Crime News

ಕಾರು ಅಪಘಾತ

          ತಮಿಳುನಾಡುವಿನ ಚೈನೈನ ನಿವಾಸಿಯಾದ ಮಣಿಕಂಠನ್ ಎಂಬುವವರು ತನ್ನ ಸ್ನೇಹಿತರೊಂದಿಗೆ ಕೇರಳ ರಾಜ್ಯಕ್ಕೆ  ಹೋಗಿದ್ದವರು ದಿನಾಂಕ 16-05-2019 ರಂದು ವಾಪಾಸ್ಸು ಕಾರಿನಲ್ಲಿ ಗೋಣೀಕೊಪ್ಪಲುವಿಗಾಗಿ ಮೈಸೂರುವಿಗೆ ಹೋಗುತ್ತಿರುವಾಗ ಕಾರನ್ನು ಚಾಲನೆ ಮಾಡುತ್ತಿದ್ದ ಗವಾಸ್ಕರ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಆರ್ ಎಂ ಸಿ ಹತ್ತಿರ ಅಪಘಾತವಾದ ಪರಿಣಾಮ ಮಣಿಕಂಠನ್, ಅಜಯ್, ವಿನೋದ್, ಸಂತೋಷ್ ಮತ್ತು ಚಾಲಕ ಗವಾಸ್ಕರ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಗೋಣೀಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸ್ಕೂಟಿಗೆ ಬಸ್ಸು ಡಿಕ್ಕಿ

         ದಿನಾಂಕ 17-05-2019 ರಂದು ವಿರಾಜಪೇಟೆ ನಗರದ ಶಿವಕೇರಿಯ ನಿವಾಸಿಯಾದ ಮಧುಸೂಧನ್ ರವರು ಪಿರಿಯಾಪಟ್ಟಣಕ್ಕೆ ಹೋದವರು ವಾಪಾಸ್ಸು ಸ್ಕೂಟರಿನಲ್ಲಿ ಮನೆಗೆ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಬರುತ್ತಿರುವಾಗ ಹಾತೂರು ಎಂಬಲ್ಲಿಗೆ ತಲುಪುವಾಗ ಕೆ.ಎಸ್.ಆರ್,ಟಿ.ಸಿ ಬಸ್ಸು ಹಿಂದಿನಿಂದ ಡಿಕ್ಕಿಪಡಿಸಿದ್ದು, ಮೂವರೂ ಬಿದ್ದು ಗಾಯಗೊಂಡಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

        ದಿನಾಂಕ 15-05-2019 ರಂದು ಮೂರ್ನಾಡುವಿನಲ್ಲಿರುವ ಶ್ರೀಕ್ರಷ್ಣ ಜ್ಯವೆಲ್ಲರ್ಸ್ ಮತ್ತು ಬ್ಯಾಂಕರ್ಸ್  ನ ಮಾಲಿಕರಾದ ಶಂಕರ್ ಲಾಲ್ ಆಗ್ ಲೇಜಾ ಎಂಬುವವರು ಗ್ರಾಹಕರು ಗಿರವಿ ಇಡುವ ಚಿನ್ನವನ್ನು ಮಡಿಕೇರಿಯ ಸೌತ್ ಇಂಡಿಯಾ ಬ್ಯಾಂಕಿನ ಲಾಕರ್ ನಲ್ಲಿ ಇಡುತ್ತಿದ್ದು,  ಸದರಿ ಬ್ಯಾಂಕಿನ ಲಾಕರ್ ನಲ್ಲಿ ಇಟ್ಟಿದ್ದ 55.7 ಗ್ರಾಂ ತೂಕದ ಚಿನ್ನವನ್ನು ತರಲು ತನ್ನ ಸ್ನೇಹಿತ ಮಡಿಕೇರಿಯ ನಿವಾಸಿ ತಿಲಕ್ ರವರಿಗೆ ತಿಳಿಸಿದ್ದು, ತಿಲಕ್ ರವರು ಚಿನ್ನವನ್ನು ಲಾಕರ್ ನಿಂದ ತೆಗೆದುಕೊಂಡು ಮೂರ್ನಾಡುವಿಗೆ ಹೋಗದೇ ಕಾಣೆಯಾಗಿದ್ದು, ತಿಲಕ್ ರವರು ಚಿನ್ನವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವುದಾಗಿ ಶಂಕರ್ ಲಾಲ್ ಆಗ್ ಲೇಜಾರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಕಾರು ಅಪಘಾತ

          ದಿನಾಂಕ 17-05-2019 ರಂದು ವಿರಾಜಪೇಟೆ ತಾಲೋಕಿನ ಬೇಟೋಳೀ ಗ್ರಾಮದ ನಿವಾಸಿಯಾದ ಲತೀಶ್ ರವರು ಕಾರಿನಲ್ಲಿ ಲವೀಶ್, ಸಂಧ್ಯಾ,  ಗೀತಾರವರೊಂದಿಗೆ ಪೊನ್ನಪ್ಪಸಂತೆಗೆ ಹೋಗುತ್ತಿರುವಾಗ ಕೈಕೇರಿ ಎಂಬಲ್ಲಿಗೆ ತಲುಪುವಾಗ ಕಾರನ್ನು ಚಾಲನೆ ಮಾಡುತ್ತಿದ್ದ ಸಜೇಶ್ ರವರನ್ನು ಅಜಾಗರೂಕತೆಯಿಂದ ಚಾಲನೆ ಅಪಘಾತವಾದ ಪರಿಣಾಮ ಕಾರಿನಲ್ಲಿದ್ದರಿಗೆಲ್ಲರಿಗೂ ಗಾಯಗಳಾಗಿದ್ದು ಈ ಬಗ್ಗೆ ಗೋಣೀಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನ ಕಳವು

        ದಿನಾಂಕ 17-05-2019 ರಂದು ಹೊದ್ದೂರು ಗ್ರಾದಮ ನಿವಾಸಿಯಾದ ಲೀಲಾವತಿಯವರು ಮಡಿಕೇರಿ ನಗರದಲ್ಲಿರುವ ಸ್ಕೈ ಗೋಲ್ಡ್ ನಲ್ಲಿ ಚಿನ್ನದ ಮಾಂಗಲ್ಯ ಸರ, ಕಾಲುಂಗರ ಹಾಗೂ ಬೆಳ್ಳಿಯ ಬ್ರಾಸ್ ಲೈಟ್ ನ್ನು ಖರೀದಿಸಿ, ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದು, ನಗರದ ಖಾಸಗಿ ಬಸ್ಸು ನಿಲ್ದಾಣದಲ್ಲಿ ಬಸ್ಸಿಗೆ ಹಣ ಕೊಡಲು ವ್ಯಾನಿಟಿ ಬ್ಯಾಗ್ ನೋಡಿದಾಗ ಬ್ಯಾಗಿನ ಜಿಪ್ ಅರ್ಧ ತೆರೆದಿದ್ದು, ಒಳಗಿದ್ದ ಚಿನ್ನವನ್ನು ಯಾರೋ ಕಳವು ಮಾಡಿದ್ದು, ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.