Crime News

ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

ವಿರಾಜಪೇಟೆ ತಾಲೋಕು ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಶೀನಪ್ಪ ಎಂಬವರ ಪತ್ನಿ ಶ್ರೀಮತಿ ಹೇಮಾವತಿ @ ರೀನಾ ಎಂಬವರು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು ಅವರು ದಿನಾಂಕ 21-5-2019 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

ಪೊನ್ನಂಪೇಟೆ ಪೊಲೀಸ್ ಠಾಣೆ ಮತ್ತೂರು ಗ್ರಾಮದ ನಿವಾಸಿ ಪಣಿಎರವರ ಪಾಪುರವರ ತಂದೆ ಪಣಿಎರವರ ಕಾಳರವರು ದಿನಾಂಕ 21-5-2019 ರಂದು ಅವರು ವಾಸವಾಗಿರುವ ಮನೆಯ ಹತ್ತಿರ ತೋಟದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಸ್ಪರ ಎರಡು ಮೋಟಾರ್ ನಡುವೆ ಅಪಘಾತ

ದಿನಾಂಕ 21-5-2019 ರಂದು ಡಿ. ಗಣೇಶ್ ಎಂಬವರು ಅವರು ಕೆಲಸ ಮಾಡುವ ಮಾಲಿಕ ರಜತ್ ಅಣ್ಣಯ್ಯ ಎಂಬವರ ಮೋಟಾರ್ ಸೈಕಲಿನಲ್ಲಿ ಶ್ರೀಮಂಗಲದಿಂದ ಗೋಣಿಕೊಪ್ಪದ ಕಡೆಗೆ ಬರುತ್ತಿದ್ದಾಗ ಗೋಣಿಕೊಪ್ಪ ನಗರದ ಕಾಫಿ ಬೋರ್ಡ್ ಬಳಿ ಎದುರುಗಡೆಯಿಂದ ಬಂದ ಮೋಟಾರ್‍ ಸೈಕಲ್ ಡಿ.ಗಣೇಶ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿಯಾದ ಪರಿಣಾಮ ಡಿ.ಗಣೇಶ್‍ರವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.