Crime News

ಕಾರಿಗೆ ಸ್ಕೂಟಿ ಡಿಕ್ಕಿ:

ದಿನಾಂಕ 19-5-2019 ರಂದು ಬೆಂಗಳೂರಿನ ರಾಮಮೂರ್ತಿನಗರದ ನಿವಾಸಿ ಬಿ.ಎನ್. ಪ್ರಶಾಂತ್ ಎಂಬವರು ತನ್ನ ಸಂಸಾರದೊಂದಿಗೆ ತಮ್ಮ ಬಾಪ್ತು ಕಾರಿನಲ್ಲಿ ತಲಕಾವೇರಿ ಭಾಗಮಂಡಲಕ್ಕೆ ಬಂದು ಬೆಂಗಳೂರಿಗೆ ಮರಳುತ್ತಿದ್ದಾದ ಪದಕಲ್ಲು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ  ಎದುರುಗಡೆಯಿಂದ ಬಂದ ಸ್ಕೂಟಿ ಡಿಕ್ಕಿಯಾದ ಪರಿಣಾಮ ಕಾರು ಜಖಂಗೊಂದು ಸ್ಕೂಟಿಯಲ್ಲಿದ್ದ ಬೆಟ್ಟಗೇರಿ ಗ್ರಾಮದ ಕೌಶಿಕ್ ಮತ್ತು ಅಭಿಷೇಕ್ ರವರುಗಳಿಗೆ ಗಾಯಗಳಾಗಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರುಗಳ ಮುಖಾಮುಖಿ ಡಿಕ್ಕಿ:

ವಿರಾಜಪೇಟೆ ತಾಲೋಕು, ಹೆಬ್ಬಾಲೆ ಭದ್ರಗೊಳ ಗ್ರಾಮದ ಎಂ.ಆರ್. ಕುಶಾಲಪ್ಪ ಎಂಬವರು ತಮ್ಮ ಬಾಪ್ತು ಕೆಎ-51.ಎಂ.ಜಿ.5573 ಮಾರುತಿ ಸ್ವಿಪ್ಟ್ ಕಾರಿನಲ್ಲಿ ತಲಕಾವೇರಿಗೆ ಹೋಗಿ ವಾಪಾಸು ಪಾಲಿಬೆಟ್ಟ ಮಾರ್ಗವಾಗಿ ಅವರ  ಮನೆ ಹೆಬ್ಬಾಲೆ ಭದ್ರಗೊಳ ಕಡೆಗೆ ಹೋಗುತ್ತಿರುವಾಗ್ಗೆ, ಸಮಯ ಸುಮಾರು 17.15 ಗಂಟೆಗೆ ಪಾಲಿಬೆಟ್ಟದ ಕೋಟೆಬೆಟ್ಟ ಟಾಟಾ ಎಸ್ಟೇಟ್ ನ ಗೇಟಿನ ಮುಂಬಾಗದ ರಸ್ತೆಯ ಹತ್ತಿರ ತಲುಪುವಾಗ್ಗೆ ಎದುರು ಗಡೆಯಿಂದ ಅಂದರೆ ತಿತಿಮತ್ತಿ ಕಡೆಯಿಂದ ಕೆಎ-02-.ಪಿ.5217 ರ ಮಾರುತಿ 800 ಕಾರಿನ ಚಾಲಕ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಂ.ಆರ್. ಕುಶಾಲಪ್ಪನವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ ಕಾರಿನಲ್ಲಿ ಕುಳಿತ್ತಿದ್ದ ಅವರ ತಂದೆ ರಾಘವಯ್ಯ, ಮಗ ಹಿಮನ್, ಅಣ್ಣನ ಮಗ ನಿತಿನ್ ರವರುಗಳು ಗಾಯಗೊಂಡಿದ್ದು, ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಷಗೊಂಡು ಮೂವರ ಸಾವು:

ದಿನಾಂಕ 19-5-2019 ರಂದು ನಾಪೋಕ್ಲು ಠಾಣಾ ಸರಹದ್ದಿನ ಸಣ್ಣಪುಲಿಕೋಟು ಗ್ರಾಮದ ಕರುವಂಡ ಸುರೇಶ್ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಶ್ರೀಮತಿ ಡಿ.ಟಿ.ಚೈತ್ರ, ತಮ್ಮಯ್ಯ, ಅನಿಲ್, ಕವಿತ ಮತ್ತು ಸುನಿತಾರವರುಗಳು    ಬಲ್ಲಮಾವಟ್ಟಿ ಗ್ರಾಮದ ರವಿ ಕುಂಞಪ್ಪನವರ ತೋಟದಲ್ಲಿ ಮರ ಕಪಾತು ಕೆಲಸಕ್ಕೆ ಹೋಗಿದ್ದು ಕೆಲಸ ಮಾಡುತ್ತಿದ್ದಾಗ ಏಣಿಯನ್ನು ಬೇರೆ ಮರಕ್ಕೆ ಇಡಲು ಎಲ್ಲರೂ ಸೇರಿ ಏಣಿಯನ್ನು ಎತ್ತುವಾಗ್ಗೆ ಒಮ್ಮೆಲೆ ಮೇಲು ಬಾಗ ವಾಲಿಕೊಂಡು  ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ವಯರ್‍ಗೆ  ತಾಗಿ ಕರೆಂಟು ಶಾಕ್ ಹೊಡೆದು ತಮ್ಮಯ್ಯ ಮತ್ತು ಅನಿಲ್ ಸ್ಥಳದಲ್ಲಿ ತೀರಿಕೊಂಡಿದ್ದು, ತೀವ್ರವಾಗಿ ಸುಟ್ಟು ಗಾಯಗೊಂಡ ಕವಿತಾರವರು ಆಸ್ಪತ್ರೆಯಲ್ಲಿ ತೀರಿಕೊಂಡಿರುತ್ತಾರೆ.  ಅಲ್ಲದೆ ಸುನಿತಾರವರಿಗೆ ವಿದ್ಯುತ್ ಸ್ಪರ್ಷಗೊಂಡು ಸುಟ್ಟ ಗಾಯಗಳಾಗಿ ಪ್ರಜ್ಞೆ ತಪ್ಪಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯಿಂದ ಮಕ್ಕಳ ಮೇಲೆ ಹಲ್ಲೆ:

