Crime News

ಬೈಕ್ ಅಪಘಾತ, ಇಬ್ಬರಿಗೆ ಗಾಯ:

ದಿನಾಂಕ 15-05-2019 ರಂದು ಸೋಮವಾರಪೇಟೆ ತಾಲೋಕು ಗೋಣಿಮರೂರು ಗ್ರಾಮದ ರಂಜಿತ್  ಎಂಬವರು ಅವರ ಪಕ್ಕದ ಮನೆಯ ವಾಸಿ ದಿಲೀಪ್ ರವರ ಸಂಬಂದಿಕರ ಮದುವೆ ಸಮಾರಂಭಕ್ಕೆ ದಿಲೀಪ್ ಎಂಬವರೊಂದಿಗೆ   ನೋಂದಣಿಯಾಗದ ಹೊಸ ಅಪಾಚಿ ಬೈಕಿನಲ್ಲಿ ಸಿದ್ದಾಪುರದಿಂದ  ಗೋಣಿಮರೂರು ಗ್ರಾಮಕ್ಕೆ  ಹೋಗುವಾಗ  ಅಂದಾಜು ಸಮಯ 10:00 ಪಿ ಎಂಗೆ ಗುಡ್ಡೆಹೊಸೂರು ಬಾಳುಗೋಡು ಗ್ರಾಮದ ಬಳಿ ತಲುಪಿದಾಗ ಬೈಕ್ ಚಾಲನೆ ಮಾಡುತ್ತಿದ್ದ ದಿಲೀಪ್ ರವರು ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು, ದಿಲೀಪ್ ರವರ ತಲೆಗೆ ಗಾಯಗಳಾಗಿದ್ದು,  ರಂಜಿತ್ ರವರಿಗೂ ಪೆಟ್ಟಾಗಿದ್ದು,ಗಾಯಾಳುಗಳನ್ನು ಅಲ್ಲಿ ಸೇರಿದ್ದ ಜನ ಯಾವುದೋ ವಾಹನದಲ್ಲಿ ಕುಶಾಲನಗರ ಆಶ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲಿಸರು ತನಿಖೆ ಕೈಗೊಂಡಿದ್ದಾರೆ.

ಎರಡು ಕಾರುಗಳು ಮುಖಾಮುಖಿ ಡಿಕ್ಕಿ:

ದಿನಾಂಕ 16-5-2019 ರಂದು  ವಿರಾಜಪೇಟೆ ತಾಲೋಕು, ಹೆಗ್ಗಳ ಗ್ರಾಮದ  ಅನಿಲ್ ಕುಮಾರ್ ರವರು ಕೇರಳದಿಂದ ವಿರಾಜಪೇಟೆಯ ಕಡೆಗೆ ತಮ್ಮ ಸ್ಯಾಂಟ್ರೋ ಕಾರ್ ನಂ KA-1 N-8215  ರಲ್ಲಿ   ತನ್ನ ತಾಯಿ ತಾರಾಮಣಿ ಹಾಗೂ ತಂದೆ ಪಿ.ವಿ. ರವಿ ರವರೊಂದಿಗೆ ಬರುತ್ತಿರುವಾಗ್ಗೆ ಸಮಯ 5-30 ಪಿ.ಎಂ.ಗೆ ಮಾಕುಟ್ಟದಿಂದ ಮುಂದೆ ಬರುತ್ತಿದ್ದಾಗ ವಿರಾಜಪೇಟೆ ಕಡೆಯಿಂದ ಬರುತ್ತಿದ್ದ  KA 03 MY 6909ರ ಮುಖಾಮುಖಿ ಡಿಕ್ಕಿಯಾದ ಪರಿಣಾಮ  ಎರಡೂ ಕಾರುಗಳು ಜಖಂಗೊಂಡಿದ್ದು, ಅನಿಲ್ ಕುಮಾರ್ ರವರು ಚಾಲನೆ ಮಾಡುತ್ತಿದ್ದ  ಕಾರಿನಲ್ಲಿದ್ದ ಅವರ ತಾಯಿ ತಾರಾಮಣಿಯವರಿಗೆ  ರಕ್ತಗಾಯವಾಗಿದ್ದು, ಮತ್ತೊಂದು ಕಾರಿನಲ್ಲಿದ್ದ  ಚಾಲಕ  ಶೋಭಾನಂದರರಿಗೂ ಗಾಯಗಳಾಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.