Crime News

ವಾಹನ ಅಪಘಾತ

           ದಿನಾಂಕ 19-05-2019 ರಂದು ಪಿರಿಯಾಪಟ್ಟಣ ತಾಲೋಕಿನ ಪ್ರದೀಪ ಎಂಬುವವರು ಪ್ರತುರವರ ಮೋಟಾರು ಸೈಕಲಿನಲ್ಲಿ ಸ್ನೇಹಿತ ಸುಬ್ಬರವರೊಂದಿಗೆ ತಿತಿಮತಿಗಾಗಿ ಪಾಲಿಬೆಟ್ಟಕ್ಕೆ ಹೋಗುತ್ತಿರುವಾಗ ಪಾಲಿಬೆಟ್ಟದ ಟಾಟಾ ಕಾಫಿ ಎಸ್ಟೇಟ್ ಬಳಿ ತಲುಪುವಾಗ ಮೋಟಾರು ಸೈಕಲನ್ನು ಚಾಲನೆ ಮಾಡುತ್ತಿದ್ದ ಪ್ರತುರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲ್ ಅಪಘಾತಗೊಂಡು ಮೂವರಿಗೂ ಗಾಯವಾಗಿದ್ದು, ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕೇರಳ ಲಾಟರಿ ಟಿಕೆಟ್ ಮಾರಾಟಗಾರರ ಬಂಧನ

            ದಿನಾಂಕ 22-05-2019 ರಂದು ಬಾಡಗ ಬಾಣಂಗಾಲ ಗ್ರಾಮದ ಸಾದಿಕ್ ರವರು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಕೇರಳ ರಾಜ್ಯದ ಲಾಟರಿ ಟೆಕೆಟ್ ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದವನನ್ನು ಸಿದ್ದಾಪುರ ಠಾಣೆಯ ಪಿಎಸ್ಐ ರವರು ದಸ್ತಗಿರಿ ಮಾಡಿ ಆತನಿಂದ 30 ರೂ ಮುಖ ಬೆಲೆಯ 201 ಲಾಟರಿ ಟಿಕೆಟ್ ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕಣ ದಾಖಲಿಸಿಕೊಂಡಿರುತ್ತಾರೆ.

ವ್ಯಕ್ತಿಯ ಆತ್ಮಹತ್ಯೆ

            ವಿರಾಜಪೇಟೆ ತಾಲೋಕಿನ ಮಾಯಮುಡಿಯ ಅಂಬುಕೋಟೆ ಪೈಸಾರಿಯ ನಿವಾಸಿಯಾದ ಮಹೇಶ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 22-05-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೇರಳ ಲಾಟರಿ ಟಿಕೆಟ್ ಮಾರಾಟಗಾರರ ಬಂಧನ

            ದಿನಾಂಕ 22-05-2019 ರಂದು ಪಿರಿಯಾಪಟ್ಟಣದ ರಾಜೇಗೌಡ ಎಂಬುವವರು ಸಿದ್ದಾಪುರ ಪಾಲಿಬೆಟ್ಟ ರಸ್ತೆ ಜಂಕ್ಷನ್ ಹತ್ತಿರ  ಕೇರಳ ರಾಜ್ಯದ ಲಾಟರಿ ಟೆಕೆಟ್ ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದವನನ್ನು ಸಿದ್ದಾಪುರ ಠಾಣೆಯ ಪಿಎಸ್ಐ ರವರು ದಸ್ತಗಿರಿ ಮಾಡಿ ಆತನಿಂದ 30 ರೂ ಮುಖ ಬೆಲೆಯ 769 ಲಾಟರಿ ಟಿಕೆಟ್ ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕಣ ದಾಖಲಿಸಿಕೊಂಡಿರುತ್ತಾರೆ.

ಅಪಘಾತ ಪ್ರಕರಣ

           ದಿನಾಂಕ 22-05-2019 ರಂದು ಸೋಮವಾರಪೇಟೆ ತಾಲೋಕಿನ ಗೋಣಿಮರೂರು ಗ್ರಾಮದ ನಿವಾಸಿ ನವೀನ್ ಕುಮಾರ್ ರವರು ಸುನಿಲ್ ರವರೊಂದಿಗೆ ಮೋಟಾರು ಸೈಕಲಿನಲ್ಲಿ ಶನಿವಾರಸಂತೆಯಿಂದ ಬಾಣವಾರದ ಕಡೆಗೆ ಹೋಗುತ್ತಿರುವಾಗ ಮಾಲಂಬಿ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಎದುರಿನಿಂದ ಬಂದ ಕಾರು ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು  ಸೈಕಲಿನಲ್ಲಿ ಇದ್ದ ಇಬ್ಬರಿಗೂ ಗಾಯವಾಗಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಗಾಂಜಾ ಗಿಡ ಪತ್ತೆ

           ಕುಶಾಲನಗರದ ಬೈಚನಹಳ್ಳಿ ಗ್ರಾಮದ ಮೊಹಮ್ಮದ್ ಅನೀಸ್ ಎಂಬುವವರು ತಮ್ಮ ಮನೆಯ ಹಿಂಭಾಗದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದುದ್ದನ್ನು ಕುಶಾಲನಗರ ಪಟ್ಟಣ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿಯವರು ಪತ್ತೆಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನಿಂದ ಅಂದಾಜು 7 ಕೆ ಜಿ ಯಷ್ಟು ಹಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಪ್ರರಕಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.