗಳನ್ನು ಒಡೆದುಹಾಕಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿದ ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು:

ಮಡಿಕೇರಿ ನಗರದ ಮಂಗಳೂರು ರಸ್ತೆಯಲ್ಲಿರುವ ಮುಂಡಂಡ  ಕಾಂಪೌಂಡ್ ನಲ್ಲಿ ವಾಸವಾಗಿರುವ ಎಸ್. ಎಂ. ಶಮೀರ್ ಎಂಬವರು ತಮ್ಮ ಕುಟುಂಬದವರೊಂದಿಗೆ ದಿನಾಂಕ 8-5-2019 ರಂದು ಹೊಳೆನರಸೀಪುರಕ್ಕೆ ಹೋಗಿದ್ದು ಅದೇ ಸಂದರ್ಭವನ್ನು ಉಪಯೋಗಿಸಿದ ಕಳ್ಳರು ಎಸ್.ಎಂ. ಶಮೀರ್ ರವರ ಮನೆಯ ಹಿಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ 15,000/- ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ರೂ.1000/-ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪತಿಯಿಂದ ಪತ್ನಿ ಮೇಲೆ ಹಲ್ಲೆ:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದ ಪೆಗ್ಗರಿಕಾಡು ಪೈಸಾರಿಯಲ್ಲಿ ವಾಸವಾಗಿರುವ ಅಣ್ಣಪ್ಪ @ ಅರುಣ ಎಂಬವರು ದಿನಾಂಕ 15-5-2019 ರಂದು ಸಂಜೆ 6-45 ಗಂಟೆಗೆ ತಮ್ಮ ಮನೆಗೆ ಬಂದು ತಮ್ಮ ಪತ್ನಿ ಶ್ರೀಮತಿ ಹೆಚ್.ಕೆ.ಕುಸುಮ ಎಂಬವರೊಂದಿಗೆ ಕೌಟುಂಬಿಕ ಕಾರಣಕ್ಕೆ ಜಗಳ ಮಾಡಿ ಕತ್ತಿಯಿಂದ ಹಲ್ಲೆ ಮಾಡಿ ರಕ್ತಗಾಯಪಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಕಳವು:

ಗೋಣಿಕೊಪ್ಪ ಠಾಣಾ ಸರಹದ್ದಿನ ನಗರದ ಬಸ್‍ ನಿಲ್ದಾಣದ ಬಳಿ  ಅಬ್ದುಲ್ ಸಲಾಂ ಎಂಬವರು ಹಣ್ಣು ಹಂಪಲು ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ 13-5-2019 ರಂದು ಕಾರು ನಿಲ್ದಾಣದ ಹತ್ತಿರ ಅವರ ಬಾಪ್ತು ಮೋಟಾರ್‍ ಸೈಕಲನ್ನು ನಿಲ್ಲಿಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಸಂಜೆ ಮನೆಗೆ ತೆರಳಲು  ಬೈಕ್‍ ನಿಲ್ಲಿಸಿದ್ದ ಜಾಗಕ್ಕೆ ಹೋದಾಗ ಅವರ ಮೋಟಾರ್ ಸೈಕಲನ್ನು ಯಾರೋ ಕಳ್ಳು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿದ್ದು, ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿಗೆ ಬಿದ್ದು ವೃದ್ದೆ ಸಾವು:

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ತಿತಿಮತಿ ಗ್ರಾಮದಲ್ಲಿ ಕೆ.ಕೆ. ಮಾಧವನ್ ಎಂಬವರು ವಾಸವಾಗಿದ್ದು ಅವರ ತಾಯಿ ಸರೋಜಿನಿಯವರು ದಿನಾಂಕ 14-5-2019 ರಂದು ಯೆನೆಪಂಡ ರುಜು ನಂಜಪ್ಪ ಎಂಬವರ ಹಸುಗಳನ್ನು ಮೇಯಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಅಲ್ಲೇ ಇದ್ದ ಕೆರೆಗೆ ಬಿದ್ದು ಮೃತಪಟ್ಟಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀನಿಗೆ ಅಕ್ರಮ ಪ್ರವೇಶ:

ಶನಿವಾರಸಂತೆ ಠಾಣೆ ವ್ಯಾಪ್ತಿಯ ಕಣಗಾಲು ಗ್ರಾಮದ ಕೆ.ಎನ್. ಯೋಗಪ್ಪ ಹಾಗು ಅವರ ಅಕ್ಕನವರಿಗೆ ಸೇರಿದ ಜಾಗಕ್ಕೆ  ಲೋಕೇಶ ರವರು 15 ರಿಂದ 20 ಜನರನ್ನು ಸೇರಿಸಿ ಅಕ್ರಮ ಕೂಟ ಕಟ್ಟಿಕೊಂಡು ಅಕ್ರಮ ಪ್ರವೇಶ ಮಾಡಿ ಜಾಗವನ್ನು ನೋಡಿಕೊಳ್ಳುತ್ತಿದ್ದ ಸುಂದರ ಎಂಬವರನ್ನು ಬೈದು ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ದಾಸ್ತಾನು:

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಬಿಹಳ ಗ್ರಾಮದಲ್ಲಿ ದಿನೇಶ ಹಾಗು ಪುಟ್ಟಸ್ವಾಮಿ ಎಂಬವರು ಅಕ್ರಮವಾಗಿ ಸುಮಾರು 20 ಲೋಡ್ ಟ್ರಾಕ್ಟರ್‍ನಷ್ಟು ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇಟ್ಟಿರುವುದನ್ನು ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡ ಹಾಗು ಸಿಬ್ಬಂದಿಯವರು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