ದಿನಾಂಕ 18-5-2019 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಕಟ್ಟೆಪುರ ಗ್ರಾಮದ ನಿವಾಸಿ ಶ್ರೀಮತಿ ಪಾರ್ವತಿಯವರ ಗಂಡ ಧರ್ಮ ಎಂಬವರು ರಾತ್ರಿ ಮದ್ಯಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದಾಗ ಅವರ ಮಗಳಾದ ಸುಚಿತ್ರ ವಿಚಾರಿಸಿದ ಕಾರಣ ತಂದೆ ಧರ್ಮರವರು ಕತ್ತಿಯಿಂದ ಸುಚಿತ್ರರವರ ಮೇಲೆ ಹಲ್ಲೆ ನಡೆಸಿದ್ದು ಅಲ್ಲದೆ ಅವರ ಮಗ ಪುನೀತ್ ಮತ್ತು ಪತ್ನಿಯನ್ನು ಕಚ್ಚಿ ಗಾಯಪಡಿಸಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ಠಾಣಾ ಸರಹದ್ದಿನ ಇಗ್ಗೋಡ್ಲು ಗ್ರಾಮದ ನಿವಾಸಿ ಎಂ.ಕೆ. ಮಹೇಶ್ ಎಂಬವರ ಅಣ್ಣ ಎಂ.ಕೆ. ದೇವರಾಜುರವರು ದಿನಾಂಕ 18-5-2019 ರಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಪತಿಯಿಂದ ಪತ್ನಿ ಮೇಲೆ ಹಲ್ಲೆ:

ದಿನಾಂಕ  14-05-2019 ರಂದು ಸೋಮವಾರಪೇಟೆ ತಾಲೋಕು ಗಣಗೂರು ಗ್ರಾಮದ ನಿವಾಸಿ ಶ್ರೀಮತಿ ಜಿ.ಎಸ್. ಗಿರಿಜಾರವರ ಮೇಲೆ ಆಕೆ ಗಂಡ  ಸುರೇಶ್‍ರವರು  ನೆಂಟರ ಮನೆಗೆ ಹೋದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಾಡು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ನೋವುಪಡಿಸಿದ್ದು, ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರು ಅಪಘಾತ ವ್ಯಕ್ತಿಯ ದುರ್ಮರಣ:

ದಿನಾಂಕ 16-5-2019 ರಂದು ತಮಿಳುನಾಡು  ಕನ್ನಗಿನಗರ, ಚೆನೈಯಿಂದ ವಿ.ಮಣಿಕಂಠನ್ ಹಾಗು ನಾಲ್ಕು ಜನರು ಕಾರಿನಲ್ಲಿ ಕೇರಳದಿಂದ ಕೊಡಗಿನ ವಿರಾಜಪೇಟೆ ಮಾರ್ಗವಾಗಿ ಗೋಣಿಕೊಪ್ಪಕ್ಕೆ ಬಂದು ಮುಂದೆ ಮೈಸೂರು  ಮಾರ್ಗವಾಗಿ  ಹೋಗುವ ಸಂದರ್ಭ ಗೋಣಿಕೊಪ್ಪ  ಆರ್.ಎಂ.ಸಿ ಇಳಿಜಾರು ರಸ್ತೆಯ°è ಕಾರನ್ನು ಚಲಾಯಿಸುತ್ತಿದ್ದ ಗವಾಸ್ಕರ್ ಎಂಬವರು  ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿ  ರಸ್ತೆಯ ಬಳಿ ಮುಂದಕ್ಕೆ ಹೋಗಿ  ತಗ್ಗು ಪ್ರದೇಶಕ್ಕೆ ಬೀಳಿಸಿ ಅಪಘಾತ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ಎಲ್ಲರೂ ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿ  ಚಿಕಿತ್ಸೆ ಪಡೆಯುತ್ತಿದ್ದ ಸಂತೋಷ್ ಎಂಬವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಿನಾಂಕ 19-05-2019 ರಂದು  ಚಿಕಿತ್ಸೆ  ಫಲಕಾರಿಯಾಗದೇ   ಮೃತ ಪಟ್ಟಿದ್ದು, ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿದ ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

ಪೊನ್ನಂಪೇಟೆ ಯ ಕುಂದ ರಸ್ತೆಯಲ್ಲಿ ವಾಸವಾಗಿರುವ ಜಿ.ಕುಮಾರ್ ಎಂಬವರ ಮೇಲೆ ಪೊನ್ನಂಪೇಟೆ ನಿವಾಸಿ ದೊರೆ ಎಂಬವನು ಹಣದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು, ಅಲ್ಲದೆ ಕೊಲೆ ಬೆದರಿಕೆ ಒಡ್ಡಿದ್ದು,  ಈ ಸಂಬಂದ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.